ನವದೆಹಲಿ (ಏ. 29)  ಕೊರೋನಾ ವೈರಸ್  ಎದುರಿಸಲು ಮೊದಲು ಭಯದ ವಾತಾವರಣದಿಂದ ಹೊರಗೆ ಬರಬೇಕು. ಇದೇ ವಿಚಾರವನ್ನು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಅದು ನೀಡಿರುವ ಅಂಕಿ-ಅಮಶಗಳನ್ನು ಒಮ್ಮೆ ಗಮನಿಸಿದರೆ ವಾಸ್ತವ ಸ್ಥಿತಿ ಅರಿವಾಗುತ್ತದೆ.

ಭಾರತದ ಚೇತರಿಕೆ ದರ ಶೇ.  82.10 ತಲುಪಿದೆ.  ಏಪ್ರಿಲ್ 29 ರಂದು ಲಭ್ಯವಿರುವ ಒಟ್ಟು  COVID19 ಲಸಿಕೆ ಪ್ರಮಾಣ 1.27 ಕೋಟಿ,  2021 ರ ಜನವರಿ 16 ರಿಂದ ಏಪ್ರಿಲ್ 29 ರವರೆಗೆ  15.11 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ.  ಈ ಮೂರು ಪ್ರಮುಖ ಅಂಶಗಳನ್ನು ತಿಳಿಸಿದೆ.

ಕರ್ನಾಟಕದಲ್ಲಿ ಇಳಿದ ಕೊರೋನಾ

ಮೂರು ನಕಾಶೆಗಳ ಮೂಲಕ ಎಲ್ಲ ವಿವರವನ್ನು ಕೇಂದ್ರ ಆರೋಗ್ಯ ಇಲಾಖೆ ನಮ್ಮ ಮುಂದೆ  ಇಟ್ಟಿದೆ. ನಾವು ಕೇವಲ ದಾಖಲಾಗುವ ಕೇಸುಗಳನ್ನು ಮಾತ್ರ ನೋಡುವುದಲ್ಲ. ಅದರ ಆಚೆ ಏನಾಗುತ್ತಿದೆ ಎಂಬುದರ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ತಿಳಿಸಿದೆ. 

22,07,065 ಸೆಷನ್‌ಗಳ ಮೂಲಕ 15,00,20,648 ಲಸಿಕೆ  ನೀಡಲಾಗಿದೆ. ಇವುಗಳಲ್ಲಿ 1 ನೇ ಡೋಸ್ ತೆಗೆದುಕೊಂಡ 93,67,520 ಎಚ್‌ಸಿಡಬ್ಲ್ಯೂ ಮತ್ತು 2 ನೇ ಡೋಸ್ ತೆಗೆದುಕೊಂಡ 61,47,918 ಎಚ್‌ಸಿಡಬ್ಲ್ಯೂಗಳು, 1,23,19,903 ಎಫ್‌ಎಲ್‌ಡಬ್ಲ್ಯೂ (1 ನೇ ಡೋಸ್), 66,12,789 ಎಫ್‌ಎಲ್‌ಡಬ್ಲ್ಯೂ (2 ನೇ ಡೋಸ್), 5,14,99,834 1 ನೇ ಡೋಸ್ ಫಲಾನುಭವಿಗಳು ಸೇರಿದ್ದಾರೆ.

60 ವರ್ಷಕ್ಕಿಂತ ಮೇಲ್ಪಟ್ಟ 98,92,380 2 ನೇ ಡೋಸ್ ಫಲಾನುಭವಿಗಳು ಮತ್ತು 45 ರಿಂದ 60 ವರ್ಷ ವಯಸ್ಸಿನ 5,10,24,886 (1 ನೇ ಡೋಸ್) ಮತ್ತು 31,55,418 (2 ನೇ ಡೋಸ್) ಫಲಾನುಭವಿಗಳು  ಲಸಿಕೆ ಪಡೆದುಕೊಂಡಿದ್ದಾರೆ.

ಯಾವ ರಾಜ್ಯಗಳಲ್ಲಿ ಚೇತರಿಕೆ ಪ್ರಮಾಣ ಎಷ್ಟಿದೆ? ಯಾವ ರಾಜ್ಯದ ಬಳಿ ಎಷ್ಟು ಲಸಿಕೆ ಇದೆ? ಯಾವ ರಾಜ್ಯದಲ್ಲಿ ಎಷ್ಟು ಜನ ಲಸಿಕೆ ಪಡೆದುಕೊಂಡಿದ್ದಾರೆ ಎನ್ನುವುದನ್ನ ತಿಳಿಸಿದ್ದು  ನೀವು  ನೋಡಿಕೊಂಡು ಬನ್ನಿ