ನವದೆಹಲಿ(ಜೂ.05): ಭಾರತ ಪರಿಸರವನ್ನೇ ದೇವರೆಂದು ಪೂಜಿಸುವ ದೇಶ. ಪರಿಸರ ರಕ್ಷಣೆ ವಿಚಾರದಲ್ಲಿ ಪರಂಪರೆ ಹೊಂದಿರುವ ಭಾರತ ಇದೀಗ ಜಗತ್ತಿಗೆ ಮಾದರಿಯಾಗಿದೆ.  ಕಳೆದ 6 ರಿಂದ 7 ವರ್ಷಗಳಲ್ಲಿ ದೇಶದ ನವೀಕರಿಸಬಹುದಾದ ಸಂಪನ್ಮೂಲ ಸಾಮರ್ಥ್ಯ 250 ಪ್ರತಿಶತ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!.

ವಿಶ್ವ ಪರಿಸರ ದಿನಾಚರಣೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಪರಿಸರ ಅರಣ್ಯ , ಹವಾಮಾನ ಬದಲಾವಣೆ ಸಚಿವಾಲಯ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೋದಿ ಪರಿಸರ ಸಂರಕ್ಷಣೆಗೆ ದೇಶ ತೆಗೆದುಕೊಂಡ ಕ್ರಮ ಹಾಗೂ ಬದಲಾವೆಯನ್ನು ವಿವರಿಸಿದರು.

ಅಭಿವೃದ್ಧಿ ಹಾಗೂ  ಪರಿಸರ ಸಂರಕ್ಷಣೆಯಲ್ಲಿ ಭಾರತ ಸಮತೋಲನ ಸಾಧಿಸಿದೆ. 21ನೇ ಶತಮಾನದಲ್ಲಿ ಭಾರತ ಪರಿಸರ ಸಂರಕ್ಷಣೆ ವಿಚಾರದಲ್ಲಿ ಅತೀವ ಕಾಳಜಿ ವಹಿಸಿದೆ. ಆಧುನಿಕ ಚಿಂತನೆ ಮತ್ತು ಆಧುನಿಕ ನೀತಿಗಳಿಂದ ಸಶಕ್ತ ಭಾರತ ನಿರ್ಮಾಣವಾಗುತ್ತಿದೆ. ಇದರ ಜೊತೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ಮೋದಿ ಹೇಳಿದರು.

ಗುಡ್ಡಗಾಡಿನಲ್ಲಿ 16 ಕೆರೆ: ಮಂಡ್ಯದ ಮಾಡರ್ನ್ ಭಗೀರಥ ಕಾಮೇಗೌಡರಿಗೆ ಪ್ರಧಾನಿ ಮೋದಿ ಶ್ಲಾಘನೆ!

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಹತ್ವದ ಯೋಡನೆ ಘೋಷಿಸಿದ್ದಾರೆ. ಎಥೆನಾಲ್ ಅಭಿವೃದ್ಧಿದೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.  ಇದೇ ವೇಳೆ 2020-2025ರಲ್ಲಿ ಎಥೆನಾಲ್ ಮಿಶ್ರಣಕ್ಕೆ ತಜ್ಞರ ಸಮಿತಿ ನೀಡಿರುವ ವರದಿಯನ್ನು ಮೋದಿ ಬಿಡುಗಡೆ ಮಾಡಿದರು. ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗಾಗಿ ಮಹತ್ವಾಕಾಂಕ್ಷೆಯ ಇ -100 ಪೈಲಟ್ ಯೋಜನೆಯನ್ನು ಆರಂಭಿಸಿದರು.

ಆಧುನಿಕ ತಂತ್ರಜ್ಞಾನದ ಮೂಲಕ ಸಂಪನ್ಮೂಲಗಳನ್ನು ಮರುಬಳಕೆ ಮಾಡುವ ಹಾಗೂ ಉತ್ತಮವಾಗಿ ಬಳಸಿಕೊಳ್ಳುವ 11 ಕ್ಷೇತ್ರಗಳನ್ನು ಸರ್ಕಾರ ಗುರುತಿಸಿದೆ ಎಂದು ಪ್ರಧಾನಿ ಹೇಳಿದರು.