ಸೋಮವಾರ 2183 ಹೊಸ ಕೋವಿಡ್‌ ಕೇಸು ದಾಖಲು ಪಾಸಿಟಿವಿಟಿ ಒಂದೇ ದಿನದಲ್ಲಿ 3 ಪಟ್ಟು ಹೆಚ್ಚಳ ದಿಲ್ಲಿ, ಹರಾರ‍ಯಣ, ಉ.ಪ್ರ.ದಲ್ಲಿ ತೀವ್ರ ಏರಿಕೆ

ನವದೆಹಲಿ(ಏ.19): ದೇಶದಲ್ಲಿ 4ನೇ ಅಲೆಯ ಆತಂಕ ನಡುವೆಯೇ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ ಸೋಮವಾರ ಶೇ.90ರಷ್ಟುಹೆಚ್ಚಾಗಿದೆ. ಸೋಮವಾರ 2,183 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇದು ಭಾನುವಾರದ 1,150 ಪ್ರಕರಣಗಳಿಗಿಂತ ಹೆಚ್ಚೂ ಕಡಿಮೆ ದುಪ್ಪಟ್ಟು.

ಈ ನಡುವೆ, ವಾರದ ಲೆಕ್ಕಾಚಾರಕ್ಕೆ ಹೋಲಿಸಿದರೆ ಕಳೆದ 11 ವಾರದಿಂದ ಇಳಿಯುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆಗೆ ಬ್ರೇಕ್‌ ಬಿದ್ದಿದೆ. ಶನಿವಾರ ಮುಕ್ತಾಯಗೊಂಡ ವಾರದಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಶೇ.35ರಷ್ಟುಏರಿಕೆ ಕಂಡಿದೆ. ದಿಲ್ಲಿ, ಉತ್ತರಪ್ರದೇಶ, ಹರಾರ‍ಯಣಾ ಸೇರಿದಂತೆ ದಿಲ್ಲಿ ಸುತ್ತಮುತ್ತಲಿನ ಭಾಗಗಳಲ್ಲಿ ಕೊರೋನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಏರುತ್ತಿವೆ. ದಿಲ್ಲಿಯೊಂದರಲ್ಲೇ ಭಾನುವಾರ 571 ಪ್ರಕರಣ ದಾಖಲಾಗಿದ್ದವು. ಇದೇ ಕೊರೋನಾ ಏರಿಕೆಗೆ ಪ್ರಮುಖ ಕಾರಣ. ಆದರೆ, ದೇಶದ ಉಳಿದ ಭಾಗಗಳಲ್ಲಿ ಅಷ್ಟುಏರಿಕೆ ಕಂಡುಬಂದಿಲ್ಲ.

ಕೋವಿಡ್‌ ಸಾವಿನ ವರದಿ ಬಿಡುಗಡೆಗೆ ಭಾರತ ವಿರೋಧ, 5.2 ಲಕ್ಷ ಅಲ್ಲ 40 ಲಕ್ಷ ಸಾವು !

ಪಾಸಿಟಿವಿಟಿ ದರ 3 ಪಟ್ಟು ಹೆಚ್ಚಳ:
ಸೋಂಕಿನ ಏರಿಕೆಯ ಸೂಚಕವಾದ ಪಾಸಿಟಿವಿಟಿ ದರ ಕೂಡ ಒಂದೇ ದಿನದಲ್ಲಿ ಹೆಚ್ಚೂ ಕಡಿಮೆ 3 ಪಟ್ಟು ಏರಿದೆ. ಭಾನುವಾರ ಶೇ.0.31 ಇದ್ದ ಪಾಸಿಟಿವಿಟಿ ದರ ಪಾಸಿಟಿವಿಟಿ ದರ ಶೇ.0.83ಕ್ಕೆ ಹೆಚ್ಚಿದೆ.

ಈ ನಡುವೆ, ಕೇರಳವು ತನ್ನ ಕೋವಿಡ್‌ ಸಾವಿನ ಪಟ್ಟಿಪರಿಷ್ಕರಿಸಿದ್ದು, ತನ್ನ ಹಳೆಯ 213 ಸಾವುಗಳನ್ನು ಮಂಗಳವಾರ ಹೊಸದಾಗಿ ಸೇರಿಸಿದೆ. 1 ಮಾತ್ರ ಹೊಸ ಸಾವು ಸಂಭವಿಸಿದ್ದು, ಒಟ್ಟು 214 ಸಾವಿನ ಪ್ರಕರಣಗಳು ಈ ದಿನ ವರದಿಯಾಗಿವೆ.

ಆದರೆ ಗುಣಮುಖರ ಸಂಖ್ಯೆ ಹೆಚ್ಚಿರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16ರಷ್ಟುಇಳಿದಿದ್ದು, 11,542ಕ್ಕೆ ಇಳಿಮುಖವಾಗಿದೆ. ಚೇತರಿಕೆ ಪ್ರಮಾಣ ಶೇ.98.76ರಷ್ಟಿದೆ. ಈವರೆಗೆ ದೇಶದಲ್ಲಿ 186.54 ಕೋವಿಡ್‌ ನಿರೋಧಕ ಲಸಿಕೆ ಹಾಕಲಾಗಿದೆ.

IPL 2022 ಟೂರ್ನಿಗೆ ಅಂಟಿಕೊಂಡ ಕೊರೋನಾ, ಡೆಲ್ಲಿ ತಂಡದಲ್ಲಿ ಮೊದಲ ಕೇಸ್ ಪತ್ತೆ

ಕೋವಿಡ್‌ ಏರಿಕೆಯ ಹಾದಿ
ಹರಾರ‍ಯಣ, ದಿಲ್ಲಿ ಹಾಗೂ ಉತ್ತರಪ್ರದೇಶಗಳು ಕೋವಿಡ್‌ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ದೇಶದ ಕೊರೋನಾ ಕೇಸುಗಳು ಹೆಚ್ಚಿವೆ. ಕಳೆದ 2 ವಾರದಲ್ಲಿ ಏರಿದ ಅಂಕಿ ಅಂಶಗಳು ಇಲ್ಲಿವೆ.

ದ.ಕ.ದಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್‌
ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಒಂದು ಕೊರೋನಾ ಪ್ರಕರಣ ಪತ್ತೆಯಾಗಿತ್ತು. ಇಬ್ಬರು ಗುಣಮುಖರಾಗಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4ಕ್ಕೆ ಇಳಿದಿತ್ತು. ಇದೀಗ ಮತ್ತೆ ಏರಿಕೆಯ ಸುಳಿವು ಸಿಗುತ್ತಿದೆ. ಇದುವರೆಗೆ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 1,35,498 ಆಗಿದ್ದು, ಅವರಲ್ಲಿ 1,33,644 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ ತಿಳಿಸಿದೆ. ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 65 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಯಾರಲ್ಲೂ ಕೋವಿಡ್‌ ಪತ್ತೆಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳೂ ಇಲ್ಲ. ಜಿಲ್ಲೆಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಗಣನೀಯ ಏರಿಕೆ
4ನೇ ಅಲೆ ಜೂನ್‌ನಲ್ಲಿ ಬರಬಹುದು ಎಂಬ ಆತಂಕದ ಮಧ್ಯೆಯೇ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಇಳಿಕೆಯ ಹಾದಿಯಲ್ಲಿದ್ದ ಕೋವಿಡ್‌ ಪ್ರಕರಣಗಳು ಶಾಲಾ ಮಕ್ಕಳಲ್ಲಿ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ದೆಹಲಿಯಲ್ಲಿ ಶುಕ್ರವಾರ 366 ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.3.95ಕ್ಕೆ ಏರಿದೆ. ಆದರೆ ಯಾರೂ ಸಾವನ್ನಪ್ಪಿಲ್ಲ ಎಂಬುದಷ್ಟೇ ಸಮಾಧಾನದ ವಿಚಾರ. 9275 ಪರೀಕ್ಷೆ ನಡೆಸಲಾಗಿತ್ತು. ಆದರೂ ಪಾಸಿಟಿವ್‌ ಪ್ರಮಾಣ ಹೆಚ್ಚಿದೆ. 21 ಜನ ಆಸ್ಪತ್ರೆಯಲ್ಲಿದ್ದು 685 ಜನ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಗುರುವಾರ ಪಾಸಿಟಿವಿಟಿ ಶೇ.2.39 ಇತ್ತು ಹಾಗೂ 325 ಪ್ರಕರಣ ದಾಖಲಾಗಿದ್ದವು. ಇದು 40 ದಿನಗಳ ಗರಿಷ್ಠವಾಗಿತ್ತು.ಇನ್ನು ದಿಲ್ಲಿ ಪಕ್ಕದ ಗೌತಮ ಬುದ್ಧನಗರದಲ್ಲಿ ಕಳೆದ 7 ದಿನಗಳಿಂದ 44 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ನೊಯ್ಡಾ ಪ್ರದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ 167ಕ್ಕೆ ಏರಿಕೆಯಾಗಿದೆ.