Asianet Suvarna News Asianet Suvarna News

ದೀಪಾವಳಿಗೆ 1.85 ಕೋಟಿ ಜನರಿಗೆ ಉಚಿತವಾಗಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್

ದೀಪಾವಳಿಗೆ 1.85 ಕೋಟಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಿದೆ. ಸಿಎಂ ಈ ಘೋಷಣೆ ಮಾಡಿದ್ದು, ದೀಪಾವಳಿಗೂ ಮುನ್ನ ವಿತರಣೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Free LPG cylinder for 185 lakh people for Diwali  mrq
Author
First Published Oct 12, 2024, 3:46 PM IST | Last Updated Oct 12, 2024, 3:46 PM IST

ನವದೆಹಲಿ: ದೀಪಾವಳಿಗೂ ಮೊದಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮಹಿಳೆಯರಿಗೆ ಬಂಪರ್‌ ಕೊಡುಗೆಯನ್ನು ಘೋಷಣೆ ಮಾಡಿದೆ. ಈ ವರ್ಷದ ದೀಪಾವಳಿಗೆ ಉತ್ತರ ಪ್ರದೇಶ ಸರ್ಕಾರ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ 1.85  ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ನೀಡುತ್ತಿದೆ. ಈ ಸಂಬಂಧ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆಯನ್ನು ಸಹ ಮಾಡಿದ್ದಾರೆ. ದೀಪಾವಳಿಗೂ ಮೊದಲೇ ಎಲ್ಲಾ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ತಲುಪಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಹೆಸರು ದಾಖಲಿಸಿಕೊಂಡಿರುವ ಎಲ್ಲಾ ಲಾಭಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೇ ರಾಜ್ಯ ಸರ್ಕಾರದಿಂದಲೇ ಎಲ್‌ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾದ ಸಮಯಕ್ಕೆ ಪೂರೈಸಬೇಕು. ದೀಪಾವಳಿಯ ಮೊದಲು ಎಲ್ಲಾ ಫಲಾನುಭವಿಗಳ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್ ತಲುಪಿರಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಕಳೆದ ವರ್ಷವೂ ಸಹ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ದೀಪಾವಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ತಲುಪಿಸಿತ್ತು. ಕಳೆದ ವರ್ಷ 85 ಲಕ್ಷವಿದ್ದ ಫಲಾನುಭವಿಗಳ ಸಂಖ್ಯೆ ಈ ಬಾರಿ 1.85 ಕೋಟಿಗೆ ಏರಿಕೆಯಾಗಿದೆ. ಇದು ಕೇವಲ  ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಹೆಸರು ದಾಖಲಿಸಿಕೊಂಡ ಮಹಿಳೆಯರಿಗೆ ಮಾತ್ರ ಉಚಿತ ಸಿಲಿಂಡರ್ ಸಿಗುತ್ತದೆ.

LPG ಸಿಲಿಂಡರ್ ಬಾಳಿಕೆಗೆ ಏನು ಮಾಡಿದರೊಳಿತು?

ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರ 300 ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ. ಮೊದಲು ಫಲಾನುಭವಿಗಳು ಪೂರ್ಣ ಹಣ ನೀಡಿ ಸಿಲಿಂಡರ್ ಖರೀದಿಸಬೇಕು. ನಂತರ ಸಬ್ಸಿಡಿ ಹಣವನ್ನು ಸರ್ಕಾರ ಫಲಾನುಭವಿಯ ಖಾತೆಗೆ ಜಮೆ ಮಾಡುತ್ತದೆ. ಫಲಾನುಭವಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು. 

ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯನ್ನು 45 ರಿಂದ 48 ರೂ.ವರೆಗೆ ಏರಿಕೆಯಾಗಿತ್ತು. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿದೆ. ಸದ್ಯ ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,861 ರೂಪಾಯಿ, 14 ಕೆಜಿ ಸಿಲಿಂಡರ್ ಬೆಲೆ 840.50 ರೂಪಾಯಿ ಆಗಿದೆ. ಇದೀಗ ರಾಜ್ಯ ಸರ್ಕಾರದ ಘೋಷಣೆಯಿಂದ  1.85 ಕೋಟಿ ಜನರಿಗೆ 840 ರೂ. ಹಣ ಉಳಿತಾಯವಾಗಲಿದೆ.

ಮನೆಯಲ್ಲಿ LPG ಗ್ಯಾಸ್ ಸೋರಿಕೆ ಆಗುತ್ತಿರೋದನ್ನು ಕಂಡು ಹಿಡಿಯೋದು ಹೇಗೆ?

Latest Videos
Follow Us:
Download App:
  • android
  • ios