ನವದೆಹಲಿ(ಸೆ.04):  ಕಳೆದ ಹಲವು ತಿಂಗಳಿನಿಂದ ಭಾರತ ಹಾಗೂ ಚೀನಾ ಗಡಿ ಉದ್ವಿಘ್ನಗೊಂಡಿದೆ. ಚೀನಾ ಯೋಧರು ಹಲವು ಬಾರಿ ಗಡಿ ನಿಯಂತ್ರಣ ರೇಖೆಯ ಯಥಾ ಸ್ಥಿತಿ ನಿಯಮ ಉಲ್ಲಂಘಿಸೋ ಮೂಲಕ ಯುದ್ಧದ ವಾತಾವರಣ ನಿರ್ಮಿಸಿದ್ದರು. ಇತ್ತೀಚೆಗೆ ಪ್ಯಾಂಗಾಂಗ್ ಸರೋವರದ ಬಳಿ ಒಳನುಸುಳುವ ಯತ್ನ ಮಾಡಿತ್ತು. ಭಾರತ ಇದೀಗ ಲಡಾಖ್ ಗಡಿ ಪ್ರಾಂತ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. ಇದರ ನಡುವೆ ಈ ಬಿಕ್ಕಟ್ಟಿನ ಲಾಭ ಪಡೆಯಲು ಪಾಕಿಸ್ತಾನ ಮುಂದಾದರೆ ಪರಿಣಾಣ ಎದುರಿಸಬೇಕಾದಿತು ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾದಲ್ಲಿ ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ!

ಯುಎಸ್ ಇಂಡಿಯಾ ಸ್ಟ್ರೆಟಜಿಕ್ ಫೋರಂನಲ್ಲಿ ಮಾತನಾಡಿದ ಬಿಪಿನ್ ರಾವತ್, ಪರಿಸ್ಥಿತಿಯ ಲಾಭ ಪಡೆಯಲು ಇಸ್ಲಾಮಾಬಾದ್ ಮುಂದಾದರೆ ಎಲ್ಲವನ್ನೂ ಕಳೆದಕೊಳ್ಳಲಿದ್ದೀರಿ. ಪಾಕಿಸ್ತಾನದ ಯಾವುದೇ ಮಿಶನ್ ಯಶಸ್ವಿಯಾಗುವುದಿಲ್ಲ. ಇಷ್ಟೇ ಅಲ್ಲ ಅತೀವ ನಷ್ಟ ಅನುಭವಿಸಬೇಕಾದಿತು ಎಂದು ರಾವತ್ ಹೇಳಿದ್ದಾರೆ. 

ಸೇನೆ ಬಳಸಿ ಚೀನಾ ಗಡಿ ಖ್ಯಾತೆ ಬಗೆಹರಿಸಲು ಭಾರತ ಮುಕ್ತವಾಗಿದೆ: ತೀಕ್ಷ್ಣ ಎಚ್ಚರಿಕೆ ನೀಡಿದ CDS ರಾವತ್!

ಪಾಕಿಸ್ತಾನ ಈಗಾಗಲೇ ಉಗ್ರರನ್ನು ಭಾರತದೊಳಕ್ಕೆ ನುಗ್ಗಿಸುವ ಯತ್ನ ಮಾಡುತ್ತಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡುವ ಯತ್ನವನ್ನು ಪಾಕಿಸ್ತಾನ ಮಾಡುತ್ತಲೇ ಬಂದಿದೆ. ಇದೀಗ ಲಡಾಖ್ ಪ್ರಾಂತ್ಯದ ಗಡಿ ಸಮಸ್ಯೆ ಸಂದರ್ಭದಲ್ಲಿ ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾದರೆ, ತಕ್ಕ ತಿರುಗೇಟು ನೀಡಲಿದ್ದೇವೆ. ಬಳಿಕ ಪಾಕಿಸ್ತಾನ ಮತ್ತೆಂದಿಗೂ ಬಾಲ ಬಿಚ್ಚುವುದಿಲ್ಲ ಎಂದು ಬಿಪಿನ್ ರಾವತ್ ಎಚ್ಚರಿಸಿದ್ದಾರೆ.