* 12-14 ವರ್ಷದವರಿಗೆ ಲಸಿಕಾರಣ ಆರಂಭ * ಮೊದಲ ದಿನ 2.11 ಲಕ್ಷ ಡೋಸ್ ವಿತರಣೆ* ಭಾರತ ಲಸಿಕಾಕರಣ ವಿಜ್ಞಾನಾಧರಿತ, ಜನಾಧರಿತ: ಮೋದಿ*ಅತಿದೊಡ್ಡ ಲಸಿಕಾ ಅಭಿಯಾನ ನಡೆಸಿದ್ದ ಭಾರತ
ನವದೆಹಲಿ(ಮಾ. 17) 12-14ರ ವಯೋಮಾನದ ಮಕ್ಕಳಿಗೆ ಲಸಿಕೆ (Vaccine) ನೀಡುವ ಅಭಿಯಾನ ಬುಧವಾರ ಮಧ್ಯಪ್ರದೇಶ (Madya Pradesh) ಹೊರತುಪಡಿಸಿ ದೇಶಾದ್ಯಂತ ಆರಂಭವಾಗಿದೆ. ಮೊದಲ ದಿನ 2.11 ಲಕ್ಷ ಡೋಸ್ ವಿತರಣೆ ಮಾಡಲಾಗಿದೆ.
ಇದೇ ವೇಳೆ, ಯಾವುದೇ ಪೂರ್ವ ರೋಗ ಇಲ್ಲದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ (ಮುಂಜಾಗ್ರತಾ) ಡೋಸ್ ನೀಡಲು ಆರಂಭಿಸಲಾಗಿದೆ.
ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಿದರೆ, ಬೂಸ್ಟರ್ ಡೋಸ್ ಆಗಿ ಈ ಹಿಂದೆ ಪಡೆದಿರುವ ಲಸಿಕೆಯನ್ನೇ ನೀಡಲಾಗುತ್ತಿದೆ. ಮಾ.1,2021ರ ದತ್ತಾಂಶಗಳ ಪ್ರಕಾರ ದೇಶದಲ್ಲಿ ಈ ವಯೋಮಾನದ 4.7 ಕೋಟಿ ಮಕ್ಕಳಿದ್ದಾರೆ.
ಲಸಿಕೆ ಪಡೆಯಿರಿ- ಮೋದಿ: ಈ ಬಗ್ಗೆ ಮಾತನಾಡಿದ ಪ್ರಧಾನಿ (Narendra Modi) ಮೋದಿ, ‘ಭಾರತದ ಕೋವಿಡ್ ಲಸಿಕೆ ಅಭಿಯಾನವು ವಿಜ್ಞಾನ ಆಧರಿತ ಹಾಗೂ ಜನಾಧರಿತವಾಗಿದೆ. ದೇಶವು ಕೊರೋನಾ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡುವಲ್ಲಿ ಉತ್ತಮ ಸ್ಥಿತಿಯಲ್ಲಿದೆ ಆದರೆ, ಎಲ್ಲರೂ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು. ಕೋವಿಡ್ ಲಸಿಕೆ ನೀಡುವ ಭಾರತದ ಪ್ರಯತ್ನದಲ್ಲಿ ಇಂದು ಮಹತ್ವದ ದಿನ. 12-14 ವರ್ಷದೊಳಗಿನ ಯುವ ಸಮುದಾಯ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು 60 ವರ್ಷ ಮೇಲ್ಪಟ್ಟವರೆಲ್ಲರೂ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ನಾನು ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ
Coronavirus: ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ ಪ್ರಕರಣ, ಮತ್ತೊಂದು ಎಚ್ಚರಿಕೆ ಕೊಟ್ಟ WHO
ಚೀನಾದಲ್ಲಿ(China) ಕೋವಿಡ್ ಹೆಚ್ಚಳ: ಕೇಂದ್ರದ ಎಚ್ಚರಿಕೆ: ಚೀನಾ, ಪೂರ್ವ ಏಷ್ಯಾ ರಾಷ್ಟ್ರಗಳು ಮತ್ತು ಯುರೋಪ್‌ನಲ್ಲಿ ಕೋವಿಡ್ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಹೆಚ್ಚಾಗುತ್ತಿರುವುದರಿಂದ ಉನ್ನತ ಮಟ್ಟದ ಸಭೆ ನಡೆಸಿದ ಮಾಂಡವೀಯ ಅವರು, ಅಂತಾರಾಷ್ಟ್ರೀಯ ವಿಮಾನ ಪುನಾರಂಭ, ಲಸಿಕಾಕರಣದ ಪರಿಸ್ಥಿತಿ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಮೇಲೆ ಕಣ್ಗಾವಲು ಕುರಿತಾಗಿ ಚರ್ಚೆ ನಡೆಸಿದರು.
‘ಚೀನಾ, ಸಿಂಗಾಪುರ್, ಹಾಂಗ್‌ಕಾಂಗ್, ವಿಯೆಟ್ನಾಂ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಹಾಗಾಗಿ ಜಾಗರೂಕರಾಗಿರಬೇಕು ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಪರಿಣಾಮಕಾರಿಯಾಗಿ ನಡೆಸಬೇಕು’ ಎಂದು ಹೇಳಿದರು.
ಈ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಡಾ.ರಾಜೇಶ್ ಗೋಖಲೆ, ಏಮ್ಸ್‌ನ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಸೇರಿದಂತೆ ಹಲವು ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.
