Asianet Suvarna News Asianet Suvarna News

Coronavirus ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಸಂಖ್ಯೆ 2,342ಕ್ಕೆ ಏರಿಕೆ!

ಚೀನಾದಲ್ಲಿ ಏರಿಕೆಯಾದ ಕೋವಿಡ್ ಪ್ರಕರಣ ಸಂಖ್ಯೆ ಭಾರತದಲ್ಲೂ ಆತಂಕ ಸೃಷ್ಟಿಸಿತ್ತು. ಆದರೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ನಿಯಂತ್ರಣದಲ್ಲಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ದಾಖಲಾದ ಕೋವಿಡ್ ಪ್ರಕರಣ ಸಂಖ್ಯೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

India reports 171 covid 19 cases last 24 hours active case tally to 2342 says Health Ministry report ckm
Author
First Published Jan 11, 2023, 5:23 PM IST

ನವದೆಹಲಿ(ಜ.11): ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಿಂದ ವಿಶ್ವದಲ್ಲೇ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭೀತಿ ಭಾರತಕ್ಕೂ ಆವರಿಸಿತ್ತು. ಆದರೆ ಭಾರತದಲ್ಲಿ ಇದುವರೆಗೂ ಕೋವಿಡ್ ಪ್ರಕರಣ ಸಂಖ್ಯೆ ನಿಯಂತ್ರಣದಲ್ಲಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 171 ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ಸ್ರಕಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,342ಕ್ಕೆ ಏರಿಕೆಯಾಗಿದೆ. ಇಷ್ಟಾದರೂ ಭಾರತದಲ್ಲಿ ಕೋವಿಡ್ ಪ್ರಕರಣ ಸಂಪೂರ್ಣ ನಿಯಂತ್ರಣದಲ್ಲಿದೆ. ಚೀನಾ ಸೇರಿದಂತೆ ಇತರ ದೇಶಗಳಲ್ಲಿನ ಕೋವಿಡ್ ಕಾರಣದಿಂದ ಭಾರತದಲ್ಲೂ ಹೈ ಅಲರ್ಟ್ ಘೋಷಿಸಲಾಗಿತ್ತು. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿರುವ ಕಾರಣ ಇದೀಗ ನಿಯಮಗಳು ಸಡಿಲಗೊಂಡಿವೆ.

ಕಳೆದ 24 ಗಂಟೆಯಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 148. ಇನ್ನು ಗುಣಮುಖರಾದವರ ಸರಾಸರಿ ಶೇಕಡಾ 98.8. ಪ್ರತಿ ದಿನದ ಪಾಸಿಟಿವಿಟಿ ರೇಟ್ 0.09ರಷ್ಟಿದೆ. ವಾರದ ಕೋವಿಡ್ ಪಾಸಿಟಿವಿಟಿ ರೇಟ್ 0.11ರಷ್ಟಿದೆ. ಇನ್ನು ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಶೇಕಡಾ 1.19. ಕಳೆದ 24 ಗಂಟೆಯಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 24 ಏರಿಕೆಯಾಗಿದೆ. ಕೋವಿಡ್ ಆತಂಕದಿಂದ ಪರೀಕ್ಷೆ ಹೆಚ್ಚಿಸಲಾಗಿದೆ.  ನಿನ್ನೆ 1,80,926 ಮಾದರಿ ಸಂಗ್ರಹಿಸಲಾಗಿದೆ.

ಕರ್ನಾಟಕದ ಮೇಲೆ ‘ಚೀನಾ ಕೊರೋನಾ ಅಲೆ’ ಪ್ರಭಾವವಿಲ್ಲ?

ರಾಜ್ಯಗಳ ಪೈಕಿ ಕೇರಳ ಅತೀ ಹೆಚ್ಚು ಸಕ್ರಿಯ ಪ್ರಕರಣಗಳ ರಾಜ್ಯವಾಗಿದೆ. ಕೇರಳದಲ್ಲಿ 1,342 ಸಕ್ರಿಯ ಪ್ರಕರಣಗಳಿವೆ. ಇನ್ನು ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 210 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇನ್ನು ಕಳೆದ 24 ಗಂಟೆಯಲ್ಲಿ ಗರಿಷ್ಠ ಪ್ರಕರಣ ದಾಖಲಾದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ . ಮಹಾರಾಷ್ಟ್ರದಲ್ಲಿ 19 ಹೊಸ ಪ್ರಕರಣ ದಾಖಲಾಗಿದೆ. 

ಬೆಂಗಳೂರಲ್ಲಿ ಕೋವಿಡ್ ಆತಂಕ
ಬೆಂಗಳೂರಿನಲ್ಲಿ ಮಂಗಳವಾರ 29 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.0.55 ದಾಖಲಾಗಿದೆ. ಸೋಂಕಿನಿಂದ 22 ಜನ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ 172 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1829 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 130 ಮಂದಿ ಮೊದಲ ಡೋಸ್‌, 538 ಮಂದಿ ಎರಡನೇ ಡೋಸ್‌ ಮತ್ತು 1161 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 5700 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.1667 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, 681 ರಾರ‍ಯಪಿಡ್‌ ಆ್ಯಂಟಿಜಿನ್‌ ಪರೀಕ್ಷೆಗೆ ಮತ್ತು 986 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದರು. 871 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 90 ಮಂದಿ ಮೊದಲ ಡೋಸ್‌, 21 ಮಂದಿ ಎರಡನೇ ಡೋಸ್‌ ಮತ್ತು 562 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಾರೆ

ಮೊದಲ ಬಾರಿಗೆ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ, ಭಾರತ ಸೇರಿ ವಿಶ್ವಕ್ಕೇ ಆತಂಕ!

ಕಳೆದ 24 ಗಂಟೆಯಯಲ್ಲಿ ದೇಶದಲ್ಲಿ 171 ಕೋವಿಡ್ ಕೇಸ್ ದಾಖಲಾಗಿದ್ದರೆ, ಜವರಿ 10ರ ಬೆಳಗ್ಗೆ 121 ಕೇಸ್ ದಾಖಲಾಗಿತ್ತು. ಹೊಸ ಪ್ರಕರಣದಲ್ಲಿ ಅಲ್ಪ ಏರಿಕೆಯಾಗಿದ್ದರೂ ಯಾವುದೇ ಆತಂಕದ ಪರಿಸ್ಥಿತಿ ಭಾರತದಲ್ಲಿಲಲ್ಲ.  

Follow Us:
Download App:
  • android
  • ios