ಕರ್ನಾಟಕದ ಮೇಲೆ ‘ಚೀನಾ ಕೊರೋನಾ ಅಲೆ’ ಪ್ರಭಾವವಿಲ್ಲ?

3 ವಾರ ಕಳೆದರೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣ, ಒಬ್ಬರಲ್ಲೂ ಪತ್ತೆಯಾಗಿಲ್ಲ ಬಿಎಫ್‌.7 ರೂಪಾಂತರಿ, ಹೊಸವರ್ಷದಿಂದೀಚೆಗೆ ಒಬ್ಬರ ಸಾವೂ ಆಗಿಲ್ಲ, ವಾರದಿಂದ ವಾರಕ್ಕೆ ಹೊಸ ಪ್ರಕರಣಗಳ ಇಳಿಮುಖ. ನಾಲ್ಕನೆ ಅಲೆ ಆತಂಕ ದೂರ: ತಜ್ಞರ ವಿಶ್ಲೇಷಣೆ 

No Impact of China Wave on Karnataka grg

ಬೆಂಗಳೂರು(ಜ.11): ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಆರ್ಭಟ ಆರಂಭವಾಗಿ ಮೂರು ವಾರ ಕಳೆದರೂ ರಾಜ್ಯದಲ್ಲಿ ಸೋಂಕಿನ ಹೊಸ ಪ್ರಕರಣ, ಪಾಸಿಟಿವಿಟಿ ದರ, ಸಾವು, ಆಸ್ಪತ್ರೆ ದಾಖಲಾತಿ ಸೇರಿದಂತೆ ಕೊರೋನಾ ಎಲ್ಲಾ ಅಂಶಗಳು ಸಂಪೂರ್ಣ ನಿಯಂತ್ರಣದಲ್ಲಿವೆ. ಮಾತ್ರವಲ್ಲದೇ ಒಬ್ಬರಲ್ಲಿಯೂ ಬಿಎಫ್‌.7 ರೂಪಾಂತರಿ ಪತ್ತೆಯೇ ಆಗಿಲ್ಲ. ಹೊಸವರ್ಷದಿಂದೀಚೆಗೆ ಒಬ್ಬರ ಸಾವೂ ಆಗಿಲ್ಲ. ವಾರದಿಂದ ವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಇಳಿಮುಖ ಕೂಡಾ ಆರಂಭವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಉಂಟಾಗುವ ಆತಂಕ ದೂರವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಡಿಸೆಂಬರ್‌ ಮೂರನೇ ವಾರದಲ್ಲಿ ನೆರೆಯ ಚೀನಾದಲ್ಲಿ ಕೊರೋನಾ ಹೊಸ ರೂಪಾಂತರಿ ಬಿಎಫ್‌.7 ಪತ್ತೆಯಾಗಿ ಅತ್ಯಂತ ವೇಗವಾಗಿ ಹಬ್ಬಿತ್ತು. ಕೆಲ ದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗೆ ಉಂಟಾಗಿ ಕೊರೋನಾ ನಾಲ್ಕನೇ ಅಲೆ ಎಂದು ಕರೆಯಲಾಗಿತ್ತು. ಜತೆಗೆ ಭಾರತಕ್ಕೂ ಹೊಸ ರೂಪಾಂತರಿ ದಾಳಿ ಮಾಡುವ ಆತಂಕ ಉಂಟಾಗಿತ್ತು. ಇದರಿಂದಲೇ ವಿದೇಶದಿಂದ ಆಗಮಿಸುವವರ ಸೋಂಕು ತಪಾಸಣೆ ಆರಂಭಿಸಿ, ರಾಜ್ಯಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿತ್ತು. ಕರ್ನಾಟಕ ಸರ್ಕಾರವು ಕೂಡಾ ಮಾಸ್‌್ಕಗೆ ಸಲಹೆ ನೀಡಿ, ಸೋಂಕು ಪರೀಕ್ಷೆ, ವಂಶವಾಹಿ ಪರೀಕ್ಷೆ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿತ್ತು. ಸದ್ಯ ಮೂರು ವಾರಗಳಾಗಿದ್ದು, ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಹೊಸ ಪ್ರಕರಣ 30 ಆಸುಪಾಸಿನಲ್ಲಿದ್ದು, ಪಾಸಿಟಿವಿಟಿ ದರ ಸರಾಸರಿ 0.3ರಷ್ಟಿದೆ. ಆಸ್ಪತ್ರೆಯ ನಾಲ್ಕು ಮಂದಿ ಮಾತ್ರಚಿಕಿತ್ಸೆ (ಸಾಮಾನ್ಯ ವಾರ್ಡ್‌ನಲ್ಲಿ) ಪಡೆಯುತ್ತಿದ್ದಾರೆ.

ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಪಡೆದವರಿಗೆ ಹೆಚ್ಚು ಪ್ರತಿಕಾಯ: ಅಧ್ಯಯನ

ಇಳಿಮುಖ ಆರಂಭ:

ಡಿಸೆಂಬರ್‌ ಕೊನೆಯ ವಾರ ಹಾಗೂ ಜನವರಿ ಮೊದಲ ವಾರಕ್ಕೆ ಹೋಲಿಸಿದರೆ ಸೋಂಕು ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಅರ್ಧದಷ್ಟುಕಡಿಮೆಯಾಗಿದೆ. ಡಿ.28 ರಿಂದ ಜ.3ವರೆಗೂ 67 ಸಾವಿರ ಸೋಂಕು ಪರೀಕ್ಷೆ ನಡೆದಿದ್ದು, 465 ಪ್ರಕರಣಗಳು ವರದಿಯಾಗಿ ಶೇ.0.6ರಷ್ಟುಪಾಸಿಟಿವಿಟಿ ದರ ದಾಖಲಾಗಿತ್ತು. ಒಬ್ಬರು ಸಾವಿಗೀಡಾಗಿದ್ದರು. ಆದರೆ, ಜ.4 ರಿಂದ ಜ.10ವರೆಗೂ 67 ಸಾವಿರ ಪರೀಕ್ಷೆ ನಡೆಸಿದ್ದು, 235 ಪ್ರಕರಣಗಳು ವರದಿಯಾಗಿ ಶೇ.0.3ರಷ್ಟುಪಾಸಿಟಿವಿಟಿ ದರ ದಾಖಲಾಗಿತ್ತು. ಸಾವು ಒಂದೂ ವರದಿಯಾಗಿಲ್ಲ. ಈ ಮೂಲಕ ಒಂದು ವಾರಕ್ಕೆ ಸೋಂಕು ಅರ್ಧಕ್ಕರ್ಧ ತಗ್ಗಿದೆ ಎನ್ನುತ್ತಿವೆ ಅಂಶ ಅಂಶಗಳು.

Corona Crisis: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ

ಒಬ್ಬರಲ್ಲೂ ಪತ್ತೆಯಾಗಿಲ್ಲ ಬಿಎಫ್‌.7:

ಡಿ.24 ರಿಂದ ವಿದೇಶದಿಂದ ಆಗಮಿಸಿದವರ ಪೈಕಿ ಒಟ್ಟು 25 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲರ ಮಾದರಿಯನ್ನು ವಂಶವಾಹಿ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಈ ಹಿಂದೆ ಕಾಣಿಸಿಕೊಂಡಿರುವ ಒಮಿಕ್ರೋನ್‌ ತಳಿ ತಗುಲಿರುವುದು ಪತ್ತೆಯಾಗಿದೆ. ಹೊಸ ತಳಿಯಾದ ಬಿಎಫ್‌7 ದೃಢಪಟ್ಟಿಲ್ಲ. ಜತೆಗೆ ಸೋಂಕಿನ ತೀವ್ರತೆ ಹೆಚ್ಚಿರುವವರ ವಂಶವಾಹಿ ಪರೀಕ್ಷೆ ನಡೆಸಿದ್ದು, ಯಾರಲ್ಲಿಯೂ ಬಿಎಫ್‌ 7 ಪತ್ತೆಯಾಗಿಲ್ಲ. ಹೊಸ ವರ್ಷದಿಂದ ಈಚೆಗೆ (10 ದಿನ) ಸೋಂಕು ಹೆಚ್ಚಿರುವ ದೇಶಗಳಿಂದ ಬಂದ 1,118 ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದು, ಕೇವಲ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ವರ್ಷ ಸಂಭ್ರಮದಿಂದಲೂ ಹೆಚ್ಚಾಗಿಲ್ಲ:

ಇನ್ನೊಂದೆಡೆ ಹೊಸವರ್ಷ ಸಂಭ್ರಮಾಚರಣೆಯಿಂದ ಸೋಂಕು ಹೆಚ್ಚಾಗುತ್ತದೆ ಎಂಬ ಆತಂಕವೂ ಇತ್ತು. ಆದರೆ, 10 ದಿನ ಕಳೆದಿದ್ದು, ಪಾಸಿಟಿವಿಟಿ ದರ, ಸೋಂಕಿತರ ಆಸ್ಪತ್ರೆ ದಾಖಲಾತಿ ಹೆಚ್ಚಳವಾಗಿಲ್ಲ. ಹೊಸವರ್ಷದಿಂದೀಚೆಗೆ ಒಬ್ಬ ಕೊರೋನಾ ಸೋಂಕಿತರ ಸಾವು ಕೂಡಾ ವರದಿಯಾಗಿಲ್ಲ.

Latest Videos
Follow Us:
Download App:
  • android
  • ios