ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!
ಪರಿಸರ , ಇಂಧನ ಸಂರಕ್ಷಣೆ ಸುಸ್ಥಿರ ಅಭಿವದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕೂಡುಗೆಯನ್ನು ಪರಿಗಣಿಸಿ ಜಾಗತಿಕ ಶಕ್ತಿ ಮತ್ತು ಪರಿಸರ ನಾಯಕತ್ವ CERAWeek ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೋದಿ ಭಾಷಣ ಮಾಡಿದ್ದಾರೆ. ಇದರ ಪ್ರಮುಖಾಂಶ ಇಲ್ಲಿದೆ.
ನವದೆಹಲಿ(ಮಾ.05): ಪರಿಸರ ಸಂರಕ್ಷಣೆ, ಇಂಧನ ಸಂರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಅಪಾರವಾಗಿದೆ. ಜಗತ್ತಿಗೆ ಭಾರತ ನೀಡಿದ ಈ ಕೊಡುಗೆ ಪರಿಗಣಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿಗೆ CERAWeek ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆನ್‌ಲೈನ್ ಮೂಲಕ ಆಯೋಜಿಸಿದ ಸೆರಾವೀಕ್ಸ್ ವರ್ಚುವಲ್ ಕಾನ್ಫೆರನ್ಸ್ ಮೂಲಕ ಪ್ರಧಾನಿಗೆ ಪ್ರಶಸ್ತಿ ನೀಡಲಾಯಿತು.
2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಪ್ರಶಸ್ತಿಯನ್ನು ಸಮಸ್ತ ಭಾರತೀಯರಿಗೆ ಅರ್ಪಿಸುತ್ತಿದ್ದೇನೆ ಎಂದರು. ಪರಿಸರ ಸಂರಕ್ಷಣೆ, ಪ್ರಕೃತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪೂರ್ವಜರ ಪರಂಪರೆ ಮುಂದುವರಿಸಿಕೊಂಡಿದ್ದೇವೆ. ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಪೂಜಿಸಿದ್ದಾರೆ. ಮರ, ನದಿಗಳನ್ನು ದೇವರೆಂದು ಪೂಜಿಸಿ ಗೌರವಿಸಿದ್ದಾರೆ. ಹೀಗಾಗಿ ಭಾರತ ಹಿಂದಿನಿಂದಲೂ ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದೆ ಎಂದು ಮೋದಿ ಹೇಳಿದ್ದಾರೆ.
'ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿದ ಜನನಾಯಕ'
ಭಾರತದಲ್ಲಿ ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್ ಕುರಿತ ಪರಿಸರ ಸಂಬಂಧಿತ ಆತಂಕ ಕಡಿಮೆ ಮಾಡಲು ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಭಾರತ ವಾಹನ ಎಮಿಶನ್ ಟೆಸ್ಟ್‌ನಲ್ಲಿ BS4ನಿಂದ BS6ಗೆ ಲಗ್ಗೆ ಇಟ್ಟಿದೆ. ಇದು ಯೂರೋಪ್‌ಗೆ ಸಮವಾಗಿದೆ. ಇದರ ಜೊತೆಗೆ ನೈಸರ್ಗಿಕ ಹಾಗೂ ಪುನರ್ ಬಳಕೆ ಇಂಧನಗಳನ್ನು ಬಳಕೆ ಮಾಡುತ್ತಿದ್ದೇವೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಕೇಂದ್ರ ಸರ್ಕಾರ ಸೋಲಾರ್ ಬಳಕೆ ಉತ್ತೇಜಿಸಲು ಹೊಸ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಸಶಕ್ತವಾಗುತ್ತಿದೆ. ನಮ್ಮ ಸಂಪ್ರದಾಯಗಳು, ಅಭ್ಯಾಸಗಳಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಇದನ್ನು ಬದಲಾಯಿಸಿಕೊಳ್ಳಬೇಕಿದೆ. ಪರಿಸರಕ್ಕೆ ಪೂರಕವಾದ ಮಾರ್ಗಗಳನ್ನು ನಾವು ಅನುಸರಿಸಬೇಕಿದೆ. ಜಾಗತಿಕ ಮಟ್ಟದಲ್ಲಿ ಈ ಮಾರ್ಗಗಳ ಅನುಸರಣೆ ಹೆಚ್ಚಾಗಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.
ಸಾರ್ವಜನಿಕ ವಲಯಗಳ ಖಾಸಗೀಕರಣ; ಭಾರತದ ಅಭಿವೃದ್ಧಿಗೆ ಪ್ರಧಾನಿ ಮೋದಿ ರೋಡ್ ಮ್ಯಾಪ್!.
ಪರಿಸರ ಸ್ನೇಹಿ ಸಾರಿಗೆ ಒತ್ತು ನೀಡಬೇಕಿದೆ. ಹೀಗಾಗಿ ಭಾರತದಲ್ಲಿ ಮೆಟ್ರೋಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಗೆ ಒತ್ತು ನೀಡಲಾಗುತ್ತಿದೆ. ಭಾರತದಲ್ಲಿ ಇದೀಗ 37 ಮಿಲಿಯನ್ ಎಲ್‌ಇಡಿ ಬಲ್ಬ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಪ್ರತಿ ವರ್ಷ 38 ಮಿಲಿಯನ್ ಟನ್ ಇಂಗಾಲದ ಪ್ರಮಾಣ ಕಡಿಮೆಯಾಗಿದೆ ಎಂದು ಮೋದಿ ಹೇಳಿದರು.
'ಹೀಗೆ ಇರೋಣ' ಸ್ನೇಹಿತ 10 ರಾಷ್ಟ್ರಗಳಿಗೆ ಮೋದಿ ಹೇಳಿದ್ದು ಒಂದೇ ಮಾತು
2014ರಲ್ಲಿ ಭಾರತದಲ್ಲಿ ಶೇಕಡಾ 54 ರಷ್ಟು ಗ್ಯಾಸ್ ಇತ್ತು. 2021ರಲ್ಲಿ ಈ ಸಂಖ್ಯೆ 99.6 ಶೇಕಡ ಆಗಿದೆ. ಈ ಮೂಲಕ ಭಾರತದ ಇಂಗಾಲ ರಹಿತದತ್ತ ಸಾಗಿದೆ. ಇನ್ನು 2024ರ ಹೊತ್ತಿಗೆ ಭಾರತದಲ್ಲಿ 5,000 ಬಯೋಗ್ಯಾಸ್ ಘಟಕ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದರು.
5000 ಕೋಟಿ ರು. ವೆಚ್ಚ: ದೇಶದ ಅತಿ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಶಂಕು
ಭಾರತದಲ್ಲಿನ ಹಲವು ಯೋಜನೆ ಹಾಗೂ ಪ್ರಯತ್ನದಿಂದ ಕಳೆದ 7 ವರ್ಷದಲ್ಲಿ ಕಾಡಿನ ಪ್ರಮಾಣ ಹೆಚ್ಚಾಗಿದೆ. ಕಾಡು ಪ್ರಾಣಿಗಲು ಸ್ವಚ್ಚಂದವಾಗಿ ವಿಹರಿಸುವಂತಾಗಿದೆ. ನದಿ, ನೀರು, ಜಲಪಾತಗಳ ಪ್ರಮಾಣ ಹೆಚ್ಚಾಗಿದೆ. ಇದು ವಿಶ್ವಕ್ಕೆ ಭಾರತ ನೀಡುತ್ತಿರುವ ಮಹತ್ತರ ಕೂಡುಗೆಯಾಗಿದೆ. ಇಷ್ಟೇ ಅಲ್ಲ ಭಾರತ 2030ರ ಗಡುವಿನ ಮೊದಲೇ ಪ್ಯಾರಿಸ್ ಒಪ್ಪಂದ ಗುರಿ ಮುಟ್ಟಲಿದೆ ಎಂದು ಮೋದಿ ಹೇಳಿದ್ದಾರೆ. ಇದೀಗ ನಮಗೆ ಚಿಂತಿಸುವ ಸಮಯ ಬಂದಿದೆ. ಪ್ರತಿ ಹೆಜ್ಜೆ ಪರಿಸರಕ್ಕೆ ಪೂರಕವಾಗಿರಬೇಕು ಎಂದು ಮೋದಿ ಹೇಳಿದ್ದಾರೆ.
ಏನಿದು ಸೆರಾವೀಕ್?
CERA ಅಂದರೆ ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್ ಅಸೋಸಿಯೇಟ್ಸ್ (CERA). ಮೆಸಾಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿ 1983ರಲ್ಲಿ CERA ಸಂಸ್ಥೆ ಆರಂಭಗೊಂಡಿತು. ಡೇನಿಯಲ್ ಯೆರ್ಗಿನ್ ಮತ್ತು ಜೇಮ್ಸ್ ರೋಸೆನ್‌ಫೀಲ್ಡ್ ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಇಂಧನ ಸಂಶೋಧನೆ, ಇಂಧನ ಮಾರುಕಟ್ಟೆ, ಭೌಗೋಳಿಕ ರಾಜಕೀಯ, ಉದ್ಯಮದ ಪ್ರವೃತ್ತಿಗಳು, ಹಮಾಮಾನ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಬಗ್ಗೆ ಸ್ವತಂತ್ರ ವಿಶ್ಲೇಷಣೆಗೆ ಹೆಸರುವಾಸಿಯಾಗಿದೆ.
ಇಂಧನ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಒಂದು ವೇದಿಕೆಯನ್ನು ಹುಟ್ಟುಹಾಕಲಾಯಿತು. ಈ ಸಮ್ಮೇಳನವೇ ಸೆರಾವೀಕ್. ಈ ಸಮ್ಮೇಳನದಲ್ಲಿ ವಿಶ್ವದ ಆರ್ಥಿಕ ದೃಷ್ಟಿಕೋನ, ಭೌಗೋಳಿಕ ರಾಜಕೀಯ, ಇಂಧನ ನೀತಿ ಮತ್ತು ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ತಾಂತ್ರಿಕ ನಾವೀನ್ಯತೆ, ಇತರ ವಿಷಯಗಳ ಕುರಿತ ಅಧಿವೇಶನಗಳನ್ನು ಆಯೋಜಿಸಲಾಗುತ್ತದೆ. ಸಮ್ಮೇಳನದಲ್ಲಿ ಇಂಧನ, ನೀತಿ, ತಂತ್ರಜ್ಞಾನ ಮತ್ತು ಹಣಕಾಸು ಕೈಗಾರಿಕೆಗಳ ಪ್ರಮುಖ ಭಾಷಣಕಾರರು ಭಾಗವಹಿಸುತ್ತಾರೆ.