ಜೆಎನ್‌.1 ರೂಪಾಂತರಿ ವೈರಸ್‌ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣಗಳು ತೀವ್ರಗೊಳ್ಳದಂತೆ ಹಾಗೂ ಸಾವು ಸಂಭವಿಸದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ ಸೀರಂ ಸಂಸ್ಥೆ ಪ್ರತ್ಯೇಕ ಲಸಿಕೆಯೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರ ಪರವಾನಗಿಗೆ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇಳಲಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ(ಡಿ.23): ಈ ಹಿಂದಿನ ಕೋವಿಡ್‌ ಅಲೆಗಳಲ್ಲಿ ಕೋವಿಶೀಲ್ಡ್‌ ಲಸಿಕೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಸಾವಿನಿಂದ ಕಾಪಾಡಿದ ಖ್ಯಾತಿಯುಳ್ಳ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಇದೀಗ ಜಗತ್ತನ್ನು ಕಂಗೆಡಿಸಿರುವ ಜೆಎನ್‌.1 ಕೊರೋನಾ ರೂಪಾಂತರಿ ತಳಿಯ ವಿರುದ್ಧವೂ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಜೆಎನ್‌.1 ರೂಪಾಂತರಿ ವೈರಸ್‌ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣಗಳು ತೀವ್ರಗೊಳ್ಳದಂತೆ ಹಾಗೂ ಸಾವು ಸಂಭವಿಸದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ ಸೀರಂ ಸಂಸ್ಥೆ ಪ್ರತ್ಯೇಕ ಲಸಿಕೆಯೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರ ಪರವಾನಗಿಗೆ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇಳಲಿದೆ ಎಂದು ಮೂಲಗಳು ಹೇಳಿವೆ.

ಹಿಂದಿನ ಕೋವಿಡ್‌ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಈ ಕುರಿತು ಕೆಲ ಮಾಧ್ಯಮ ಸಂಸ್ಥೆಗಳ ಜೊತೆ ಮಾತನಾಡಿರುವ ಸೀರಂ ಸಂಸ್ಥೆಯ ವಕ್ತಾರ, ‘ಅಮೆರಿಕ ಮತ್ತು ಯುರೋಪ್‌ನಲ್ಲಿ ನಾವು ಈಗಾಗಲೇ ಜೆಎನ್‌.1 ರೂಪಾಂತರಿಯ ಜೊತೆ ಅತ್ಯಂತ ಸಮೀಪದ ಸಾಮ್ಯತೆ ಹೊಂದಿರುವ ಎಕ್ಸ್‌ಬಿಬಿ1 ರೂಪಾಂತರಿಗೆ ಲಸಿಕೆ ಬಿಡುಗಡೆ ಮಾಡಿದ್ದೇವೆ. ಮುಂದಿನ ತಿಂಗಳುಗಳಲ್ಲಿ ಭಾರತದಲ್ಲೂ ಅದರ ಲೈಸನ್ಸ್‌ಗೆ ಅನುಮತಿ ಕೋರುತ್ತೇವೆ. ಜನರಿಗೆ ಈ ಲಸಿಕೆ ಸಿಗುವಂತೆ ಮಾಡಲು ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ.