ಒಡಿಶಾ ಕೋನಾರ್ಕ್ ಚಕ್ರದ ಮುಂದೆಯೇ ವಿಶ್ವದ ನಾಯಕರಿಗೆ ಪ್ರಧಾನಿ ಮೋದಿ ಸ್ವಾಗತ: ಕಾಲ ಚಕ್ರದ ಮಹಿಮೆ ಹೀಗಿದೆ ನೋಡಿ..
ಜಿ- 20 ಸಭೆಗೆ ಬಂದಿರುವ ಎಲ್ಲ ನಾಯಕರಿಗೂ ಪ್ರಧಾನಿ ಮೋದಿ ಒಡಿಶಾದ ಕೊನಾರ್ಕ್ ಚಕ್ರದ ಮುಂದೆಯೇ ಹಸ್ತಲಾಘವ ಕೋರಿ ಸ್ವಾಗತ ಕೋರುತ್ತಿದ್ದಾರೆ.
ನವದೆಹಲಿ (ಸೆಪ್ಟೆಂಬರ್ 9, 2023): ಇಂದಿನಿಂದ ಐತಿಹಾಸಿಕ ಜಿ20 ಶೃಂಗಸಭೆ ನವದೆಹಲಿಯಲ್ಲಿ ಆರಂಭವಾಗಿದೆ. ಬೆಳಗ್ಗೆ 10.30 ರಿಂದ G-20 ಅಧಿಕೃತ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಅದಕ್ಕೂ ಮುನ್ನ ಪ್ರಧಾನಿ ಮೋದಿ ಎಲ್ಲ ನಾಯಕರ್ನು ಹಸ್ತಲಾಘವ ಮಾಡಿದ್ದಾರೆ. ಇನ್ನು, ಜಿ20 ಶೃಂಗಸಭೆಯಲ್ಲಿ ನಟರಾಜನ ಪ್ರತಿಕೃತಿ ಜತೆಗೆ ಒಡಿಶಾದ ಕೋನಾರ್ಕ್ ಚಕ್ರವನ್ನೂ ಪ್ರದರ್ಶಿಸಲಾಗಿದೆ.
ಹಾಗೂ, ಜಿ- 20 ಸಭೆಗೆ ಬಂದಿರುವ ಎಲ್ಲ ನಾಯಕರಿಗೂ ಪ್ರಧಾನಿ ಮೋದಿ ಒಡಿಶಾದ ಕೊನಾರ್ಕ್ ಚಕ್ರದ ಮುಂದೆಯೇ ಹಸ್ತಲಾಘವ ಕೋರಿ ಸ್ವಾಗತ ಕೋರುತ್ತಿದ್ದಾರೆ. ಇನ್ನು, ಕೋನಾರ್ಕ್ ಚಕ್ರದ ಮಹಿಮೆ ಎನು ಅಂತೀರಾ..? ಇಲ್ಲಿದೆ ನೋಡಿ..
ಇದನ್ನು ಓದಿ: ವಿಶ್ವದ ದೊಡ್ಡಣ್ಣನಿಗೆ ಅದ್ಧೂರಿ ಔತಣಕೂಟ: ಚಂದ್ರಯಾನ -3 ಯಶಸ್ಸಿಗೆ ಮೋದಿ, ಭಾರತೀಯರ ಶ್ಲಾಘಿಸಿದ ಜೋ ಬೈಡೆನ್
ಕೊನಾರ್ಕ್ ಚಕ್ರವನ್ನು 13 ನೇ ಶತಮಾನದಲ್ಲಿ ರಾಜ ನರಸಿಂಹದೇವ-I ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. 24 ಕಡ್ಡಿಗಳನ್ನು ಹೊಂದಿರುವ ಚಕ್ರವನ್ನು ಭಾರತದ ರಾಷ್ಟ್ರೀಯ ಧ್ವಜಕ್ಕೆ ಅಳವಡಿಸಲಾಗಿದೆ. ಇದು ಭಾರತದ ಪ್ರಾಚೀನ ಬುದ್ಧಿವಂತಿಕೆ, ಮುಂದುವರಿದ ನಾಗರಿಕತೆ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಒಳಗೊಂಡಿರುತ್ತದೆ. ಕೊನಾರ್ಕ್ ತಿರುಗುವ ಚಕ್ರ ಸಮಯ, ಕಾಲಚಕ್ರ ಜೊತೆಗೆ ಪ್ರಗತಿ ಮತ್ತು ನಿರಂತರ ಬದಲಾವಣೆ ಚಲನೆಯನ್ನು ಸಂಕೇತಿಸುತ್ತದೆ. ಇದು ಪ್ರಜಾಪ್ರಭುತ್ವದ ಚಕ್ರದ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಹಾಗೂ ಪ್ರಜಾಪ್ರಭುತ್ವದ ಆದರ್ಶಗಳ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ ಮತ್ತು ಸಮಾಜದಲ್ಲಿ ಪ್ರಗತಿಗೆ ಬದ್ಧತೆಯನ್ನು ತೋರಿಸುತ್ತದೆ.
ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಜಿ20 ಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಬೆಳಗ್ಗೆಯೇ ಆಗಮಿಸಿದ್ರು. ಗಣ್ಯರನ್ನ ಸ್ವಾಗತಿಸೋ ಸಲುವಾಗಿ ಪ್ರಧಾನಿ ಮೋದಿ ಆಗಮಿಸಿದ್ದು, ಮೋದಿಯನ್ನು ವಿದೇಶಾಂಗ ಸಚಿವ ಜೈಶಂಕರ್ ಸ್ವಾಗತಿಸಿದ್ದಾರೆ. ವಿವಿಧ ರಾಷ್ಟ್ರಗಳ ಪ್ರಧಾನಿಗಳು, ಅಧ್ಯಕ್ಷರು ಹಾಗೂ ಹಲವು ನಾಯಕರು ಜಿ20 ಸಭೆಗೆ ಆಗಮಿಸುತ್ತಿದ್ದು, ಅವರನ್ನು ಪ್ರಧಾನಿ ಮೋದಿ ಸ್ವಾಗತಿಸುತ್ತಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆ: 15 ದೇಶದ ಮುಖ್ಯಸ್ಥರೊಂದಿಗೆ ಮೋದಿ ಪ್ರಮುಖ ದ್ವಿಪಕ್ಷೀಯ ಸಭೆ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಬೆಳಿಗ್ಗೆ 10.30 ರಿಂದ G20 ಅಧಿಕೃತ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, 9.30 ಇಂದ ವಿವಿಧ ದೇಶದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಅವರನ್ನೆಲ್ಲ ಒಡಿಶಾದ ಕೋನಾರ್ಕ್ ಚಕ್ರದಲ್ಲಿ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ: G20 Summit: ಭಾರತವನ್ನು ಜಾಗತಿಕವಾಗಿ ಪ್ರದರ್ಶಿಸಿ ರಾಜಕೀಯ ಲಾಭ ಮಾಡಿಕೊಳ್ತಿದ್ಯಾ ಮೋದಿ ಸರ್ಕಾರ?