Asianet Suvarna News Asianet Suvarna News

India HIV Case ಏಡ್ಸ್ ಸೋಂಕು, ದೇಶದಲ್ಲೇ ಕರ್ನಾಟಕ ನಂ.3!

- ಕಳೆದ 10 ವರ್ಷದಲ್ಲಿ ದೇಶದಲ್ಲಿ 17 ಲಕ್ಷ ಜನರಿಗೆ ಎಚ್‌ಐವಿ
- ಆಂಧ್ರದಲ್ಲಿ 3.18 ಲಕ್ಷ ಜನರಿಗೆ ಸೋಂಕು: ದೇಶದಲ್ಲಿ ನಂ.1
- ಕರ್ನಾಟಕದಲ್ಲಿ 2.12 ಲಕ್ಷ ಜನರಿಗೆ ಎಚ್‌ಐವಿ
 

India reports 17 lakh HIV positive last 10 years karnataka rank 3rd ckm
Author
Bengaluru, First Published Apr 25, 2022, 4:05 AM IST

ನವದೆಹಲಿ(ಏ.24): ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 17 ಲಕ್ಷ ಜನರಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಎಚ್‌ಐವಿ ಸೋಂಕು ತಗುಲಿದೆ. ಈ ಪೈಕಿ ಅತಿ ಹೆಚ್ಚು ಸೋಂಕು ತಗುಲಿದ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಏಡ್‌್ಸ ನಿಯಂತ್ರಣ ಸಂಸ್ಥೆ (ನ್ಯಾಕೊ) ತಿಳಿಸಿದೆ.

ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಉತ್ತರಿಸಿದ ನ್ಯಾಕೋ, ‘2011-21ರವರೆಗೆ ದೇಶದಲ್ಲಿ ಒಟ್ಟು 17,08,777 ಜನರು ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 3.18 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದು, ಇದು ಅತಿ ಹೆಚ್ಚು ಎಚ್‌ಐವಿ ಸೋಂಕು ತಗುಲಿದ ರಾಜ್ಯ ಎನ್ನಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ 2.84 ಲಕ್ಷ ಹಾಗೂ ಕರ್ನಾಟಕದಲ್ಲಿ 2.12 ಲಕ್ಷ ಜನರಿಗೆ ಎಚ್‌ಐವಿ ತಗುಲಿದ್ದು, ಇವು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. ತಮಿಳುನಾಡಿನಲ್ಲಿ 1.16 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ 1.10 ಲಕ್ಷ ಜನರು ಸೋಂಕಿಗೀಡಾಗಿದ್ದು, ಈ ರಾಜ್ಯಗಳು ನಾಲ್ಕು ಹಾಗೂ ಐದನೇ ಸ್ಥಾನವನ್ನು ಪಡೆದುಕೊಂಡಿವೆ’ ಎಂದು ತಿಳಿಸಿದೆ.

Free Test ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಉಚಿತ!

ಇದನ್ನು ಹೊರತುಪಡಿಸಿ ಕಳೆದ 10 ವರ್ಷದಲ್ಲಿ 15,782 ಜನರಿಗೆ ರಕ್ತದ ಸಂಪರ್ಕದ ಮೂಲಕ ಹಾಗೂ 4,423 ಜನರಿಗೆ ಎಚ್‌ಐವಿ ಪೀಡಿತ ತಾಯಿಯ ಮೂಲಕ ಸೋಂಕು ತಗುಲಿದೆ ಎಂದು ನ್ಯಾಕೋ ಮಾಹಿತಿ ನೀಡಿದೆ.

2011-12ರಲ್ಲಿ 2.4 ಲಕ್ಷ ಜನರಿಗೆ ಸೋಂಕು ತಗುಲಿತ್ತು. ಅದೇ 2020-21ರಲ್ಲಿ ಎಚ್‌ಐವಿ ಸೋಂಕು ತಗುಲಿದವರ ಸಂಖ್ಯೆ 85,268ಕ್ಕೆ ಇಳಿಕೆಯಾಗಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 10 ವರ್ಷಗಳಲ್ಲಿ ಹೊಸ ಎಚ್‌ಐವಿ ಸೋಂಕಿತರಲ್ಲಿ ಇಳಿಕೆ ಕಂಡುಬರುತ್ತಿದೆ. 2020ರಲ್ಲಿ ಒಟ್ಟಾರೆ 81,430 ಮಕ್ಕಳು ಸೇರಿದಂತೆ 23.18 ಲಕ್ಷ ಜನ ಎಚ್‌ಐವಿ ಸೋಂಕಿತರು ದೇಶದಲ್ಲಿ ಇದ್ದಾರೆ ಎಂದು ತಿಳಿಸಿದೆ.

ಎಚ್‌ಐವಿ ಸೋಂಕು ಕುರಿತು ಜನಜಾಗೃತಿ ಅಗತ್ಯ
ಎಚ್‌ಐವಿ ಸೋಂಕಿನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬಳ್ಳಾಪುರ ಅಪರ ಜಿಲ್ಲಾಧಿ​ಕಾರಿ ವಿಜಯಾ ಈ. ರವಿಕುಮಾರ್‌ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿ​ಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಎಚ್‌ಐವಿ ಸೋಂಕಿತರಿಗೆ ಸಾಮಾಜಿಕ ಸವಲತ್ತುಗಳ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖಾ ಮುಖ್ಯಸ್ಥರಿಗೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಚ್‌ಐವಿ ಸೋಕಿಂತರು ಮತ್ತು ಬಾಧಿ​ತರಿಗಿರುವ ಸಾಮಾಜಿಕ ಸೌಲಭ್ಯಗಳ ಕುರಿತು ಉಚಿತ ಸಮಾಲೋಚನ ಸಭೆಗಳನ್ನು ಕೈಗೊಳ್ಳುವ ಮೂಲಕ ಸೋಂಕಿತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಬೆಂ.ಗ್ರಾ ಜಿಲ್ಲೆಯಲ್ಲಿ 3846 ಪ್ರಕರಣ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೆ 3,846 ಮಂದಿ ಎಚ್‌ಐವಿ ಸೋಂಕಿತರನ್ನು ಗುರುತಿಸಲಾಗಿದ್ದು, 162 ಮಂದಿ ಮರಣ ಹೊಂದಿದ್ದಾರೆ. ರಾಜ್ಯದ ಎ.ಆರ್‌.ಟಿ. ಕೇಂದ್ರಗಳಲ್ಲಿ ಒಟ್ಟು 2838 ಜನರು ಚಿಕಿತ್ಸೆಗೆ ನೋಂದಾಯಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 864 ಮಂದಿ ಸೋಂಕಿತರು ಜಿಲ್ಲೆಯ ಎ.ಆರ್‌.ಟಿ. ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾ​ಧಿಕಾರಿ ಡಾ.ತಿಪ್ಪೇಸ್ವಾಮಿ, ಕುಟುಂಬ ಕಲ್ಯಾಣಾಧಿ​ಕಾರಿ ಡಾ.ಶ್ರೀನಿವಾಸ್‌ ಸೇರಿದಂತೆ ಆರೋಗ್ಯಾಧಿ​ಕಾರಿಗಳು ಹಾಗೂ ಸಂಬಂ​ಧಿಸಿದ ಇಲಾಖೆಗಳ ಅ​ಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios