Asianet Suvarna News Asianet Suvarna News

ಸೆಪ್ಟೆಂಬರ್‌ನಲ್ಲಿ Gen Bipin Rawat ಭೇಟಿಯಾಗಿದ್ದನ್ನು ನೆನಪಿಸಿಕೊಂಡ ಅಮೆರಿಕದ ರಕ್ಷಣಾ ಕಾರ್ಯದರ್ಶಿ!

* ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ನಿಧನ

* ಐಎಎಫ್‌ ಚಾಪರ್‌ನಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿಯಲ್ಲಿ 13 ಮಂದಿ ಸಾವು

* ಬಿಪಿನ್ ರಾವತ್ ಭೇಟಿ ನೆನಪಿಸಿಕೊಂಡ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ

US Antony Blinken Defence Secretary Austin mourn demise of Gen Bipin Rawat pod
Author
Bangalore, First Published Dec 9, 2021, 8:56 AM IST
  • Facebook
  • Twitter
  • Whatsapp

ನವದೆಹಲಿ(ಡಿ.09): ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ (India's first Chief of Defence Staff General Bipin Rawat) ಅವರ ನಿಧನಕ್ಕೆ ವಿಶ್ವದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಪಿನ್ ರಾವತ್ ನಿಧನಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ (US Secretary of State Antony Blinken), ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ (Defence Secretary Lloyd Austin), ರಕ್ಷಣಾ ಸಚಿವಾಲಯದ ಪೆಂಟಗನ್ ಮತ್ತು ಅಮೆರಿಕದ ಜಂಟಿ ಮುಖ್ಯಸ್ಥರ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲಿ ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಕೂನೂರಿನ ನೀಲಗಿರಿಯ ದಟ್ಟ ಅರಣ್ಯದಲ್ಲಿ ಡಿಸೆಂಬರ್ 8 ರ ಮಧ್ಯಾಹ್ನ ಸೇನಾ ಹೆಲಿಕಾಪ್ಟರ್ MI-17 V-5 (MI-17 V-5 Helicopter) ಅಪಘಾತಕ್ಕೀಡಾಗಿತ್ತೆಂಬುವುದು ಉಲ್ಲೇಖನೀಯ. ಇದರಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 30, 2021 ರಂದು, ರಕ್ಷಣಾ ಮುಖ್ಯಸ್ಥ (CDS) ವಿಪಿನ್ ರಾವತ್ ಅವರು US ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ವಾಷಿಂಗ್ಟನ್‌ನಲ್ಲಿ ಭೇಟಿಯಾದಾಗ ತೆಗೆದ ಫೋಟೋ.

ಅಸಾಧಾರಣ ನಾಯಕತ್ವದ ಸಾಮರ್ಥ್ಯಗಳನ್ನು ಹೊಂದಿದ್ದರು

ಯುಎಸ್ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ತಮ್ಮ ಸಂತಾಪ ಸಂದೇಶದಲ್ಲಿ ಜನರಲ್ ರಾವತ್ ಅವರ ಅಸಾಧಾರಣ ನಾಯಕತ್ವ ಸಾಮರ್ಥ್ಯಕ್ಕಾಗಿ ನಾವು ಯಾವಾಗಲೂ ಸ್ಮರಿಸುತ್ತೇವೆ. ಅವರು ತಮ್ಮ ದೇಶಕ್ಕೆ ಸೇವೆ ಸಲ್ಲಿಸಿದರು ಮತ್ತು ಯುಎಸ್-ಭಾರತ ಸಂಬಂಧಗಳನ್ನು ಹೆಚ್ಚಿಸಲು ಕೆಲಸ ಮಾಡಿದರು.

ಭಾರತ-ಅಮೆರಿಕ ರಕ್ಷಣಾ ಪಾಲುದಾರಿಕೆಯಲ್ಲಿ ಜನರಲ್ ರಾವತ್ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಆಸ್ಟಿನ್ ಈ ವರ್ಷ ರಾವತ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

ಇಂದು ದೆಹಲಿಗೆ ಗಣ್ಯರ ಪ್ರಾರ್ಥೀವ ಶರೀರ

ಗುರುವಾರ ಸಂಜೆ ವೇಳೆಗೆ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಪಾರ್ಥಿವ ಶರೀರವನ್ನು ಸೇನಾ ವಿಮಾನದ ಮೂಲಕ ದೆಹಲಿಗೆ ತರಲಾಗುವುದು. ಶುಕ್ರವಾರ ಪತಿ-ಪತ್ನಿಯರ ಮೃತದೇಹಗಳನ್ನು ಅವರವರ ಮನೆಗೆ ತಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಜನರ ಅಂತಿಮ ದರ್ಶನಕ್ಕೆ ಇಡಲಾಗುವುದು. ಇದರ ನಂತರ, ಅಂತಿಮ ಯಾತ್ರೆಯನ್ನು ಕಾಮರಾಜ್ ಮಾರ್ಗದಿಂದ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಚೌರಾ ಸ್ಮಶಾನಕ್ಕೆ ತೆಗೆದುಕೊಳ್ಳಲಾಗುತ್ತದೆ. ಅಂತ್ಯಕ್ರಿಯೆ ಇಲ್ಲಿಯೇ ನಡೆಯಲಿದೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರ ನಿಧನದ ನಂತರ, ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಚಂಡಿ ಪ್ರಸಾದ್ ಮೊಹಾಂತಿ ಅವರು ತಮ್ಮ ಎರಡು ದಿನಗಳ ಕತಾರ್ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ಮರಳುತ್ತಿದ್ದಾರೆ.

ಆಗಿದ್ದೇನು?

ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಮಿಳುನಾಡಿನ ಕೂನೂರು ಬಳಿ ಬುಧವಾರ ಭೀಕರವಾಗಿ ಪತನಗೊಂಡಿದೆ. ಜನರಲ್‌ ರಾವತ್‌, ಅವರ ಪತ್ನಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಪೈಕಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಸೇನೆಯ ಅತ್ಯುನ್ನತ ನಾಯಕರೊಬ್ಬರು ಈ ರೀತಿಯ ಅವಘಡದಲ್ಲಿ ಸಾವಿಗೀಡಾಗಿದ್ದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಘಟನೆಯಲ್ಲಿ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಅವರ ದೇಹವು ಶೇ.90ರಷ್ಟುಸುಟ್ಟಿದ್ದು, ವೆಲ್ಲಿಂಗ್ಟನ್‌ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಮೃತರ ಪಾರ್ಥಿವ ಶರೀರಗಳನ್ನು ದಿಲ್ಲಿಗೆ ಗುರುವಾರ ಕರೆತರುವ ಸಾಧ್ಯತೆ ಇದ್ದು, ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಹೆಲಿಕಾಪ್ಟರ್‌ ಪತನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜನಾಥ ಸಿಂಗ್‌ ಅವರು ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ರಾತ್ರಿ ರಕ್ಷಣಾ ವ್ಯವಹಾರಗಳ ಸಂಪುಟ ಸಭೆಯಲ್ಲಿ ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಲಾಗಿದೆ. ಈ ನಡುವೆ, ವಾಯುಪಡೆ ಮುಖ್ಯಸ್ಥ ವಿ.ಆರ್‌. ಚೌಧರಿ ಅವರು ತಮಿಳುನಾಡಿನ ಸೂಲೂರಿಗೆ ದೌಡಾಯಿಸಿದ್ದಾರೆ. ಅತ್ತ ದೆಹಲಿಯಲ್ಲಿ ರಾವತ್‌ ಮನೆಗೆ ರಾಜನಾಥ್‌ ಹಾಗೂ ಸೇನಾ ಮುಖ್ಯಸ್ಥ ಜನರಲ್‌ ನರವಣೆ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ನಡುವೆ, ರಾಜನಾಥ ಸಿಂಗ್‌ ಅವರು ಸಂಸತ್ತಿನಲ್ಲಿ ಗುರುವಾರ ಹೇಳಿಕೆ ನೀಡುವ ನಿರೀಕ್ಷೆ ಇದೆ.

Follow Us:
Download App:
  • android
  • ios