* ಇಂದು 100 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು?* 99.7 ಕೋಟಿ ಮೀರಿದ ಡೋಸ್‌ಗಳ ಸಂಖ್ಯೆ* ಬಿಜೆಪಿಯಿಂದ ಸಂಭ್ರಮಾಚರಣೆಗೆ ಸಿದ್ಧತೆ* ಲಸಿಕಾ ಕೇಂದ್ರಕ್ಕೆ ಮೋದಿ ಭೇಟಿ ಸಾಧ್ಯತೆ* ರೈಲು, ವಿಮಾನ ನಿಲ್ದಾಣಗಲ್ಲೂ ಮೈಲಿಗಲ್ಲಿನ ಘೋಷಣೆ

ನವದೆಹಲಿ(ಅ.21): ಕೋವಿಡ್‌ ಲಸಿಕೆ(Covid 19 vaccine) ನೀಡಿಕೆ ಆರಂಭವಾದ 9 ತಿಂಗಳಲ್ಲೇ 100 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲಿಗೆ ಭಾರತ(India) ಹತ್ತಿರವಾಗಿದೆ. ಬುಧವಾರ ರಾತ್ರಿಯವರೆಗೆ 99.65 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಗುರುವಾರ 100 ಕೋಟಿ ಡೋಸ್‌(100 Crore Doses) ಮೈಲಿಗಲ್ಲಿ ದಟ್ಟವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ದೇಶಾದ್ಯಂತ 48 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಭಾರತದ ಲಸಿಕಾ ನೀಡಿಕೆ 100 ಕೋಟಿ ದಾಟುತ್ತಿದ್ದಂತೆ ಸಂಭ್ರಮಾಚರಣೆ ನಡೆಸಲು ಆಡಳಿತ ಪಕ್ಷ ಬಿಜೆಪಿ(BJP) ಸಿದ್ಧತೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲಸಿಕಾ ಕೇಂದ್ರವೊಂದಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

"

ಲಸಿಕೆ ಪಡೀರಿ: ಟೀವಿ, ಮೊಬೈಲ್‌ ಗೆಲ್ಲಿ!

ಈಗಾಗಲೇ ಪಕ್ಷದ ನಾಯಕರಿಗೆ ವಿವಿಧ ರಾಜ್ಯಗಳನ್ನು ಹಂಚಿಕೆ ಮಾಡಲಾಗಿದೆ. ಸಂಭ್ರಮಾಚರಣೆಯ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉತ್ತರ ಪ್ರದೇಶದ(Uttara Pradesh) ಗಾಜಿಯಾಬಾದ್‌ನಲ್ಲಿ, ಅರುಣ್‌ ಸಿಂಗ್‌ ತಮಿಳುನಾಡು ಹಾಗೂ ದುಷ್ಯಂತ್‌ ಗೌತಮ್‌ ಲಖನೌನಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಸರ್ಕಾರದ ವತಿಯಿಂದ ರೈಲು ನಿಲ್ದಾಣ, ವಿಮಾನ ನಿಲ್ದಾಣದಂಥ ಸಾರ್ವಜನಿಕ ಸ್ಥಳಗಳಲ್ಲಿ 100 ಕೋಟಿ ಡೋಸ್‌ ಲಸಿಕಾಕರಣ ಪೂರ್ಣಗೊಂಡಿದೆ ಎಂಬ ಸಂದೇಶಗಳನ್ನು ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡಲಾಗುತ್ತದೆ.

ಈವರೆಗೆ ಚೀನಾ ಮಾತ್ರ 100 ಕೋಟಿ ಡೋಸ್‌ ಲಸಿಕೆ ವಿತರಿಸಿದೆ. ಭಾರತ 100 ಕೋಟಿ ಡೋಸ್‌ ವಿತರಿಸಿದ ವಿಶ್ವದ 2ನೇ ರಾಷ್ಟ್ರವಾಗಲಿದೆ.

ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಯಾಕೆ? ಕೇಂದ್ರಕ್ಕೆ ಕೇರಳ ಹೈಕೋರ್ಟ್ ನೋಟಿಸ್!

14623 ಕೋವಿಡ್‌ ಕೇಸ್‌, 197 ಸಾವು: ಸಕ್ರಿಯ ಕೇಸು 8 ತಿಂಗಳ ಕನಿಷ್ಠ

ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 14,623 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 197 ಜನರು ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3.41 ಕೋಟಿಗೆ ಹಾಗೂ ಸಾವು 4.52 ಲಕ್ಷಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳು 1.78 ಲಕ್ಷಕ್ಕೆ ಇಳಿಕೆಯಾಗಿದ್ದು, ಇದು ಸುಮಾರು 8 ತಿಂಗಳ (229 ದಿನಗಳ) ಕನಿಷ್ಠ ಸಂಖ್ಯೆಯಾಗಿದೆ. ಸತತ 26 ದಿನಗಳಿಂದ ದೈನಂದಿನ ಪ್ರಕರಣಗಳ ಪ್ರಮಾಣ 30 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 5,020 ಸೋಂಕಿತರು ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.98.15ರಷ್ಟಿದೆ. ಈವರೆಗೆ ದೇಶದಲ್ಲಿ 99.12 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.