26/11ರ ಮುಂಬೈ ದಾಳಿ ಬಳಿಕವೂ ಎಡವಿದ ಯುಪಿಎ ಸರ್ಕಾರ, ಕ್ಷಮಿಸಲಾಗದ ಪ್ರಮಾದ, ಮುಂಬೈ ಮೇಲೆ ನಡೆದ ಉಗ್ರ ದಾಳಿಗೆ 17 ವರ್ಷ ತುಂಬಿದೆ. ಆದರೆ ನೋವು ಹಾಗೇ ಇದೆ. ದಾಳಿಯ ಸಂತ್ರಸ್ತರು ಈಗಲೂ ಕಣ್ಣೀರಿಡುತ್ತಾರೆ. ದಾಳಿಗೂ ಮೊದಲು ಹಾಗೂ ನಂತರ ನಡೆದ ಪ್ರಮಾದಗಳೇನು 

ನವದೆಹಲಿ(ನ.27) ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಅತೀ ಭೀಕರ ದಾಳಿಯಲ್ಲಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು. 300ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದರು. ಮುಂಬೈ ಪೊಲೀಸ್‌ನ ದಕ್ಷ ಅಧಿಕಾರಿಗಳು, ಅಜ್ಮಲ್ ಕಸಬ್ ಜೀವಂತವಾಗಿ ಹಿಡಿದ ತುಕಾರಾಂ ಒಂಬ್ಳೆ, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸೇರಿ ಭದ್ರತಾ ಪಡೆ ಅಧಿಕಾರಿಗಳು ಹುತಾತ್ಮರಾಗಿದ್ದರು. ಸತತ ಹೋರಾಟದ ಬಳಿಕ ಉಗ್ರರ ಸದಬಡಿಯಲಾಗಿತ್ತು. ಈ ಕರಾಳ ಘಟನೆಗೆ 17 ವರ್ಷ ತುಂಬಿದೆ. ಆದರೆ ಭಾರತೀಯರು ಎಂದೆಂದೂ ಈ ದಾಳಿ ಮರೆಯುವುದಿಲ್ಲ. ಇದೇ ವೇಳೆ ಭಾರತೀಯರು ಅಂದಿನ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಪ್ರಮಾದಗಳನ್ನು ಭಾರತೀಯರು ಮರೆತಿಲ್ಲ.

ಎಚ್ಚರಿಕೆ ನಿರ್ಲಕ್ಷ್ಯ

ಮುಂಬೈ ದಾಳಿ ಸೇರದಂತೆ ಭಾರತದ ಮೇಲೆ ಭಯೋತ್ಪಾದಕರ ದಾಳಿ, ಬಾಂಬ್ ದಾಳಿಗಳು ಪದೇ ಪದೇ ಮರುಕುಳಿಸುತ್ತಿತ್ತು. ಇಲಾಖೆ ಮಾತುಗಳನ್ನು ಸಚಿವಾಲಯ ಕೇಳಿಸಿಕೊಳ್ಳು ಪರಿಸ್ಥಿತಿಯಲ್ಲಿ ಇರಲಿಲ್ಲ. ಯುಪಿಎ ಯುಗದಲ್ಲಿ, ಸಂಸ್ಥೆಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದವು, ಇದರ ಪರಿಣಾಮ ಮಾಹಿತಿ ಹಂಚಿಕೆ ಇರಲಿಲ್ಲ, ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಇದು 26/11ರ ದುರಂತಕ್ಕೆ ಕಾರಣವಾಯಿತು. ಅಂದಿನ ಕಾಂಗ್ರೆಸ್ ಸರ್ಕಾರದ ನೀತಿಗಳು, ಆಡಳಿತದಿಂದ ಜನರು ರಕ್ತ ಸುರಿಸಿದರು. ಪರಿಣಾಮ ದೇಶದ ಆತ್ಮಸಾಕ್ಷಿಯೇ ನಡುಗಿತ್ತು.

ಭಯೋತ್ಪಾದನೆಯನ್ನು ಸಾಮಾನ್ಯ ಘಟನೆ ರೀತಿ ನೋಡಲಾಯಿತು

ಭಾರತದಲ್ಲಿ ಭಯೋತ್ಪಾದಕರ ದಾಳಿ ಪದೇ ಪದೇ ನಡೆಯುತ್ತಿತ್ತು. ಇತ್ತ ಸರ್ಕಾರ ಕೂಡ ಇದು ಸಾಮಾನ್ಯ ದಾಳಿ ಎಂದು ಪರಿಗಣಿಸಿತ್ತು. ಒಂದು ದೇಶದ ಮೇಲೆ ಹೊರಗಿನಿಂದ ದಾಳಿ ಹಾಗೂ ಒಳಗೇ ಇದ್ದು ಷಡ್ಯಂತ್ರ ರೂಪಿಸುತ್ತಿದ್ದ ಘಟನೆ, ದಾಳಿಗಳನ್ನು ಸಾಮಾನ್ಯ ಘಟನೆ ರೀತಿ ನೋಡಲಾಗುತ್ತಿತ್ತು. 26/11ರ ದಾಳಿ ಬಳಿಕವೂ ಕಾಂಗ್ರೆಸ್ ಪಾಠ ಕಲಿತಿರಲಿಲ್ಲ.ಕಾಂಗ್ರೆಸ್‌ನ ನೈತಿಕ ದಿವಾಳಿತನವನ್ನು ಪ್ರದರ್ಶಿಸಿತು. ಕಾಂಗ್ರೆಸ್‌ನ ಚಲ್ತಾ ಹೈ ಆ್ಯಟಿಟ್ಯೂಡ್‌ಗೆ ನಾಗರೀಕರು ಬೆಲೆ ತೆರಬೇಕಾಯಿತು.

ಕರಾವಳಿ ಭದ್ರತೆ

ಸಾವಿರಾರು ಕಿಲೋಮೀಟರ್ ಕರಾವಳಿ ತೀರವಿದ್ದರೂ, ಯಾವುದೇ ಗಂಭೀರ ಭದ್ರತಾ ವ್ಯವಸ್ಥೆ ಇರಲಿಲ್ಲ. ಭಯೋತ್ಪಾದಕರು ನೇರವಾಗಿ ಮಾರ್ಕೆಟ್‌ಗೆ ಹೋಗೋ ರೀತಿ ಭಾರತಕ್ಕೆ ಆಗಮಿಸಿದ್ದರು. ಮುಂಬೈ ದಾಳಿಯ ಭಯೋತ್ಪಾದಕರನ್ನು ಸಮುದ್ರ ಮಾರ್ಗದಲ್ಲೇ ತಡೆಯಲು ಸಾಧ್ಯವಾಗಲಿಲ್ಲ. ಬೋಟುಗಳ ಮೂಲಕ ಭಾರತ ಪ್ರವೇಶ ಉಗ್ರರಿಗೆ ಸುಲಭವಾಗಿತ್ತು. ಪರಿಣಾಮ ಭಾರತದ ಹೃದಯಭಾಗದಲ್ಲಿ ಉಗ್ರರು ಇಳಿದು, ದಾಳಿ ನಡೆಸಿದ್ದರು. ಇದು ಸರ್ಕಾರ ಕರಾವಳಿ ಭದ್ರತೆಯನ್ನು ನಿರ್ಲಕ್ಷಿಸಿದ ಪರಿಣಾಮವಾಗಿತ್ತು.

ದಾಳಿ ಸ್ಥಳಕ್ಕೆ ಕಮಾಂಡೋ ಆಗಮಿಸಲು ತಡ

26/11ರ ದಾಳಿ ಸಮಯದಲ್ಲಿ, ಎನ್‌ಎಸ್‌ಜಿ (NSG) ಕಮಾಂಡೋಸ್ ದೆಹಲಿಯಿಂದ ವಿಮಾನದಲ್ಲಿ ಕರೆತರಬೇಕಾಯಿತು. ಆಡಳಿತಾತ್ಮಕ ಅಡೆತಡೆಗಳು, ಅನುಮೋದನೆ ಹಲವು ಗಂಟೆಗಳೇ ಬೇಕಾಯಿತು. ದಾಳಿ ವೇಳೆ ಒಂದೊಂದು ನಿಮಿಷವೂ ಅತ್ಯಮೂಲ್ಯವಾಗಿತ್ತು. ಆದರೆ ಭದ್ರತಾ ಪಡೆಗಳು ಮುಂಬೈಗೆ ಆಗಮಿಸಲು ಸರ್ಕಾರದ ಆಡಳಿತಾತ್ಮಕ ವಿಳಂಬದಿಂದ ಹಲವು ಗಂಟೆಗಳು ವಿಳಂಬವಾಗಿತ್ತು.ಇದರಿಂದ ಅಮಾಯಕರ ಜೀವ ಬಲಿಯಾಗಿತ್ತು. ಕಮಾಂಡೋಗಳ ಹೊತ್ತ ಏರ್‌ಕ್ರಾಫ್ಟ್, ವಿಮಾನ ನಿಲ್ದಾಣದಲ್ಲಿ 3 ಗಂಟೆ ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲ್‌ಗಾಗಿ ಕಾದಿತ್ತು. ಆದರೆ ಈಗ ಭಾರತದ ಭದ್ರತಾ ವ್ಯವಸ್ಥೆ ಬದಲಾಗಿದೆ. ಭಯೋತ್ಪಾದನೆ ಮೇಲೆ ಶೂನ್ಯ ಸಹಿಷ್ಣುತೆ ಹೊಂದಿದೆ. ಭಾರತದ ವಿವಿದೆಡೆ 7 ಎನ್‌ಎಸ್‌ಜಿ ಕೇಂದ್ರಗಳಿವೆ. ಗೃಹ ಸಚಿವ ಅಮಿತ್ ಶಾ ನಿರ್ಣಾಯಕ ನಿರ್ಧಾರಗಳಿಂದ ಭಾರತ ಸವಾಲು ಮೆಟ್ಟಿನಿಲ್ಲಲು ಸಶಕ್ತವಾಗಿದೆ.

ಮುಂಬೈ ಪೊಲೀಸರಿಗೆ ಹಳೇ ಕಾಲದ ಶಸ್ತ್ರ

ಮುಂಬೈ ಪೊಲೀಸರು ಭಯೋತ್ಪಾದಕರನ್ನು ಹಳೇ ಶಸ್ತ್ರಗಳು, ಹಳೇ ಕಾಲದ ಮದ್ದುಗುಂಡುಗಳ ಮೂಲಕ ಎದುರಿಸಿದ್ದರು. ಭಯೋತ್ಪಾದಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಿದ್ದರು. ಆದರೆ ಮುಂಬೈ ಪೋಲೀಸರ ಧೈರ್ಯ, ಉಗ್ರರ ಎದುರಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭದ್ರತಾ ಪಡೆಗಳಿಗೆ ಶಸ್ತ್ರಗಳ ಪೂರೈಕೆಗೆ ಯುಪಿಎ ಸರ್ಕಾರದ ಹಲವು ಹಗರಣಗಳು ಅಡ್ಡಿಯಾಗಿತ್ತು. 2ಜಿ, ಕಾಮನ್‌ವೆಲ್ತ್, ಕೋಲ್ ಗೇಟ್ ಸೇರಿದಂತೆ ಹಲವು ಹಗರಣಗಳಲ್ಲಿ ಜನರ ಹಣ ಪೋಲಾಗಿತ್ತು. ಪರಿಣಾಮ ಪೊಲೀಸ್ ಆಧುನೀಕರಣಕ್ಕಾಗಿ ಹಣವಿರಲಿಲ್ಲ ಎಂಬುದು ಗಮನಾರ್ಹ.

ಯುಪಿಎ ಅಡಿಯಲ್ಲಿ ಭಾರತ ಹಲವು ಇಲಾಖೆಯನ್ನು ನಿರ್ಲಕ್ಷಿಸಲಾಗಿತ್ತು. ಹಗರಣಗಳೇ ರಾರಾಜಿಸುತ್ತಿತ್ತು. ವರದಿಗಳ ಪ್ರಕಾರ ಮುಂಬೈ ಪೊಲೀಸರಿಗೆ 2007 ರಿಂದ ಗುಂಡು ಹಾರಿಸುವ ತರಬೇತಿಯನ್ನು ನೀಡಿರಲಿಲ್ಲ, ಮತ್ತು ಭಯೋತ್ಪಾದಕರೊಂದಿಗೆ ಹೋರಾಡಲು ಪೊಲೀಸರಿಗೆ ತರಬೇತಿ ನೀಡಿರಲಿಲ್ಲ. ದೇಶದ ಆತ್ಮಸಾಕ್ಷಿಯು ಸುಟ್ಟುಹೋದಾಗ, ಮಾಜಿ ಮಹಾರಾಷ್ಟ್ರ ಸಿಎಂ ಎ.ಆರ್. ಅಂತುಲೆ ಹಾಗೂ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಸರಿ ಭಯೋತ್ಪಾದನೆ ಎಂದು ಪಾಕಿಸ್ತಾನದ ಭಯೋತ್ಪಾದಕ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿತು. 26/11 ಆರ್‌ಎಸ್‌ಎಸ್-ಕೀ-ಸಾಜೀಶ್ (RSS-ki-Saazish) ಎಂಬ ಪುಸ್ತಕ ಕೂಡ ಬಿಡುಗಡೆಯಾಗಿತ್ತು. ಆದರೆ ಪಾಕಿಸ್ತಾನದ ಕೃತ್ಯ ಸಾಬೀತಾಗುತ್ತಿದ್ದಂತೆ ಕಾಂಗ್ರೆಸ್ ಬೆತ್ತಲಾಯಿತು.

ಅಪರಾಧಿಗೆ ಯಾವುದೇ ಬೆಲೆ ಇಲ್ಲ: ಸಾರ್ವಜನಿಕ ಮಾಹಿತಿ ಪ್ರಕಾರ, ಕಾಂಗ್ರೆಸ್ ನಾಯಕತ್ವವು ಪ್ರತೀಕಾರ ತೀರಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿತ್ತು. ಕಾಂಗ್ರೆಸ್‌ಗೆ, ಇದು ಸ್ಪಷ್ಟವಾಗಿ ಸಾರ್ವಜನಿಕ ಸಂಪರ್ಕಗಳ ಬಿಕ್ಕಟ್ಟು (Public Relations Crisis) ಆಗಿತ್ತು, ರಾಷ್ಟ್ರೀಯ ದುರಂತವಾಗಿರಲಿಲ್ಲ. ಕಾಂಕ್ರೀಟ್ ಕ್ರಮಕ್ಕಾಗಿ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಬದಲು, ಕಾಂಗ್ರೆಸ್ ಮಾಧ್ಯಮ ಬೈಟ್‌ಗಳನ್ನು ನೀಡುವುದರಲ್ಲಿ ನಿರತವಾಗಿತ್ತು.

ಇನ್ನಷ್ಟು ಸುಳ್ಳುಗಳು: ಆಗಿನ ಯುಎಸ್ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್ ಅವರ ಆತ್ಮಚರಿತ್ರೆಯ ಪ್ರಕಾರ, ಅವರು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರಿಗೆ ಹಲವು ಬಾರಿ ಕರೆ ಮಾಡಲು ಪ್ರಯತ್ನಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಒಂದು ಬಾರಿ ಕರೆ ಸ್ವೀಕರಿಸಿದಾಗ ಮುಕರ್ಜಿ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಇದ್ದರು.

ಇದು ಸಾಮಾನ್ಯ ಎಂಬ ಹೇಳಿಕೆ

ಆಗಿನ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಆರ್.ಆರ್. ಪಾಟೀಲ್ ಅವರು, 'ದೊಡ್ಡ ನಗರಗಳಲ್ಲಿ ಇಂತಹ ವಿಷಯಗಳು ನಡೆಯುತ್ತವೆ' ಎಂಬ ಬಹಳ ಸಂವೇದನಾಶೀಲವಲ್ಲದ ಹೇಳಿಕೆಯನ್ನು ನೀಡಿದರು. ಇದು ಕಾಂಗ್ರೆಸ್‌ನ ಜನ-ವಿರೋಧಿ ಚಿಂತನೆ ಮತ್ತು ಸಂವೇದನಾಹೀನತೆಯನ್ನು ತೋರಿಸಿತು. 60 ಗಂಟೆಗಳಿಗಿಂತ ಹೆಚ್ಚು ಕಾಲ, ಜನರು ಸರ್ಕಾರದ ಮೇಲಿನ ಎಲ್ಲಾ ನಂಬಿಕೆಯನ್ನು ಕಳೆದುಕೊಂಡಾಗ ಭಾರತವು ಆ್ಯಬ್‌ಸೆನ್ಸ್ ಸ್ಟೇಟ್ ಆಗಿ ಬದಲಾಗಿತ್ತು. ಯುಪಿಎ ಯುಗದಲ್ಲಿ, ಸೈಬರ್ ಮಾನಿಟರಿಂಗ್ ಅಸಮರ್ಪಕವಾಗಿತ್ತು, ಮತ್ತು ನೈಜ-ಸಮಯಕ್ಕೆ ಹತ್ತಿರದ ಕಾರ್ಯಸಾಧ್ಯವಾದ ಒಳನೋಟಗಳು (near-real-time actionable insights) ಇರಲಿಲ್ಲ. ಇದೆಲ್ಲದರ ಪರಿಣಾಮ ಮುಂಬೈ ಭೀಕರ ದಾಳಿ ನಡೆದರೂ ಪ್ರತೀಕಾರವೂ ತೀರಿಸಲಿಲ್ಲ. ಇತ್ತ ಭಯೋತ್ಪಾದಕರ ವಿರುದ್ದ ಶೂನ್ಯ ಸಹಿಷ್ಣುತೆಯನ್ನು ತೋರಲಿಲ್ಲ.