* 2.34 ಲಕ್ಷ ಕೋವಿಡ್ ಪ್ರಕರಣ, 893 ಸಾವು* ಒಂದೇ ದಿನ 1.19 ಲಕ್ಷ ಇಳಿಕೆ ಕಂಡ ಸಕ್ರಿಯ ಸೋಂಕು* 18.84 ಲಕ್ಷಕ್ಕೆ ಸಕ್ರಿಯ ಕೇಸು ಇಳಿಕೆ* ಲಸಿಕೆ ಪಡೆಯದ ಜೋಕೋಗೆ ಮತ್ತೆ ಸಂಕಷ್ಟ
ನವದೆಹಲಿ (ಜ. 31) ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2.34 ಲಕ್ಷ ಕೋವಿಡ್ (Coronavirus) ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 893 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸೋಂಕಿತರ (India) ಸಂಖ್ಯೆಯಲ್ಲಿ 1.19ರಷ್ಟುಇಳಿಕೆ ಕಾಣುವ ಮೂಲಕ 18.84 ಲಕ್ಷಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ (Health Department) ಇಲಾಖೆ ತಿಳಿಸಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರ ಶೇ.14.5ರಷ್ಟು ಮತ್ತು ವಾರದ ಪಾಸಿಟಿವಿಟಿ ದರ ಶೇ.16.4ರಷ್ಟಿದೆ. ಈವರೆಗೆ ದೇಶದಲ್ಲಿ 165.7 ಕೋಟಿ ಡೋಸ್ ಕೋವಿಡ್ ಲಸಿಕೆ (Vaccine) ವಿತರಿಸಲಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 4.10 ಕೋಟಿಗೆ ಮತ್ತು ಒಟ್ಟು ಸಾವು 4.94 ಲಕ್ಷಕ್ಕೆ ಏರಿಕೆಯಾಗಿವೆ
13 ದಿನದ ಬಳಿಕ ಕರ್ನಾಟಕದಲ್ಲಿ 30 ಸಾವಿರಕ್ಕಿಂತ ಕಡಿಮೆ ಕೇಸ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದ್ದು, ಭಾನುವಾರ 28,264 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 68 ಮಂದಿ ಮೃತರಾಗಿದ್ದಾರೆ, 29,244 ಮಂದಿ ಚೇತರಿಸಿಕೊಂಡಿದ್ದಾರೆ.
ಜ.17ರಂದು 27,156 ಪ್ರಕರಣ ವರದಿಯಾದ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 30 ಸಾವಿರದೊಳಗೆ ವರದಿಯಾಗಿದೆ. 1.72 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ.16.38ಕ್ಕೆ ಇಳಿದಿದೆ.
ಬೆಂಗಳೂರು ನಗರದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ 11,938ಕ್ಕೆ ಕುಸಿದಿದೆ. ರಾಜ್ಯದ ಒಟ್ಟು ದೈನಂದಿನ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.42ರಷ್ಟಿದೆ. ಕೆಲವು ದಿನಗಳ ಹಿಂದೆ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.80ರಷ್ಟುಇರುತ್ತಿತ್ತು.
Covid 3rd Wave: ಕರ್ನಾಟಕದಲ್ಲಿ ಸಕಾಲಿಕ ನಿರ್ಬಂಧದಿಂದ ಸೋಂಕಿನ ತೀವ್ರತೆ ತಗ್ಗಿದೆ: IISC
ಮೈಸೂರಿನಲ್ಲಿ 2,322, ಧಾರವಾಡ 1,356, ತುಮಕೂರು ಜಿಲ್ಲೆಯಲ್ಲಿ 1,165 ಪ್ರಕರಣ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮೂರಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ 14, ಮೈಸೂರು 10, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ತಲಾ 7, ಬಾಗಲಕೋಟೆ ಮತ್ತು ತುಮಕೂರು ತಲಾ 4, ಚಿತ್ರದುರ್ಗ 3, ಬೆಳಗಾವಿ, ಚಾಮರಾಜನಗರ, ಹಾವೇರಿ, ಕಲಬುರಗಿ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡಲ್ಲಿ ತಲಾ 2, ರಾಮನಗರ, ಶಿವಮೊಗ್ಗ, ಗದಗ, ಹಾಸನ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಈವರೆಗೆ ಒಟ್ಟು 37.85 ಲಕ್ಷ ಮಂದಿಗೆ ಕೋವಿಡ್ ಬಂದಿದ್ದು, 34.95 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 2.51 ಲಕ್ಷ ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಈವರೆಗೆ 38,942 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ: ಭಾನುವಾರ 79,967 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. 7,982 ಮಂದಿ ಮುನ್ನೆಚ್ಚರಿಕಾ ಡೋಸ್, 29,100 ಮಂದಿ ಮೊದಲ ಡೋಸ್ ಮತ್ತು 42,585 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.52 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಫ್ರಾನ್ಸ್‌ನ ಕೋವಿಡ್ ನಿಯಮ ಮತ್ತೆ ಬದಲು, ಜೋಕೋಗೆ ಸಂಕಷ್ಟ: ಫ್ರಾನ್ಸ್‌ನ ಕೋವಿಡ್ ನಿಯಮದಲ್ಲಿ ಮತ್ತೊಮ್ಮೆ ಬದಲಾವಣೆಯಾಗಿದ್ದು, ಕೋವಿಡ್ ಲಸಿಕೆ ಪಡೆಯದೆ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದ ವಿಶ್ವ ನಂ.1 ಟೆನಿಸಿಗ ನೋವಾಕ್ ಜೋಕೋವಿಚ್‌ಗೆ ಮತ್ತೆ ಸಂಕಷ್ಟಎದುರಾಗಿದೆ. ಹೊಸ ನಿಯಮದ ಪ್ರಕಾರ, 4 ತಿಂಗಳ ಹಿಂದೆ ಸೋಂಕು ತಗುಲಿದ್ದರಷ್ಟೇ ಕೋವಿಡ್ ಲಸಿಕೆ ಪಡೆಯದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.
ಟೂರ್ನಿ ಮೇ ತಿಂಗಳಲ್ಲಿ ನಡೆಯಲಿದ್ದು, ಕಳೆದ ಡಿಸೆಂಬರ್ 16ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದ ಜೋಕೋವಿಚ್, ಲಸಿಕೆ ಪಡೆದರಷ್ಟೇ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕಳೆದ ವಾರವಷ್ಟೇ ಕೋವಿಡ್‌ಗೆ ತುತ್ತಾಗಿ 6 ತಿಂಗಳ ವರೆಗೂ ಲಸಿಕೆ ಪಡೆಯದೆ ಟೂರ್ನಿಯಲ್ಲಿ ಆಡಬಹುದು ಎಂದು ಫ್ರಾನ್ಸ್ ಸರ್ಕಾರ ತಿಳಿಸಿತ್ತು. ನಿಯಮದಲ್ಲಿ ಬದಲಾವಣೆಯಾಗಿರುವ ಕಾರಣ, ಆಸ್ಪ್ರೇಲಿಯನ್ ಓಪನ್‌ನಿಂದ ಹೊರಬಿದ್ದಂತೆ ಫ್ರೆಂಚ್ ಓಪನ್‌ನಲ್ಲಿ ಆಡುವ ಅರ್ಹತೆಯನ್ನೂ ಜೋಕೋವಿಚ್ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
