ದಿಲ್ಲಿ, ಉತ್ತರಪ್ರದೇಶ ಹಾಗೂ ಹರ್ಯಾಣದಲ್ಲಿ ಏರಿಕೆ ನೋಯ್ಡಾದಲ್ಲಿ ಪಾಸಿಟಿವಿಟಿ ಶೇ.15ಕ್ಕೆ ಏರಿಕೆ: ಅಲರ್ಚ್ ಲಖನೌ, ರಾಜಧಾನಿ ವಲಯದ 6 ಜಿಲ್ಲೆಗಳಲ್ಲಿ ಮಾಸ್ಕ್ ಕಡ್ಡಾಯ
ನವದೆಹಲಿ(ಏ.19): ದಿಲ್ಲಿ, ಉತ್ತರಪ್ರದೇಶ ಹಾಗೂ ಹರ್ಯಾಣದಲ್ಲಿ ಕಳೆದ 1 ವಾರದಲ್ಲಿ ಸೋಂಕಿನ ಪ್ರಕರಣಗಳು ಸಾಕಷ್ಟುಹೆಚ್ಚಿವೆ. ಹೀಗಾಗಿ ದೇಶದ ಒಟ್ಟಾರೆ ಕೋವಿಡ್ ಪ್ರಕರಣಗಳು ಕಳೆದ 1 ವಾರದಲ್ಲಿ ಶೇ.35ರಷ್ಟುಏರಿಕೆ ಆಗಿವೆ.
ದೇಶದಲ್ಲಿ ಏ.10ರಿಂದ 16 ನಡುವಿನ ವಾರದಲ್ಲಿ 4900 ಪ್ರಕರಣ ದಾಖಲಾಗಿದ್ದವು. ಆದರೆ ಏ.11ರಿಂದ 17ರವರೆಗಿನ ವಾರದಲ್ಲಿ 6610ಕ್ಕೆ (ಶೇ.35ರಷ್ಟು) ಏರಿಕೆ ಆಗಿವೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ದಿಲ್ಲಿಯಲ್ಲಿ ಏ.10ರಿಂದ 16ರ ನಡುವೆ 943 ಪ್ರಕರಣ ವರದಿ ಆಗಿದ್ದವು. ಅದು ಏ.11ರಿಂದ 17ರವರೆಗೆ 2307ಕ್ಕೆ ಏರಿದೆ. ಹರಾರಯಣದಲ್ಲಿ 119 ಇದ್ದ ಪ್ರಕರಣ 514ಕ್ಕೆ (ಶೇ.118) ಹಾಗೂ ಉತ್ತರ ಪ್ರದೇಶದಲ್ಲಿ 224 ಇದ್ದ ಕೇಸು ಸಂಖ್ಯೆ 540ಕ್ಕೆ (ಶೇ.141)ರಷ್ಟುಹೆಚ್ಚಿದೆ. ಇದು ಆತಂಕ ಮೂಡಿಸಿದೆ.
Covid cases ಭಾರತದಲ್ಲಿ ನಿಜಕ್ಕೂ ಕೊರೋನಾ ನಿಯಂತ್ರಣದಲ್ಲಿದೆಯಾ? ಇಲ್ಲಿದೆ ಇನ್‌ಸೈಡ್ ಸ್ಟೋರಿ!
ನೋಯ್ಡಾದಲ್ಲಿ ಪಾಸಿಟಿವಿಟಿ ಶೇ.15ಕ್ಕೆ ಏರಿಕೆ: ಅಲರ್ಚ್
ಕೋವಿಡ್-19 4ನೇ ಅಲೆ ಆರಂಭವಾಗುತ್ತಿದೆ ಎಂಬ ಭೀತಿ ನಡುವೆಯೇ ಉತ್ತರಪ್ರದೇಶದ ನೋಯ್ಡಾದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.15ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸೋಮವಾರ 76ರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹೈಅಲರ್ಚ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮೂರನೇ ಅಲೆ ತೀವ್ರಗೊಂಡಿದ್ದ ಫೆಬ್ರುವರಿಯಲ್ಲಿ ನೋಯ್ಡಾದಲ್ಲಿ ಪಾಸಿಟಿವಿಟಿ ಪ್ರಮಾಣವು ಸರ್ಕಾರಿ ಲ್ಯಾಬ್‌ಗಳಲ್ಲಿ ಶೇ.2.13 ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಶೇ.17ರಷ್ಟಿತ್ತು. ಮಾಚ್‌ರ್‍ನಲ್ಲಿ ಅದು ಕ್ರಮವಾಗಿ ಶೇ.0.18 ಮತ್ತು ಶೇ.5ಕ್ಕೆ ಇಳಿದಿತ್ತು. ಆದರೆ ಏಪ್ರಿಲ್‌ನಲ್ಲಿ ಅದು ಮತ್ತೆ ಶೇ.0.22 ಮತ್ತು ಶೇ.10ಕ್ಕೆ ಏರಿದ್ದು. ಆದರೆ ಕಳೆದ ನಾಲ್ಕು ದಿನಗಳ ಲೆಕ್ಕಾಚಾರ ನೋಡಿದರೆ ಅದು ಕ್ರಮವಾಗಿ ಶೇ.0.41 ಮತ್ತು ಶೇ.17ಕ್ಕೆ ಏರಿದೆ.
ಲಖನೌ, ರಾಜಧಾನಿ ವಲಯದ 6 ಜಿಲ್ಲೆಗಳಲ್ಲಿ ಮಾಸ್‌್ಕ ಕಡ್ಡಾಯ
ಉತ್ತರ ಪ್ರದೇಶದ ಸುತ್ತಮುತ್ತಲಿನ ರಾಜ್ಯಗಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರವ ಹಿನ್ನೆಲೆಯಲ್ಲಿ ರಾಜಧಾನಿ ಲಖನೌ ಸೇರಿದಂತೆ ರಾಷ್ಟ್ರೀಯ ರಾಜಧಾನಿ ವಲಯದ 6 ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್‌್ಕ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಕೋವಿಡ್ ಹರಡುವಿಕೆ ಪ್ರಮಾಣ ಶೇ.500ರಷ್ಟು ಏರಿಕೆ!
ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಗೌತಮಬುದ್ಧ ನಗರ, ಘಾಜಿಯಾಬಾದ್, ಹಾಪುರ್, ಮೇರಠ್, ಬುಲಂದ್‌ಶಹರ್ ಮತ್ತು ಬಾಗ್‌ಪತ್‌ಗಳಲ್ಲಿ ಮಾಸ್‌್ಕ ಧಾರಣೆ ಕಡ್ಡಾಯಗೊಳಿಸಲಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಲಸಿಕೆ ಪಡೆದಿಲ್ಲದವರನ್ನು ಗುರುತಿಸಿ, ಅವರೆಲ್ಲರಿಗೂ ಲಸಿಕೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಗೌತಮಬುದ್ಧ ನಗರದಲ್ಲಿ 65, ಘಾಜಿಯಾಬಾದ್‌ನಲ್ಲಿ 20, ಲಖನೌನಲ್ಲಿ 10 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದ್ದು, ಕೇವಲ 1 ಒಮಿಕ್ರೋನ್ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆ; ಒಂದು ತಿಂಗಳಿನಿಂದ ಕೋವಿಡ್ ಸೋಂಕಿಲ್ಲ
ಉಡುಪಿ ಜಿಲ್ಲೆಯಲ್ಲಿ ಭಾನುವಾರ 102 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ, ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿಲ್ಲ ಮತ್ತು ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಸೋಕಿತರು ಇಲ್ಲ. ಜಿಲ್ಲೆಯಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯಲ್ಲಿ ಭಾನುವಾರ ಒಂದು ಕೊರೋನಾ ಪ್ರಕರಣ ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4 ಇದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಪಾಸಿಟಿವ್ ಕೇಸ್‌ಗಳ ಸಂಖ್ಯೆ 1,35,499 ಆಗಿದ್ದು, ಅವರಲ್ಲಿ 1,33,645 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್ ತಿಳಿಸಿದೆ.
