Asianet Suvarna News Asianet Suvarna News

ವಿವೋಗೆ ಸಂಕಷ್ಟ: 1.5 ಕೋಟಿ ಡಾಲರ್ ಮೌಲ್ಯದ 27 ಸಾವಿರ ಸ್ಮಾರ್ಟ್‌ಫೋನ್‌ ರಫ್ತು ನಿಲ್ಲಿಸಿದ ಕೇಂದ್ರ ಸರ್ಕಾರ..!

ಸ್ಮಾರ್ಟ್‌ಫೋನ್‌  ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಮೇಲೆ ವಿವೋ ಸ್ಮಾರ್ಟ್‌ಫೋನ್‌ಗಳ ರಫ್ತಿಗೆ ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. 

india stops export of 27 thousand vivo smartphones worth 15 million dollars
Author
First Published Dec 7, 2022, 12:47 PM IST

ಭಾರತದಿಂದ (India) ಇತರೆ ದೇಶಗಳ (Countries) ಮಾರುಕಟ್ಟೆಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು (Smartphone) ರಫ್ತು (Export) ಮಾಡುವ ಚೀನಾದ (China) ಪ್ಲ್ಯಾನ್‌ಗೆ ಹಿನ್ನೆಡೆಯಾಗಿದೆ. ಏಕೆಂದರೆ, ಕೇಂದ್ರ ಸರ್ಕಾರದ ಅಧಿಕಾರಿಗಳು (Central Government Officials) ಕಳೆದ ವಾರದಿಂದ 27 ಸಾವಿರ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿದೆ. ಭಾರತದಿಂದ ನೆರೆಯ ದೇಶಗಳಿಗೆ ಮಾರುಕಟ್ಟೆ ಮಾಡುವ ಪ್ಲ್ಯಾನ್‌ಗೆ ಹೊಡೆತ ಬಿದ್ದಿದೆ. ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿಯ ಭಾರತ ಘಟಕದಿಂದ ತಯಾರಿಸಲ್ಪಟ್ಟ ಸ್ಮಾರ್ಟ್‌ಫೋನ್‌ಗಳನ್ನು ಹೊಸ ದೆಹಲಿ ವಿಮಾನ ನಿಲ್ದಾಣದಲ್ಲಿ (New Delhi Airport) ತಡೆಹಿಡಿಯಲಾಗಿದೆ. 

ಸ್ಮಾರ್ಟ್‌ಫೋನ್‌  ಮಾದರಿಗಳು ಮತ್ತು ಅವುಗಳ ಮೌಲ್ಯವನ್ನು ತಪ್ಪಾಗಿ ಘೋಷಿಸಿದ ಆರೋಪದ ಮೇಲೆ ಕೆಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ಕಂದಾಯ ಗುಪ್ತಚರ ಘಟಕವು ರಫ್ತಿಗೆ ತಡೆಹಿಡಿದಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಸಾಗಣೆಯು ಸುಮಾರು $15 ಮಿಲಿಯನ್ ಅಥವಾ ಒಂದೂವರೆ ಕೋಟಿ ಡಾಲರ್‌ ಮೌಲ್ಯದ್ದಾಗಿದೆ ಎಂದೂ ಮೂಲಗಳು ತಿಳಿಸಿದ್ದರೂ, ಈ ವಿಷಯದ ಬಗ್ಗೆ ಕೆಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಣಕಾಸು ಸಚಿವಾಲಯ ಮತ್ತು ವಿವೋ ಇಂಡಿಯಾ ಈ ಕುರಿತು ಇ ಮೇಲ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೈನೀಸ್‌ ಸ್ಮಾರ್ಟ್‌ ಫೋನ್‌ಗಳಿಗೆ ಭಾರತದಲ್ಲಿ ನಿಷೇಧ?
 
ಇನ್ನು, ಸರ್ಕಾರಿ ಏಜೆನ್ಸಿಯ ಕ್ರಮಗಳನ್ನು "ಏಕಪಕ್ಷೀಯ ಮತ್ತು ಅಸಂಬದ್ಧ" ಎಂದು ಉದ್ಯಮದ ಲಾಬಿ ಗುಂಪು ಟೀಕಿಸಿದೆ. "ಈ ದುರದೃಷ್ಟಕರ ಕ್ರಮವನ್ನು ನಿಲ್ಲಿಸಲು ನಿಮ್ಮ ದಯೆ ಹಾಗೂ ತುರ್ತು ಮಧ್ಯಸ್ಥಿಕೆಯನ್ನು ನಾವು ಮನವಿ ಮಾಡುತ್ತೇವೆ" ಎಂದೂ ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್‌ ಅಧ್ಯಕ್ಷರಾದ ಪಂಕಜ್ ಮೊಹಿಂದ್ರೂ ಅವರು ಟೆಕ್ ಸಚಿವಾಲಯದ ಉನ್ನತ ಅಧಿಕಾರಿಗೆ ಡಿಸೆಂಬರ್ 2 ರಂದು ಪತ್ರ ಬರೆದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಜಾರಿ ಏಜೆನ್ಸಿಗಳ ಇಂತಹ ಅನಗತ್ಯ ಕ್ರಮಗಳು ಭಾರತದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತುಗಳನ್ನು ಉತ್ತೇಜಿಸಲು ಚಾಲನೆ ಮತ್ತು ಪ್ರೇರಣೆ ನಿಲ್ಲಿಸುತ್ತದೆ ಎಂದೂ ಅವರು ಹೇಳಿದ್ದಾರೆ.

2020 ರಲ್ಲಿ ಗಡಿಯಲ್ಲಿ ಘರ್ಷಣೆ ಮಾಡಿದ ನಂತರ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಗಳು ಹೆಚ್ಚಾದವು. SAIC ಮೋಟಾರ್ ಕಾರ್ಪ್ ಲಿಮಿಟೆಡ್‌ನ MG ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು Xiaomi ಕಾರ್ಪೊರೇಷನ್‌ ಮತ್ತು ZTE ಕಾರ್ಪ್‌ನ ಸ್ಥಳೀಯ ಘಟಕಗಳು ಸೇರಿದಂತೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಕಂಪನಿಗಳ ಪರಿಶೀಲನೆಯನ್ನು ಕೇಂದ್ರ ಸರ್ಕಾರವು ತೀವ್ರಗೊಳಿಸಿದೆ.

ಇದನ್ನೂ ಓದಿ: ಭಾರತದಿಂದ ಪಲಾಯನ ಮಾಡಿದ ವಿವೋ ಕಂಪನಿ ನಿರ್ದೇಶಕರು?

ಈ ಮಧ್ಯೆ, ಕೇಂದ್ರ ಸರ್ಕಾರವು ಸ್ಮಾರ್ಟ್‌ಫೋನ್‌ ರಫ್ತುಗಳನ್ನು ಹೆಚ್ಚಿಸಲು ಮತ್ತು ಸ್ಥಳೀಯ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಪ್ರೋತ್ಸಾಹ ನೀಡುತ್ತಿದ್ದರೂ, ವಿಮಾನ ನಿಲ್ದಾಣದಲ್ಲಿ ವಿವೋ ಸಾಗಣೆ ನಿರ್ಬಂಧ ಮಾಡಿರುವುದು ದೇಶದ ಇತರ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳನ್ನು ಸಹ ಎದೆಗುಂದಿಸುವ ಸಾಧ್ಯತೆಯಿದೆ. ಮಾರ್ಚ್ 2026 ರ ಅಂತ್ಯದ ವೇಳೆಗೆ 120 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಫ್ತು ಮಾಡುವ ಭಾರತದ ಮಹತ್ವಾಕಾಂಕ್ಷೆಯ ಗುರಿಯನ್ನು ಸಹ ಇದು ತಲೆ ಕೆಳಗೆ ಮಾಡಬಹುದು.
 
ವಿವೋ ತನ್ನ ಮೊದಲ ಬ್ಯಾಚ್‌ನ ಭಾರತ-ನಿರ್ಮಿತ ಸ್ಮಾರ್ಟ್‌ಫೋನ್‌ಗಳನ್ನು ನವೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾ ಮತ್ತು ಥೈಲ್ಯಾಂಡ್‌ನಂತಹ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. ಆದರೆ ಇತ್ತೀಚಿನ ಈ ನಿರ್ಬಂಧ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಭಾರತದಲ್ಲಿ ವಿವೋದ ಭವಿಷ್ಯವನ್ನು ಮಸುಕಾಗಿಸಬಹುದು. ಕಂಪನಿಯು ಈಗಾಗಲೇ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪರಿಶೀಲನೆಯಲ್ಲಿದೆ. ಆದರೆ, ನ್ಯಾಯಾಲಯದಲ್ಲಿ ಈ ಆರೋಪ ಇನ್ನೂ ಸಾಬೀತಾಗಿಲ್ಲ.

ಇದನ್ನೂ ಓದಿ: ಚೀನಾ ಮೂಲದ ವಿವೋ ಮೇಲೆ ಇ.ಡಿ. ದಾಳಿ!

Follow Us:
Download App:
  • android
  • ios