Asianet Suvarna News Asianet Suvarna News

Covid cases ಭಾರತದಲ್ಲಿ ನಿಜಕ್ಕೂ ಕೊರೋನಾ ನಿಯಂತ್ರಣದಲ್ಲಿದೆಯಾ? ಇಲ್ಲಿದೆ ಇನ್‌ಸೈಡ್ ಸ್ಟೋರಿ!

  • ಭಾರತದಲ್ಲಿ ಕೊರೋನಾ ಸ್ಥಿತಿಗತಿ ಹೇಗಿದೆ?
  • ಕೋವಿಡ್ ಏರಿಕೆಯಾಗುತ್ತಿರುವ ಬೆನ್ನಲ್ಲೇ ಆತಂಕ
  • ಕೋವಿಡ್ ಟೆಸ್ಟ್, ಪಾಸಿಟಿವಿಟಿ ರೇಟ್ ಮಾಹಿತಿ
Is low level of covid test hiding Surge of infections in India data reveals positivity rate increase ckm
Author
Bengaluru, First Published Apr 18, 2022, 8:58 PM IST

ನವದೆಹಲಿ(ಏ.18): ಕೆಲ ರಾಜ್ಯಗಳಲ್ಲಿ ಕೊರೋನಾ ಏರಿಕೆಯಾಗುತ್ತಿದೆ ಅನ್ನೋ ಆತಂಕದ ನಡುವೆಯೂ ಭಾರತದಲ್ಲಿ ಕೊರೋನಾ ಪ್ರಕರಣ ಅತೀ ಕಡಿಮೆಯಾಗಿದೆಯಾ ನಿಯಂತ್ರಣದಲ್ಲಿದೆ ಅನ್ನೋ ವರದಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಅಂಕಿ ಅಂಶಗಳು ಪ್ರಕಾರ ಭಾರತದಲ್ಲಿ ಕೊರೋನಾ ಪ್ರಕರಣ ಗಣನೀವಾಗಿ ಹೆಚ್ಚಳವಾಗಿದೆ. ಕೋವಿಡ್ ಟೆಸ್ಟ್, ಪಾಸಿಟಿವಿಟಿ ರೇಟ್ ಈ ಪ್ರಶ್ನೆಗೆ ಉತ್ತರ ನೀಡುತ್ತಿದೆ.

ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಮಿಗಿಲಾಗಿದೆ. ಆದರೆ ಭಾರತದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣ ಅತೀ ಕಡಿಮೆ ಇದೆ ಎಂದು ವರದಿಗಳು ಹೇಳುತ್ತಿದೆ. ಆದರೆ ಕೊರೋನಾ ಪರೀಕ್ಷೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗಿದೆ. ಆದರೆ ನೈಜ ಅಂಕಿ ಅಂಶ ಇಲ್ಲಿವೆ.

ಕೋವಿಡ್‌ ಹರಡುವಿಕೆ ಪ್ರಮಾಣ ಶೇ.500ರಷ್ಟು ಏರಿಕೆ!

ಮಾರ್ಚ್ ತಿಂಗಳ ಕೋವಿಡ್ ಪರೀಕ್ಷೆ ಹಾಗೂ ಏಪ್ರಿಲ್ ತಿಂಗಳ ಕೋವಿಡ್ ಪರೀಕ್ಷೆ ಅಂಕಿ ಅಂಶ ಹಾಗೂ ಪಾಸಿಟಿವಿಟಿ ರೇಟ್ ಭಾರತದ ಕೊರೋನಾ ಪ್ರಕರಣದ ನೈಜ ಕತೆ ಬಿಚ್ಚಿಡುತ್ತಿದೆ. ದೆಹಲಿಯಲ್ಲಿ 2022ರ ಮಾರ್ಚ್ 16ರಂದು 36,625 ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ ಪತ್ತೆಯಾದ ಕೊರೋನಾ ಪಾಸಿಟಿವಿಟಿ ರೇಟ್ ಶೇಕಡಾ 0.4 ಮಾತ್ರ. ಇನ್ನು ಏಪ್ರಿಲ್ 16 ರಂದು ದೆಹಲಿಯಲ್ಲಿ 8,646 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ಅತ್ಯಲ್ಪ ಕೋವಿಡ್ ಟೆಸ್ಟ್‌ನಲ್ಲೇ ದೆಹಲಿಯಲ್ಲಿ ಇದೀಗ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5.3 ರಷ್ಟಿದೆ.

ಮಹಾರಾಷ್ಟ್ರದಲ್ಲಿ ಮಾರ್ಚ್ 16ರಂದು 56,574 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಶೇಕಡಾ 0.4 ರಷ್ಟು ಕೋವಿಡ್ ಪಾಸಿಟಿವಿಟಿ ರೇಟ್ ಪತ್ತೆಯಾಗಿದೆ. ಇನ್ನು ಏಪ್ರಿಲ್ 16 ರಂದು ಮಹಾರಾಷ್ಟ್ರದಲ್ಲಿ ಕೇವಲ 19,518 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಆದರೆ ಪಾಸಿಟಿವಿಟಿ ರೇಟ್ ಶೇಕಡಾ 0.5ಕ್ಕೆ ಏರಿಕೆಯಾಗಿದೆ.

Covid cases ಮತ್ತೆ ಏರಿಕೆ ಕಂಡ ಕೊರೋನಾ ಪ್ರಕರಣ, ಕಳೆದ 24 ಗಂಟೆಯಲ್ಲಿ 1,150 ಕೇಸ್!

ಕೇರಳದಲ್ಲಿ ಮಾರ್ಚ್ 16 ರಂದು 25,946 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಶೇಕಡಾ 3.7 ರಷ್ಟು ಕೋವಿಡ್ ಪಾಸಿಟಿವಿಟಿ ಪತ್ತೆಯಾಗಿದೆ. ಆದರೆ ಏಪ್ರಿಲ್ 16 ರಂದು ಕೇವಲ 10,673 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ಕಡಿಮೆ ಟೆಸ್ಟ್‌ನಲ್ಲಿ ಶೇಕಡಾ 2.1 ರಷ್ಟು ಕೋವಿಡ್ ಪಾಸಿಟಿವಿಟಿ ಪತ್ತೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 16 ರಂದು 19,204 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಪಾಸಿಟಿವಿಟಿ ರೇಟ್ ಶೇಕಡಾ 0.3. ಆದರೆ ಏಪ್ರಿಲ್ 16 ರಂದು 5,918 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಪಾಸಿಟಿವಿಟಿ ರೇಟ್ ಶೇಕಡಾ 0.2. ಇನ್ನು ಕರ್ನಾಟಕದಲ್ಲಿ ಮಾರ್ಚ್ 16 ರಂದು 41,097 ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಶೇಕಡಾ 0.5 ರಷ್ಟು ಪಾಸಿಟಿವಿಟಿ ರೇಟ್ ಪತ್ತೆಯಾಗಿದೆ. ಇನ್ನು ಏಪ್ರಿಲ್ 16 ರಂದು ಕರ್ನಾಟಕದಲ್ಲಿ 6,107 ಕೋವಿಡ್ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಶೇಕಡಾ 0.7 ರಷ್ಟು ಪಾಸಿಟಿವಿಟಿ ಪತ್ತೆಯಾಗಿದೆ.

ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ಟೆಸ್ಟ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.  ಮಾರ್ಚ್ ತಿಂಗಳಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್ ಇದೀಗ ಏರಿಕೆಯಾಗತೊಡಗಿದೆ. ವಿದೇಶಗಳಲ್ಲಿ ಕೊರೋನಾ ಹೆಚ್ಚಳ ಕೂಡ ಇದಕ್ಕೆ ಕಾರಣಣವಾಗಿದೆ. ಹೊಸ ವೇರಿಯೆಂಟ್ ಅತೀ ವೇಗದಲ್ಲಿ ಹರಡುತ್ತಿರುವ ಕಾರಣ ಭಾರತ ಅತ್ಯಂತ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಅತೀ ಕಡಿಮೆ ಕೋವಿಡ್ ಟೆಸ್ಟ್‌ನಲ್ಲೂ ಗರಿಷ್ಠ ಪಾಸಿಟಿವಿಟಿ ರೇಟ್ ಪತ್ತೆಯಾಗುತ್ತಿದೆ. 

Follow Us:
Download App:
  • android
  • ios