Asianet Suvarna News Asianet Suvarna News

ಮಣಿಪುರದ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಭಾರತದ ತೀವ್ರ ಆಕ್ಷೇಪ

ಮಣಿಪುರದಲ್ಲಿ ಲೈಂಗಿಕ ಹಿಂಸೆ, ಕೊಲೆ, ಮನೆ ನಾಶ, ಬಲವಂತದ ಸ್ಥಳಾಂತರ ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ತಜ್ಞರ ವರದಿಯನ್ನು ಬಲವಾಗಿ ತಿರಸ್ಕರಿಸಿರುವ ಭಾರತ ‘ಮಣಿಪುರದ ಪರಿಸ್ಥಿತಿ ಶಾಂತವಾಗಿದೆ’ ಎಂದು ಪ್ರತಿಪಾದಿಸಿದೆ.

India Strongly rejecting statement of United Nations on Manipur akb
Author
First Published Sep 6, 2023, 9:30 AM IST

ವಿಶ್ವಸಂಸ್ಥೆ: ಮಣಿಪುರದಲ್ಲಿ ಲೈಂಗಿಕ ಹಿಂಸೆ, ಕೊಲೆ, ಮನೆ ನಾಶ, ಬಲವಂತದ ಸ್ಥಳಾಂತರ ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ತಜ್ಞರ ವರದಿಯನ್ನು ಬಲವಾಗಿ ತಿರಸ್ಕರಿಸಿರುವ ಭಾರತ ‘ಮಣಿಪುರದ ಪರಿಸ್ಥಿತಿ ಶಾಂತವಾಗಿದೆ’ ಎಂದು ಪ್ರತಿಪಾದಿಸಿದೆ. ಅಲ್ಲದೇ ವರದಿಯು ‘ತಪ್ಪುದಾರಿಗೆಳೆಯುವ ಮತ್ತು ಊಹೆಗಳಾಗಿದೆ’ ಎಂದಿದೆ. ವಿಶ್ವಸಂಸ್ಥೆಯ ವರದಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾನವ ಹಕ್ಕುಗಳ ಆಯೋಗ ‘ಮಣಿಪುರದ ಸ್ಥಿತಿ ಶಾಂತ ಮತ್ತು ಸ್ಥಿರವಾಗಿದೆ. ಅಲ್ಲದೇ ಮಣಿಪುರ ಸೇರಿದಂತೆ ಭಾರತದ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತು ಶಾಂತಿ ಕಾಪಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದೆ. ಕಳೆದ 4 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರ ಕುರಿತು ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆಯ ತಜ್ಞರು ಈ ಬಗ್ಗೆ ಭಾರತಕ್ಕೆ ಮುಜುಗರವೆನಿಸುವಂತ ವರದಿ ನೀಡಿದ್ದರು. 

ದಿಲ್ಲಿ ಜಿ20 ಸಭೆಗೂ ಮುನ್ನ ಜಿಲ್‌ಗೆ ಕೋವಿಡ್‌ ಸೋಂಕು:

ವಾಷಿಂಗ್ಟನ್‌: ಭಾರತದಲ್ಲಿ ಸೆ.9-10ರಂದು ನಡೆಯುವ ಜಿ20 ಶೃಂಗ ಸಭೆಗೆ ಆಗಮಿಸಬೇಕಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಪತ್ನಿ ಜಿಲ್‌ ಬೈಡೆನ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದೆ. ಆದರೆ ಜೋ ಬೈಡೆನ್‌ ಕೋವಿಡ್‌ನಿಂದ ಪಾರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಜಿಲ್‌ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದು, ಕಡಿಮೆ ಲಕ್ಷಣ ಇದೆ ಎಂದು ಶ್ವೇತ ಭವನ ಸೋಮವಾರ ರಾತ್ರಿ ತಿಳಿಸಿದೆ. ಜೋ ಬೈಡೆನ್‌ ಅವರು ಪ್ರತಿ ದಿನ ಪರೀಕ್ಷೆಗೆ ಒಳಗಾಗುತ್ತಾರೆ. ಒಂದು ವೇಳೆ ಪಾಸಿಟಿವ್‌ ಆದರೆ ಭಾರತಕ್ಕೆ ಬರುವುದು ಅನುಮಾನ ಎನ್ನಲಾಗಿದೆ.

Manipur violence: ಮಣಿಪುರದ ಸ್ಥಿತಿಗೆ ವೋಟ್‌ ಬ್ಯಾಂಕ್‌ ರಾಜಕಾರಣ ಕಾರಣ: ಸೂಲಿಬೆಲೆ

370ನೇ ವಿಧಿ ರದ್ಧತಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ:  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಮುಗಿಸಿರುವ ಸುಪ್ರೀಂಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಸತತ 16 ದಿನಗಳ ಕಾಲ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತ್ತು. ಸಿಜೆಐ ಡಿ.ವೈ.ಚಂದ್ರಚೂಡ್‌ ಅವರನ್ನು ಒಳಗೊಂಡ 5 ಜನರ ಸಾಂವಿಧಾನಿಕ ಪೀಠ ಈ ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದು, ಮುಂದಿನ 3 ದಿನಗಳಲ್ಲಿ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಲು ಅರ್ಜಿದಾರರಿಗೆ ಅವಕಾಶವನ್ನು ನೀಡಿದೆ. ಹಾಗೆಯೇ ಈ ಪ್ರತಿಕ್ರಿಯೆ 2 ಪುಟ ಮೀರಬಾರದೂ ಎಂದು ಸಹ ತಿಳಿಸಿದೆ. 370ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲಾ ಅರ್ಜಿಗಳನ್ನು ಒಗ್ಗೂಡಿಸಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತ್ತು.

ಇನ್ನು ಇದೇ ವೇಳೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕ ಮೊಹಮದ್‌ ಅಕ್ಬರ್‌ ಲೋನ್‌ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದರು. ಲೋನ್‌ ಅವರು ಸಹ 370ನೇ ವಿಧಿ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವರಲ್ಲಿ ಪ್ರಮುಖರು.

ಸ್ವಾತಂತ್ರ್ಯ ಸಂಭ್ರಮದಲ್ಲಿ ಮಣಿಪುರ, 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನ! 

Follow Us:
Download App:
  • android
  • ios