Asianet Suvarna News Asianet Suvarna News

ಪೊದೆಯಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಮಗು ರಕ್ಷಿಸಿ ದತ್ತು ಪಡೆದ ಪೊಲೀಸ್ ಅಧಿಕಾರಿ!

ಪೊದೆಯಲ್ಲಿ ಬಿಸಾಡಿದ್ದ ನವಜಾತ ಮಗುವನ್ನು ರಕ್ಷಿಸಿದ ಸಬ್ ಇನ್ಸ್‌ಪೆಕ್ಟರ್ , ಮಗುವಿನ ಪೋಷಕರಿಗಾಗಿ ಭಾರಿ ಹುಡುಕಾಟ ನಡೆಸಿ ವಿಫಲರಾಗಿದ್ದಾರೆ. ಮಗುವಿನ ಪೋಷಕರು ಸಿಗದಿದ್ದಾಗ, ಪೊದೆಯಲ್ಲಿ ಸಿಕ್ಕ ಮಗುವನ್ನು ತಾವೇ ದತ್ತು ಪಡೆದುಕೊಂಡು ಅದ್ಧೂರಿಯಾಗಿ ದಸರಾ ಹಬ್ಬ ಆಚರಿಸಿದ್ದಾರೆ.

Police sub inspected adopt new born girl baby after rescued from bush Ghaziabad ckm
Author
First Published Oct 12, 2024, 5:30 PM IST | Last Updated Oct 12, 2024, 5:30 PM IST

ಘಾಜಿಯಾಬಾದ್(ಅ.12) ನವಜಾತ ಮಗುವೊಂದು ಪೊದೆಯಿಂದ ಅಳುವ ಸದ್ದು ಕೇಳಿಸಿತ್ತು. ಕೆಲ ಹೊತ್ತಿನಿಂದ ಶಬ್ದ ಕೇಳಿಸುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದು ಕ್ಷಣವೂ ತಡಮಾಡದೇ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ನವಜಾತ ಹೆಣ್ಣು ಮಗುವನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಸಬ್ ಇನ್ಸ್‌ಪೆಕ್ಟರ್ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಪೋಷಕರ ಸುಳಿವು ಪತ್ತೆಯಾಗಲಿಲ್ಲ. ಇಷ್ಟೇ ಅಲ್ಲ ಮಗುವಿನ ಆರೈಕೆಗೆ ಯಾರೂ ಮುಂದೆ ಬರಲಿಲ್ಲ. ಕೊನೆಯದಾಗಿ ಸಬ್ ಇನ್ಸ್‌ಪೆಕ್ಟರ್ ಪೊದೆಯಿಂದ ರಕ್ಷಿಸಿದ ಮಗುವನ್ನು ದತ್ತು ಪಡೆದಿದ್ದಾರೆ. ಇದೀಗ ದತ್ತು ಪಡೆದು ನವಜಾತ ಮಗುವಿನ ಜೊತೆ ದಸರಾ ಹಬ್ಬ ಆಚರಿಸಿದ ಘಟನೆ ಉತ್ತರ ಪ್ರದೇಶ ಘಾಜಿಯಾಬಾದ್‌ನಲ್ಲಿ ನಡೆದಿದೆ.

ದುದಿಯಾ ಪೀಪಾಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪುಷ್ಪೇಂದ್ರ ಸಿಂಗ್ ತಾವು ಪೊದೆಯಿಂದ ರಕ್ಷಿಸಿದ ಮಗುವನ್ನು ಕಾನೂನಿನ ಪ್ರಕ್ರಿಯೆ ಪೂರ್ಣಗೊಳಿಸಿ ದತ್ತು ಪಡೆದಿದ್ದಾರೆ. ನವರಾತ್ರಿ ಹಬ್ಬಕ್ಕೆ ಲಕ್ಷ್ಮಿ ಮನೆಗೆ ಆಗಮಿಸಿದ್ದಾಳೆ. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದು ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ.

ಹುಬ್ಬಳ್ಳಿ: ಹತ್ಯೆಯಾದ ಅಂಜಲಿ ಸಹೋದರಿಯರ ದತ್ತು ಸ್ವೀಕಾರ, ದಿಂಗಾಲೇಶ್ವರ ಶ್ರೀ

ಘಾಜಿಯಾಬಾದ್ ರೆಸೆಡೆನ್ಸಿ ಕಾಲೋನಿ ಬಳಿಯ ಪೊದೆಯಿಂದ ಮಗುವಿನ ಶಬ್ದ ಕೇಳಿಸುತ್ತಿದೆ ಎಂದು ಸ್ಥಳೀಯರು ದುದಿಯಾ ಪೀಪಾಲ್ ಠಾಣೆಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ಪುಷ್ಪೇಂದ್ರ ಸಿಂಗ್ ತಕ್ಷಣವ ಸ್ಥಳಕ್ಕೆ ಧಾವಿಸಿದ್ದಾರೆ. ಪೊದೆಯಲ್ಲಿ ಪ್ಲಾಸ್ಟಿಕ್ ಮೇಲೆ ಮಲಗಿಸಿದ್ದ ನವಜಾತ ಮಗುವನ್ನು ರಕ್ಷಿಸಿ ದಸ್ನಾದ ಸಿಎಸ್‌ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪುಷ್ಪೇಂದ್ರ ಸಿಂಗ್, ಹೆಣ್ಣು ಮಗುವಿನ ಪೋಷಕರ ಹುಡುಕಾಟ ಆರಂಭಿಸಿದ್ದಾರೆ. ಆದರೆ ಸುಳಿವು ಪತ್ತೆಯಾಗಿಲ್ಲ.

ಹೆಣ್ಣು ಮಗುವನ್ನು ಪೋಷಕರ ಮಡಿಲಿಗೆ ಸೇರಿಸಲು ಪ್ರಯತ್ನಿಸಿದ ಪುಷ್ಪೇಂದ್ರ ಸಿಂಗ್‌ಗೆ ಸಾಧ್ಯವಾಗಲಿಲ್ಲ. ಇತ್ತ ಹೆಣ್ಣು ಮಗುವನ್ನು ಸ್ವೀಕರಿಸಲು ಯಾರೂ ಮುಂದೆ ಬರಲಿಲ್ಲ. ಕುಟುಂಬದ ಜೊತೆ ಮಾತುಕತೆ ನಡೆಸಿದ ಪುಷ್ಪೇಂದ್ರ ಸಿಂಗ್ ಹೆಣ್ಣು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದಾರೆ. 2018ರಲ್ಲಿ ಮದುವೆಯಾಗಿರುವ ಪುಷ್ಪೇಂದ್ರ ಸಿಂಗ್‌ಗೆ ಮಕ್ಕಳಿಲ್ಲ. ಪತ್ನಿ ಜೊತೆ ಮಾತುಕತೆ ಬಳಿಕ ರಕ್ಷಿಸಿದ ಹೆಣ್ಣು ಮಗುವನ್ನು ಕಾನೂನು ಪ್ರಕ್ರಿಯೆ ಮೂಲಕ ದತ್ತು ಪಡೆದಿದ್ದಾರೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹೆಣ್ಣು ಮಗುವನ್ನು ಪುಷ್ಪೇಂದ್ರ ದಂಪತಿ ದತ್ತು ಪಡೆದಿದ್ದಾರೆ. ಮನೆಗೆ ಲಕ್ಷ್ಮಿ ಆಗಮಿಸಿದ್ದಾಳೆ. ನವರಾತ್ರಿ ಹಬ್ಬದ ದಿನವೇ ಆಗಮಿಸಿರುವ ಲಕ್ಷ್ಮಿ ನಮ್ಮ ಮನೆಯ ಬೆಳಕು ಎಂದು ಪುಷ್ಪೇಂದ್ರ ಸಿಂಗ್ ಹೇಳಿದ್ದಾರೆ. ದತ್ತು ಪಡೆದ ಮಗುವಿನೊಂದಿಗೆ ನವರಾತ್ರಿ ಹಬ್ಬ ಆಚರಿಸಿದ್ದಾರೆ.

ಒಂದು ಸುಳ್ಳು ಹೇಳಿರುವುದಕ್ಕೆ ಇಷ್ಟು ದೊಡ್ಡು ಶಿಕ್ಷೆನಾ?; ಸೋನು ಗೌಡ ಪರ ಧ್ವನಿ ಎತ್ತಿದ ರಾಕೇಶ್ ಅಡಿಗ
 

Latest Videos
Follow Us:
Download App:
  • android
  • ios