ಅಬ್ಬಾ ನಿಟ್ಟುಸಿರು... ಕರ್ನಾಟಕದಲ್ಲಿ ಕೊಂಚ ಇಳಿದ ಪ್ರಕರಣ, ಹೆಚ್ಚಿದ ಡಿಸ್ಚಾರ್ಜ್ ಲೆಕ್ಕ
ಕರ್ನಾಟಕದಲ್ಲಿ ಮುಂದುವರಿದ ಕೊರೋನಾ ಅಬ್ಬರ/ ಒಂದೇ ದಿನ 35,024 ಪಾಸಿಟಿವ್ ಪ್ರಕರಣಗಳು ವರದಿ/ ಬೆಂಗಳೂರಿನಲ್ಲಿ ಇಂದು 19,637 ಮಂದಿಗೆ ಸೋಂಕು ದೃಢ/ 14,142 ಸೋಂಕಿತರು ಗುಣಮುಖರಾದರು
ಬೆಂಗಳೂರು (ಏ. 29) ಕೊರೋನಾ ಪ್ರಕರಣಗಳು ಹಿಂದಿನ ದಿನಕ್ಕಿಂತ ಕೊಂಚ ಇಳಿದಿವೆ. ಸರ್ಕಾರ ನಿಷೇಧಾಜ್ಞೆ ಹಾಕಿಕೊಂಡು ಮೇಲಿಂದ ಮೇಲೆ ಸಭೆ ಮಾಡಿ ಸೂಚನೆಗಳನ್ನು ನೀಡುತ್ತಲೇ ಇದೆ. ಕಳೆದ ಒಂದು ದಿನ ಅವಧಿಯಲ್ಲಿ ದಾಖಲೆಯ 270 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಇದರ ಪರಿಣಾಮ ಸಾವಿನ ಸಂಖ್ಯೆ 15,306ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಂದೇ ದಿನ 35,024 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 14,74,846ಕ್ಕೆ ಏರಿಕೆಯಾಗಿದೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮುಖೇನ ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಇಂದು 19,637 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 7,29,984ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 143 ಮಂದಿ ಬಲಿಯಾಗಿದ್ದಾರೆ.
ಈ ಕಚೇರಿಯಲ್ಲಿ ಕೊರೋನಾ ನಿಯಮ ಕೇಳುವವರಿಲ್ಲ
ರಾಜ್ಯದಲ್ಲಿ ಇಂದು 14,142 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 11,10,025ಕ್ಕೆ ಏರಿಕೆಯಾಗಿದೆ. 3,49,496 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 2,431 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ.
"
ಗುರುವಾರ ಬೆಳಗ್ಗೆ ಅಧಿಕಾರಿಗಳು ಮತ್ತು ಸಚಿವರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಟಫ್ ರೂಲ್ಸ್ ಸರಿಯಾದ ಅನುಷ್ಠಾನಕ್ಕೆ ಎಲ್ಲ ಜಿಲ್ಲಾಧಿಕಾರಿಗಳಿಗೂ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಇನ್ನು ಮುಂದಿನ ದಿನಗಳಲ್ಲಿ ನಿಷೇಧಾಜ್ಞೆಯ ಪರಿಣಾಮ ಗೊತ್ತಾಗಲಿದೆ.