Asianet Suvarna News Asianet Suvarna News

ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ, JN.1 ಪ್ರಕರಣ 63ಕ್ಕೆ ಏರಿಕೆ, ಸಕ್ರಿಯ ಕೊರೋನಾ 4054!

ಸಾಲು ಸಾಲು ರಜೆ, ಹೊಸ ವರ್ಷ ಸಂಭ್ರಮಾಚರಣೆ ನಡುವೆ ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ ಎದುರಾಗಿದೆ. ಹೊಸ ತಳಿ JN.1 ಪ್ರಕರಣ, ಕೋವಿಡ್ ವೈರಸ್ ಜೊತೆಜೊತೆಯಾಗಿ ಭಾರತದ ಆತಂಕ ಹೆಚ್ಚಿಸಿದೆ. ಇದೀಗ ಭಾರತದಲ್ಲಿ ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ 4 ಸಾವಿರ ಗಡಿದಾಟಿದ್ದರೆ, ಹೊಸ ತಳಿ JN.1 ಪ್ರಕರಣ  63ಕ್ಕೆ ಏರಿಕೆಯಾಗಿದೆ.

India Report 63 JN1 virus total covid 19 active case crossed 4000 mark ckm
Author
First Published Dec 25, 2023, 4:22 PM IST

ನವದೆಹಲಿ(ಡಿ.25) ಕ್ರಿಸ್ಮಸ್ ರಜೆ, ಹೊಸ ವರ್ಷ ಸಂಭ್ರಮಾಚರಣೆಯಿಂದ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಭರ್ತಿಯಾಗಿದೆ. ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ  ಕೋವಿಡ್ ಆತಂಕವೂ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣ ಸಂಖ್ಯೆ. ಇದರ ಜೊತೆಗೆ ಹೊಸ ಕೋವಿಡ್ ರೂಪಾಂತರಿ ತಳಿ JN.1 ಪ್ರಕರಣದ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ದೇಶದಲ್ಲಿ 63 ಹೊಸ ತಳಿ JN.1 ಪತ್ತೆಯಾಗಿದೆ. ಇತ್ತ ಸಕ್ರೀಯ ಕೋವಿಡ್ ಸಂಖ್ಯೆ 4,054ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ವರ್ಷಾಂತ್ಯದಲ್ಲಿ ಒಟ್ಟು 63 JN.1 ಪ್ರಕರಣ ಪತ್ತೆಯಾಗಿದೆ. ಈ ಪೈಕಿ 34 ಪ್ರಕರಣ ಗೋವಾದಲ್ಲಿ ಪತ್ತೆಯಾಗಿದ್ದರೆ, 9 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.ಇನ್ನು ಕರ್ನಾಟಕದಲ್ಲೂ ಹೊಸ ತಳಿ ಆತಂಕ ಸೃಷ್ಟಿಸಿದೆ. ಇದುವರೆಗೆ 8 ಹೊಸ ತಳಿ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಹಾಗೂ ತೆಲಂಗಾಣದಲ್ಲಿ 2 ಹೊಸ ತಳಿ JN.1 ಪ್ರಕರಣ ಪತ್ತೆಯಾಗಿದೆ.

ಕೋವಿಡ್ ಮೇಲೆ ನಿಗಾ ಹೆಚ್ಚಿಸಿ: ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ WHO ಎಚ್ಚರಿಕೆ

ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ  JN.1 ಪ್ರಕರಣ ಪೈಕಿ ಒಂಭತ್ತೂ ಪ್ರಕರಣಗಳು ಭಾನುವಾರವೇ ಪತ್ತೆಯಾಗಿದೆ. ಐವರು ಥಾಣೆ ನಿವಾಸಿಗಳಾಗಿದ್ದಾರೆ. ದೇಶದ ಮೊದಲ JN.1 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಆದರೆ ಕೇರಳದಲ್ಲಿ ಇದುವರೆಗೆ 6 ಪ್ರಕರಣ ಪತ್ತೆಯಾಗಿದೆ. ಆದರೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ JN.1 ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ.

JN.1 ಪ್ರಕರಣ ಒಂದೆಡೆಯಾದರೆ, ಭಾರತದಲ್ಲಿನ ಕೋವಿಡ್ ಪ್ರಕರಣ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಡೆಸೆಂಬರ 23 ಹಾಗೂ ಡಿಸೆಂಬರ್ 24ರ ಎರಡೂ ದಿನವೂ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಭಾನುವಾರ 106 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಸೋಂಕು ಪ್ರಕರಣ 344ಕ್ಕೆ ಏರಿಕೆಯಾಗಿತ್ತು.  ಭಾನುವಾರದ ಅಂತ್ಯಕ್ಕೆ   1,441 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು ಈ ಪೈಕಿ ಶೇ.7.35 ರಷ್ಟು ಪಾಸಿಟಿವಿಟಿ ದರದಂತೆ 106 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಪೈಕಿ ಬೆಂಗಳೂರು ನಗರದಲ್ಲೇ 95 ಪ್ರಕರಣ, ಮೈಸೂರು 6, ದಕ್ಷಿಣ ಕನ್ನಡ 2, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿತ್ತು.

 

ಮತ್ತೆ ಕೊರೋನಾ ಕಾಟ: ಜೆಎನ್‌1 ರೂಪಾಂತರಿಗೂ ಶೀಘ್ರ ಬೇರೆ ಲಸಿಕೆ?

ದೇಶದ ಕೋವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಕೇಸ್ ದಾಖಲಾಗುತ್ತಿದೆ. ಮತ್ತೆ ಕೇರಳದಿಂದ ಭಾರತಕ್ಕೆ 4ನೇ ಅಲೆ ಬೀಸುತ್ತಾ ಅನ್ನೋ ಆತಂಕ ಎದುರಾಗಿದೆ. ಆದರೆ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಸದ್ಯ ಕಾಣಿಸಿಕೊಂಡಿರುವುದು ಮೈಲ್ಡ್ ಸಿಂಪ್ಟಮ್ಸ್  ಕೋವಿಡ್ ವೈರಸ್. ಹೀಗಾಗಿ ಆಸ್ಪತ್ರೆ ದಾಖಲಾಗುವ ಪ್ರಮೇಯ ಕಡಿಮೆ. ಯಾರೂ ಆತಂಕಪಡದೆ, ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

Follow Us:
Download App:
  • android
  • ios