ಜಿ20 ಶೃಂಗಸಭೆ: 15 ದೇಶದ ಮುಖ್ಯಸ್ಥರೊಂದಿಗೆ ಮೋದಿ ಪ್ರಮುಖ ದ್ವಿಪಕ್ಷೀಯ ಸಭೆ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಸೆಪ್ಟೆಂಬರ್ 9 ರಿಂದ 10 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಹೊರತಾಗಿ, ಪ್ರಧಾನಿ ನರೇಂದ್ರ ಮೋದಿ ವಿಶ್ವಾದ್ಯಂತ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ನಾಳೆಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹತ್ವದ ಜಿ20 ಶೃಂಗಸಭೆ ನಡೆಯಲಿದೆ. ಸೆಪ್ಟೆಂಬರ್ 9 ರಿಂದ 10 ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಹೊರತಾಗಿ, ಪ್ರಧಾನಿ ನರೇಂದ್ರ ಮೋದಿ ವಿಶ್ವಾದ್ಯಂತ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಸಿದ್ಧರಾಗಿದ್ದಾರೆ.
ಜಿ- 20 ಶೃಂಗಸಭೆಗೂ ಮುನ್ನ ಅಂದ್ರೆ, ಸೆಪ್ಟೆಂಬರ್ 8 ರಂದು (ಇಂದು) ಪ್ರಧಾನಿ ಮೋದಿ ಅವರು ಮಾರಿಷಸ್, ಬಾಂಗ್ಲಾದೇಶ ಮತ್ತು ಅಮೆರಿಕ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ. ಬಳಿಕ, ನಾಳೆ ಅಂದ್ರೆ ಸೆಪ್ಟೆಂಬರ್ 9 ರಂದು, ಪ್ರಧಾನಿ ಮೋದಿ ಯುಕೆ, ಜಪಾನ್, ಜರ್ಮನಿ ಮತ್ತು ಇಟಲಿ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಹಾಗೂ, ಸೆಪ್ಟೆಂಬರ್ 10 ರಂದು, ಪ್ರಧಾನಿ ಮೋದಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಔತಣಕೂಟದೊಂದಿಗೆ ಸಭೆ ನಡೆಸಲಿದ್ದಾರೆ ಎಂದೂ ತಿಳಿದುಬಂದಿದೆ.
ಅಲ್ಲದೆ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಇಯು / ಇಸಿ, ಬ್ರೆಜಿಲ್ ಮತ್ತು ನೈಜೀರಿಯಾದೊಂದಿಗೆ ದ್ವಿಪಕ್ಷೀಯ ಸಭೆಗಳ ಜೊತೆಗೆ ಕೆನಡಾದ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸುತ್ತಾರೆ ಎಂದೂ ತಿಳಿದುಬಂದಿದೆ. ಒಟ್ಟಾರೆ, ಜಿ20 ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು ಮತ್ತು ಆಹ್ವಾನಿತ ಅತಿಥಿ ರಾಷ್ಟ್ರಗಳು ಹಾಗೂ 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದೂ ವರದಿಯಾಗಿದೆ.
G20 ಗೆ ದೆಹಲಿ ಸಜ್ಜು
ಈ ಮಧ್ಯೆ, ಜಿ 20 ಶೃಂಗಸಭೆಯ ಮುನ್ನಾದಿನದಂದು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್, ಅರೆಸೇನಾ ಪಡೆಗಳು ಮತ್ತು ಇತರ ಏಜೆನ್ಸಿಗಳು ನಗರದಲ್ಲಿ ಹಾಕ್-ಐ ಜಾಗರೂಕತೆಯನ್ನು ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾದ ಮಾರ್ಕ್ಸ್ ವುಮೆನ್ ಮತ್ತು ಸಶಸ್ತ್ರ ಪಡೆಗಳು, ಗಸ್ತು ಮತ್ತು ಗಡಿ ಪ್ರದೇಶಗಳಲ್ಲಿ ತೀವ್ರ ತಪಾಸಣೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯ ಮೊದಲು ದೆಹಲಿ ಪೊಲೀಸರು ಕೈಗೊಂಡ ಕೆಲವು ಭದ್ರತಾ ಕ್ರಮಗಳಾಗಿದೆ. ದೆಹಲಿ ಪೊಲೀಸರಿಗೆ 50,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, K9 ಶ್ವಾನದಳ ಮತ್ತು ಮೌಂಟೆಡ್ ಪೊಲೀಸರು ಸಹಾಯ ಮಾಡುತ್ತಿದ್ದಾರೆ.
ಪ್ರತಿಷ್ಠಿತ ಶೃಂಗಸಭೆಯ ವೇಳೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗಳು ಮತ್ತು ಹೋಟೆಲ್‌ಗಳಿಂದ ಜಿ20 ಶೃಂಗಸಭೆ ನಡೆಯುವ ಸ್ಥಳಗಳವರೆಗೆ ವಿದೇಶಿ ಪ್ರತಿನಿಧಿಗಳಿಗೆ ದೆಹಲಿ ಪೊಲೀಸರು ಫೂಲ್‌ಪ್ರೂಫ್ ಭದ್ರತೆಯನ್ನು ಒದಗಿಸುತ್ತಾರೆ ಎಂದೂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯವಸ್ಥೆಗಳನ್ನು ಬಲಪಡಿಸುವ ಸಲುವಾಗಿ, ದೆಹಲಿ ಪೊಲೀಸರಿಗೆ ಭಾರತೀಯ ವಾಯುಪಡೆ (IAF) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಹಾಗೂ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPF) ನಂತಹ ವಿಶೇಷ ಕೇಂದ್ರೀಯ ಸಂಸ್ಥೆಗಳು ಸಹ ನೆರವು ನೀಡುತ್ತಿವೆ.