ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತಕ್ಕೆ ಆತಂಕಕಾರಿ ಸ್ಥಾನ

ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತದ ಆತಂಕಕಾರಿ ಸ್ಥಾನದಲ್ಲಿದೆ. ದೇಶದಲ್ಲಿ ಶೇ.14ರಷ್ಟು ಜನರು ಅಪೌಷ್ಟಿಕತೆ ಹೊಂದಿದ್ದಾರೆ ಮತ್ತು ಶಿಶು ಮರಣ ಪ್ರಮಾಣ ಗಂಭೀರವಾಗಿದೆ.

India ranks 105 out of 127 countries in the Global Hunger Index mrq

ಲಂಡನ್‌: ಜಾಗತಿಕ ಹಸಿವಿನ ಪ್ರಮಾಣ ಅಳೆಯಲು ಬಳಸುವ ಅಪೌಷ್ಟಿಕತೆ ಮತ್ತು ಶಿಶುಗಳ ಸಾವಿನ ಅಂಕಿ ಅಂಶಗಳು ಭಾರತದಲ್ಲಿ ಗಂಭೀರ ಪರಿಸ್ಥಿತಿಯನ್ನು ಮುಂದಿಟ್ಟಿವೆ. ಇದರ ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತ 105ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಎಚ್ಚರಿಸಿದೆ.

ಐರ್ಲೆಂಡ್‌ ಮೂಲದ ‘ಕನ್ಸರ್ನ್‌ ವಲ್ಡ್‌ವೈಡ್‌’ ಮತ್ತು ಜರ್ಮನ್‌ ಮೂಲದ ‘ವೆಲ್ತ್‌ಹಂಗರ್‌ಲೈಫ್‌’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿ ಈ ಅಂಕಿ ಅಂಶಗಳನ್ನು ಮುಂದಿಟ್ಟಿದೆ.

ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ 42 ದೇಶಗಳು 27.3 ಅಂಕಗಳೊಂದಿಗೆ ಗಂಭೀರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ವಿಶೇಷವೆಂದರೆ ನೇಪಾಳ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದೇಶಗಳು ಭಾರತಕ್ಕಿಂತ ಉತ್ತಮವಾದ ‘ಮಧ್ಯಮ’ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ವರದಿ ಹೇಳಿದೆ.

ದೀಪಾವಳಿಗೆ 1.85 ಕೋಟಿ ಜನರಿಗೆ ಉಚಿತವಾಗಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್

ದೇಶದಲ್ಲಿ ಶೇ.14 ಅಪೌಷ್ಟಿಕತೆ:

ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.13.7ರಷ್ಟು ಜನರು ಅಪೌಷ್ಟಿಕತೆ ಹೊಂದಿದ್ದಾರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪೈಕಿ ಶೇ.35.5ರಷ್ಟು ಮಕ್ಕಳು ಬೆಳವಣಿಗೆ ಕುಂಠಿತದ ಸಮಸ್ಯೆ ಹೊಂದಿದ್ದಾರೆ. ಶೇ.18.7ರಷ್ಟು ಮಕ್ಕಳು ದುರ್ಬಲರಾಗಿದ್ದಾರೆ, ಶೇ.2.9ರಷ್ಟು ಮಕ್ಕಳು ತಮ್ಮ 5ನೇ ಹುಟ್ಟುಹಬ್ಬಕ್ಕಿಂತ ಮೊದಲೇ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ.

ಇದೇ ವೇಳೆ ವಿಶ್ವದಲ್ಲಿ 73.3 ಕೋಟಿ ಜನರು ಅಗತ್ಯ ಪ್ರಮಾಣದ ಆಹಾರ ಲಭ್ಯವಾಗದೇ ನಿತ್ಯವೂ ಹಸಿವಿನ ಸಮಸ್ಯೆ ಎದುರಿಸುತ್ತಿದ್ದಾರೆ, 280 ಕೋಟಿ ಜನರು ಆರೋಗ್ಯಪೂರ್ಣವಾದ ಆಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಪೊದೆಯಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಮಗು ರಕ್ಷಿಸಿ ದತ್ತು ಪಡೆದ ಪೊಲೀಸ್ ಅಧಿಕಾರಿ!

Latest Videos
Follow Us:
Download App:
  • android
  • ios