Free Test ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಉಚಿತ!

  • ಆರೋಗ್ಯ ಇಲಾಖೆಯಿಂದ ಸುತ್ತೋಲೆ ಜಾರಿ
  • ಸೋಂಕಿತರಲ್ಲಿ ಬಹುತೇಕರು ಬಡವರು
  • ಕೆಲ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಶುಲ್ಕ 
Free test for hiv patients in government hospital Karnataka Health and Family Welfare Department issued circular ckm

ಬೆಂಗಳೂರು(ಮಾ.31): ಸರ್ಕಾರದಲ್ಲಿ ನೋಂದಾಯಿತ ಎಚ್‌ಐವಿ ಸೋಂಕಿತರಿಗೆ ಎಲ್ಲ ತರಹದ ಪ್ರಯೋಗಶಾಲಾ ವೈದ್ಯಕೀಯ ಪರೀಕ್ಷೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸೋಂಕಿತರಲ್ಲಿ ಬಹುತೇಕರು ಬಡವರಾಗಿದ್ದಾರೆ. ಸೋಂಕಿತರು ಇತರೆ ಸೋಂಕುಗಳಿಗೆ ಒಳಪಟ್ಟಸಂದರ್ಭದಲ್ಲಿ ಅಗತ್ಯವಾದ ಎಕ್ಸ್‌ರೇ, ಅಲ್ಟಾ್ರಸೌಂಡ್‌ ಸೇರಿ ವಿವಿಧ ಪರೀಕ್ಷೆಗಳು ಮತ್ತು ಎಆರ್‌ಟಿ ಚಿಕಿತ್ಸೆಗೆ ಒಳಪಡುವ ಮುನ್ನ ಪೂರ್ವಭಾವಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಹಾಗೂ ಉಚಿತವಾಗಿ ಮಾಡುವಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ.

ಎಚ್‌ಐವಿ ಪೀಡಿತರಿಗೆ ಉಚಿತ ಪರೀಕ್ಷೆ ನಡೆಸಬೇಕು ಎಂಬ ಆದೇಶ ಈಗಾಗಲೇ ಜಾರಿಯಲ್ಲಿದ್ದರೂ ಕೆಲ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಶುಲ್ಕ ವಿಧಿಸುತ್ತಿರುವುದು ರಾಜ್ಯ ಏಡ್‌್ಸ ತಡೆ ಸೊಸೈಟಿಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತ ಡಿ. ರಂದೀಪ್‌ ಸುತ್ತೋಲೆ ಹೊರಡಿಸಿದ್ದಾರೆ. 

First woman cured of HIV: ಎಚ್‌ಐವಿಯಿಂದ ಮಹಿಳೆ ಗುಣಮುಖ: ವಿಶ್ವದಲ್ಲೇ ಮೊದಲು!

ಎಚ್‌ಐವಿ ಹರಡುವಿಕೆ ನಿರ್ಮೂಲನಾ ಆಂದೋಲನ
ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಆರೋಗ್ಯ ಇಲಾಖೆಯ ಕಾರ್ಯಕ್ರಮ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡುವಿಕೆ ನಿರ್ಮೂಲನಾ ಆಂದೋಲನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಗರದ ಉಪವಿಭಾಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿತು.ಶಾಸಕ ಪರಣ್ಣ ಮುನವಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಾತೃ ದೇವೋಭವ ಎಂಬ ವಾಕ್ಯಕ್ಕೆ ಮಹತ್ವವಿದೆ. ಹೆಣ್ಣು ಪೂಜಿಸುವ ದೇಶ ಭಾರತ ಬಿಟ್ಟರೆ ಮತ್ತೆಲ್ಲೂ ಸಿಗದು. ಅಂತಹ ಪವಿತ್ರ ದೇಶದಲ್ಲಿರುವ ನಾವು- ನೀವೆಲ್ಲರೂ ಧನ್ಯರು ಎಂದರು.ಗರ್ಭಿಣಿಯರಲ್ಲಿ ಎಚ್‌ಐವಿ ಕಾಣಿಸಿಕೊಂಡಲ್ಲಿ ಮಗುವಿಗೆ ಹರಡದಂತೆ ಚಿಕಿತ್ಸೆಗೆ ಒಳಪಟ್ಟಲ್ಲಿ ಆರೋಗ್ಯವಂತ ಮಗು ಜನಿಸಲು ಸಾಧ್ಯ ಎಂದರು.

World AIDS Day: ಆರೋಗ್ಯ ಇಲಾ​ಖೆಗೆ ಸವಾ​ಲಾದ ಎಚ್‌​ಐವಿ ಪೀಡಿ​ತ​ರು..!

ಗರ್ಭಿಣಿರಿಗೆ ಸೀಮಂತ; ಎಚ್‌ಐವಿ ತಡೆಗಟ್ಟುವ ಬಗ್ಗೆ ಜಾಗೃತಿ
ಪಾಂಡವಪುರ ಪಟ್ಟಣದಲ್ಲಿ ಗರ್ಭಿಣಿರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಿ ಎಚ್‌ಐವಿ ಸೊಂಕು ತಡೆಗಟ್ಟುವ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಲಾಯಿತು.ಪಟ್ಟಣದ ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆಷನ್‌ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಸಹಯೋಗದೊಂದಿಗೆ ಗರ್ಭಿಣಿ ಸ್ತ್ರೀಯರಿಗೆ ಆಯೋಜಿಸಿದ್ದ ತಾಯಿಯಿಂದ ಮಗುವಿಗೆ ಹೆಚ್‌ಐವಿ ಸೊಂಕು ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನಕ್ಕೆ ಕಾರ್ಯಕ್ರಮಕ್ಕೆ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಆಶಾಲತಾ ಚಾಲನೆ ನೀಡಿದರು.

ನಂತರ ಗರ್ಭಿಣಿ ಸ್ತ್ರೀಯರಿಗೆ, ಹರಿಶಿನ, ಕುಂಕುಮ, ಹೂ, ಬಳೆ ವಿತರಿಸಿ, ಪ್ರೀತಿಯಿಂದ ಸೀಮಂತ ಮಾಡಲಾಯಿತು. ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತ ವಹಿಸಿ ಹೆಚ್‌ಐವಿ ಮುಕ್ತ ಮಗುವಿಗೆ ಜನನ ಹಾಗೂ ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ವೈದ್ಯರು ಸಂದೇಶ ನೀಡಿದರು.

ಎಚ್‌ಐವಿ ಬಾಧಿತರಿಗೆ ಸರ್ಕಾರದ ಸೌಲಭ್ಯ 
ಎಚ್‌ಐವಿ ಬಾಧಿತರಿಗೆ ವಸತಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಚ್‌ಐವಿ ಸೋಂಕಿತರಿಗೆ ಸಾಮಾಜಿಕ ಸವಲತ್ತುಗಳ ಒದಗಿಸುವ ಕುರಿತಂತೆ ಪರಿಶೀಲನಾ ಸಭೆ ನಡೆಸಿದ ಅವರು, ಎಚ್‌ಐವಿ ಬಾಧಿತರು, ಅಲೆಮಾರಿಗಳು, ಮಾಜಿ ದೇವದಾಸಿಯರು ಸೇರಿದಂತೆ ವಿಶೇಷ ಗುಂಪಿನ ಜನರಿಗೆ ವಸತಿ ಸೌಕರ್ಯ ಕಲ್ಪಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜೀವ ಗಾಂಧಿ ವಸತಿ ನಿಗಮದಿಂದ ಎಚ್‌ಐವಿ ಬಾಧಿತರ ಪೈಕಿ ವಸತಿ ರಹಿತರಿಗೆ ಮನೆ ಒದಗಿಸಲಾಗುವುದು. ಸದರಿ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ರಾಜ್ಯದಲ್ಲಿ ಎಚ್‌ಐವಿ ಸೋಂಕಿತರಿಗೆ ಸರ್ಕಾರದಿಂದ ಹಲವು ಸವಲತ್ತುಗಳನ್ನು ನೀಡಲು ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯಲ್ಲಿರುವ ಎಚ್‌ಐವಿ ಸೋಂಕಿತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

Latest Videos
Follow Us:
Download App:
  • android
  • ios