ವೋಟ್‌ ಬ್ಯಾಂಕ್‌ ರಾಜಕಾರಣ ಮಣಿಪುರದ ಇಂದಿನ ಸಮುದಾಯಗಳ ಸಂಘರ್ಷದ ದುಸ್ಥಿತಿಗೆ ಕಾರಣವಾಗಿದೆ ಎಂದು ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರ (ಆ.19) :  ವೋಟ್‌ ಬ್ಯಾಂಕ್‌ ರಾಜಕಾರಣ ಮಣಿಪುರದ ಇಂದಿನ ಸಮುದಾಯಗಳ ಸಂಘರ್ಷದ ದುಸ್ಥಿತಿಗೆ ಕಾರಣವಾಗಿದೆ ಎಂದು ಯುವ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪ್ರಜ್ಞ ಕಾವೇರಿ ಆಶ್ರಯದಲ್ಲಿ ನಡೆದ ‘ಉರಿಯುತ್ತಿದೆ ಮಣಿಪುರ ಏನಿದಕ್ಕೆ ಪರಿಹಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಯೋಗ ಶಾಲೆಯನ್ನಾಗಿ ಮಣಿಪುರವನ್ನು ಬಳಸುವ ಪ್ರಯತ್ನ ಕೆಲವರಿಂದ ನಡೆದಿದ್ದು ಇದೇ ರೀತಿ ಮುಂದುವರಿದಲ್ಲಿ ದೇಶದ ವಿವಿಧಡೆ ಅಂತಹ ಘಟನೆಗಳು ಮರುಕಳಿಸುವ ಆತಂಕ ವ್ಯಕ್ತಪಡಿಸಿದರು.

ಮೋದಿ ಪ್ರಧಾನಿಯಾದ ಮೇಲೆ ಭಾರತವನ್ನು ಬೇರೆ ದೇಶಗಳು ನೋಡುವ ದೃಷ್ಟಿ ಬದಲಾಗಿದೆ: ಸೂಲಿಬೆಲೆ

ಮಣಿಪುರದ ಮೈತೆಯಿ, ಕುಕೀ ಸಮುದಾಯಗಳ ನಡುವೆ ನಾಗರಿಕ ಹೋರಾಟ ಸಂಘರ್ಷಕ್ಕೆ ನಾಂದಿಯಾಗಿದ್ದು ಹಿಂದಿನ ರಾಜಕೀಯ ಪಕ್ಷಗಳು ಘಟನೆಯನ್ನು ವೋಟ್‌ ಬ್ಯಾಂಕ್‌ ಆಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿದ ಸೂಲಿಬೆಲೆ, ಕೇಂದ್ರ ಸರ್ಕಾರ ಮಣಿಪುರದಲ್ಲಿ ಮತ್ತೆ ಗಲಭೆ ಸಂಭವಿಸದಂತೆ ಕಾರ್ಯಯೋಜನೆ ರೂಪಿಸುತ್ತಿದೆ ಎಂದು ಹೇಳಿದರು. ಮಣಿಪುರದ ಗಡಿಭಾಗದ ದೇಶಗಳ ಜೊತೆ ಕೇಂದ್ರ ಸರ್ಕಾರ ಚರ್ಚಿಸಿ ನುಸುಳುಕೋರರು ಗಡಿಭಾಗದಿಂದ ನುಗ್ಗಿ ಗಲಭೆ ನಡೆಸದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಚಿಂತನೆ ಹರಿಸಿದೆ ಎಂದರು.

ಮಣಿಪುರದ ಪ್ರಮುಖರಾದ ಮೋತಿಮಾಲ ಗ್ಯಾಂಗಮ್‌ ಅವರು ಮಾತನಾಡಿ, ಮಣಿಪುರದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ, ಮೃಗಿಯ ವರ್ತನೆ ನಿರಂತರವಾಗಿ ನಡೆಯುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಯುವ ಬ್ರಿಗೇಡ್‌ಗೆ ಗುಡ್‌ ನ್ಯೂಸ್‌: ಟಿ.ನರಸೀಪುರ ವೇಣುಗೋಪಾಲ್‌ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್‌ ಅನುಮತಿ

ಸಭೆಯಲ್ಲಿ ಪಾಲ್ಗೊಂಡಿದ್ದ ಇನ್ನೋರ್ವ ಅತಿಥಿ ಡಾ. ಉಮ್ಮಿ ಮಾಯಿಬಾನೆ ಮಣಿಪುರದ ಸ್ಥಿತಿಗತಿಗಳ ಬಗ್ಗೆ ವಿವರ ನೀಡಿ ಪ್ರತಿ ಮನೆಯಲ್ಲಿ ಮಹಿಳೆಯರು ರಕ್ಷಣೆಗಾಗಿ ನಿತ್ಯ ಪರಿತಪಿಸುವಂತಾಗಿದೆ. ಶಾಂತಿ ನೆಮ್ಮದಿಗಾಗಿ ನಾಗರಿಕರು ಹಾತೊರೆಯುವಂತಾಗಿದೆ ಎಂದರು. ಪ್ರಜ್ಞ ಕಾವೇರಿ ಅಧ್ಯಕ್ಷರಾದ ಮಡಿಕೇರಿಯ ಜಿ.ಟಿ. ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.