ಕೋವಿಡ್ ಮೇಲೆ ನಿಗಾ ಹೆಚ್ಚಿಸಿ: ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ WHO ಎಚ್ಚರಿಕೆ

ಕೋವಿಡ್ ಉಪ ತಳಿಯಾದ ಜೆಎನ್1 ಪ್ರಸರಣ ಹೆಚ್ಚುತ್ತಿರುವ ನಡುವೆ, ಕೋವಿಡ್, ಜೆಎನ್.1 ಹಾಗೂ ಇತರ ಉಸಿರಾಟದ ಕಾಯಿಲೆಗಳ ಮೇಲೆ ಕಣ್ಣಾವಲು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ ತಾಕೀತು ಮಾಡಿದೆ

Increase surveillance on Covid WHO warns Southeast Asian countries including India akb

ನವದೆಹಲಿ: ಕೋವಿಡ್ ಉಪ ತಳಿಯಾದ ಜೆಎನ್1 ಪ್ರಸರಣ ಹೆಚ್ಚುತ್ತಿರುವ ನಡುವೆ, ಕೋವಿಡ್, ಜೆಎನ್.1 ಹಾಗೂ ಇತರ ಉಸಿರಾಟದ ಕಾಯಿಲೆಗಳ ಮೇಲೆ ಕಣ್ಣಾವಲು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸೇರಿ ಆಗ್ನೇಯ ಏಷ್ಯಾದ ದೇಶಗಳಿಗೆ ತಾಕೀತು ಮಾಡಿದೆ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊ ಳ್ಳಬೇಕು ಎಂದು ಜನರಿಗೆ ಸೂಚಿಸಿದೆ.

ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ। ಪೂನಂ ಖೇತ್ರಪಾಲ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿದ್ದು, 'ಕೊರೋನಾ ವೈರಸ್ ಮತ್ತೆ ಜಾಗತಿಕವಾಗಿ ಎಲ್ಲಾ ದೇಶಗಳಲ್ಲಿ ವಿಕಸನಗೊಳ್ಳುತ್ತಿದೆ ಹಾಗೂ ಹೊಸ ರೂಪ ಪಡೆಯುತ್ತಿದೆ. ಪ್ರಸ್ತುತ ಅಧ್ಯ ಯನಗಳು ಜೆಎನ್.1 ರೂಪಾಂತರಿಯಿಂದ ಉಂಟಾಗುವ ಪರಿಣಾಮ ತುಂಬಾ ಕಮ್ಮಿ ಎಂದು ಹೇಳಿವೆ. ಆದರೂ ಇಂಥ ರೂಪಾಂತರಿ ವೈರಸ್‌ಗಳ ಮೇಲೆ ನಾವು ಕಣ್ಣಾವಲು ಇಡಬೇಕು ಹಾಗೂ ಅದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸೋಂಕಿನ ನೈಜ ದತ್ತಾಂಶಗಳನ್ನು ಹಂಚಿಕೊಳ್ಳಬೇಕು.  ಜೆಎನ್‌.1 ಪರಿಣಾಮ ಕುರಿತು ಮತ್ತಷ್ಟು ಅಧ್ಯಯನ ನಡೆಸಬಹುದು' ಎಂದಿದ್ದಾರೆ.

ಸಮುದಾಯಕ್ಕೆ ಹಬ್ಬಿದ ಸೋಂಕು: ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಲ್ಲಿ ಕೋವಿಡ್ ಸೋಂಕು

ಜನರು ಎಚ್ಚರಿಕೆ ವಹಿಸಿ: ಇನ್ನು ಜನತೆಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ಅವರು, ಈಗ ರಜೆ ಬಂದಿವೆ. ಜನರು ರಜಾ ಕಾಲದಲ್ಲಿ ಪ್ರಯಾಣ ಮಾಡುತ್ತಾರೆ ಹಾಗೂ ಹಬ್ಬಾಚರಣೆ ವೇಳೆ ಗುಂಪುಗೂಡುತ್ತಾರೆ. ಇಂಥ ಸಮಯದಲ್ಲಿ ವೈರಸ್ ಪ್ರಸರಣ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನ ರಕ್ಷಣಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅಸ್ವಸ್ಥರಾದಾಗ ಸಕಾಲಿಕ ಚಿಕಿತ್ಸೆ ಪಡೆಯಬೇಕು. 'ಡಬ್ಲ್ಯುಎಚ್‌ ಒ ಅನುಮೋದಿತ ಎಲ್ಲ ಕೋವಿಡ್ ಲಸಿಕೆಗಳು ಜೆಎನ್.1 ಸೇರಿ ಎಲ್ಲಾ ರೂಪಾಂತರಿಗಳ ಮೇಲೆ ಪರಿಣಾಮಕಾರಿಯಾಗಿವೆ. ಸೋಂಕು, ಸಾವು ಹಾಗೂ ಸೋಂಕಿನ ತೀವ್ರತೆ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ಅಭಯ ನೀಡಿದ್ದಾರೆ.

656 ಹೊಸ ಕೋವಿಡ್‌ ಪ್ರಕರಣ, 1 ಸಾವು: ಕೇರಳದಲ್ಲೇ 128 ಕೇಸ್‌

ನವದೆಹಲಿ/ ತಿರುವನಂತಪುರ: ಭಾನುವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ 656 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದೆ. ಈ ಪೈಕಿ ಕೇರಳವೊಂದರಲ್ಲೇ 128 ಹೊಸ ಕೇಸು ದೃಢಪಟ್ಟಿದೆ. ಜೊತೆಗೆ ದಾಖಲಾದ ಒಂದು ಸಾವು ಕೂಡಾ ಕೇರಳದಲ್ಲೇ ಸಂಭವಿಸಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳು 3742ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.


ಬೆಂಗ್ಳೂರಲ್ಲಿ ಕೋವಿಡ್‌ ಶವ ಸಂಸ್ಕಾರಕ್ಕೆ ಬಿಬಿಎಂಪಿ 4 ಚಿತಾಗಾರ ಮೀಸಲು..!

ಕೋವಿಡ್‌ ಶುರುವಾದಾಗಿನಿಂದ ಈವರೆಗೂ 4.50 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.33 ಲಕ್ಷ ಜನ ಸಾವನ್ನಪ್ಪಿದ್ದಾರೆ. ಗುಣಮುಖರ ಪ್ರಕರಣಗಳ ಪ್ರಮಾಣವು ಶೇ.98.81ರಷ್ಟು ಮರಣದರವು ಶೇ.1.19ರಷ್ಟು ದಾಖಲಾಗಿದೆ. ಈವರೆಗೂ 220.67 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ತಿಳಿಸಿದೆ.

Latest Videos
Follow Us:
Download App:
  • android
  • ios