ಭಾರತೀಯ ಅಂಚೆ ಇಲಾಖೆ ಪ್ರಮುಖ ಮತ್ತು ಮಹತ್ವದ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಕ್ರಮವು ಜನರಲ್ಲಿ ನಿರಾಸೆ ಮೂಡಿಸಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ. ಸೇವೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ ಎಂಬುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ನವದೆಹಲಿ: ಭಾರತೀಯ ಇಲಾಖೆ ಮಹತ್ವದ ಸೇವೆಯನ್ನು ಗ್ರಾಹಕರಿಗೆ ಯಾವುದೇ ಮಾಹಿತಿಯನ್ನು ನೀಡದೇ ಸ್ಥಗಿತಗೊಳಿಸಿದೆ. ಸೇವೆ ಬಂದ್ ಆಗಿರುವ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಖಾಸಗೀಕರಣದ ಮೊದಲ ಹಂತವೇ ಎಂದು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಭಾರತೀಯ ಅಂಚೆ ಇಲಾಖೆ ದೇಶದ ಅತಿದೊಡ್ಡ ಪತ್ರ ರವಾನೆ ಮಾಡುವ ಸೇವೆ ನೀಡುತ್ತಿರುವ ಸರ್ಕಾರಿ ಸಂಸ್ಥೆಯಾಗಿದೆ. ಇಂದಿಗೂ ಕೋಟ್ಯಂತರ ಜನರು ಭಾರತೀಯ ಅಂಚೆ ಸೇವೆ ಉಪಯೋಗಿಸುತ್ತಿದ್ದಾರೆ. ಇತ್ತೀಚೆಗೆ ಮಹತ್ವದ ಸುಳಿವು ಸ್ಥಗಿತಗೊಳಿಸೋದರಿಂದ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತೀಯ ಅಂಚೆ ಇಲಾಖೆ ಸೇವೆ ರದ್ದುಗೊಳಿಸುವ ಯಾವ ಮಾಹಿತಿಯನ್ನು ನೀಡಿಲ್ಲ ಎಂದು ವರದಿಯಾಗಿದೆ. ಜನರು ಅಂಚೆ ಕಚೇರಿಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿರುವ ಮಾಹಿತಿಯನ್ನು ನೀಡುತ್ತಿದ್ದಾರೆ. ಜನರು ಅನಿವಾರ್ಯವಾಗಿ ಖಾಸಗಿ ಸಂಸ್ಥೆಯತ್ತ ಹೋಗುವಂತಾಗಿದೆ.
ಭಾರತೀಯ ಅಂಚೆ ಇಲಾಖೆ ರಿಜಿಸ್ಟರ್ಡ್ ಬುಕ್ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಲಕ್ಷಾಂತರ ಪುಸ್ತಕ ಪ್ರೇಮಿಗಳಲ್ಲಿ ಈ ವಿಷಯ ನಿರಾಸೆಯನ್ನುಂಟು ಮಾಡಿದೆ. ಈಗಾಗಲೇ ಭಾರತದಲ್ಲಿ ಹಲವು ಸರ್ಕಾರಿ ಸಂಸ್ಥೆಗಳು ಖಾಸಗೀಕರಣವಾಗುತ್ತಿದ್ದು, ಇದೀಗ ಆ ಸಾಲಿನಲ್ಲಿ ಅಂಚೆ ಇಲಾಖೆ ಇದೆಯಾ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸೇವೆ ಬಂದ್ ಆಗಿರೋದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ಭಾರತೀಯ ಅಂಚೆ ಇಲಾಖೆ 19,101 ಪಿನ್ ಕೋಡ್‌ಗಳು ಮತ್ತು 154,725 ಪೋಸ್ಟ್ ಆಫೀಸ್‌ಗಳ ದೊಡ್ಡ ನೆಟ್‌ವರ್ಕ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ಜನವರಿಯಿಂದ ಸರ್ಕಾರಿ ನೌಕರರಿಗೆ 10,080 ರೂಪಾಯಿ ಡಿಎ ಹೆಚ್ಚಳ?
ಅಂಚೆ ಇಲಾಖೆ ಪತ್ರ, ದಾಖಲೆಗಳ ಜತೆಗೆ ಪುಸ್ತಕಗಳನ್ನೂ ಕಳುಹಿಸುವ ಸೇವೆಯನ್ನು ನೀಡುತ್ತಿತ್ತು. ಆದರೆ ಡಿಸೆಂಬರ್ 17 ರಿಂದ ನೋಂದಾಯಿತ ಬುಕ್ ಪೋಸ್ಟ್ ಸೇವೆಯನ್ನು ಇಂಡಿಯಾ ಪೋಸ್ಟ್ ನಿಲ್ಲಿಸಿದೆ. ನೋಂದಾಯಿತ ಬುಕ್ ಪೋಸ್ಟ್ ಸೇವೆಯನ್ನು ಸಂಕ್ಷಿಪ್ತವಾಗಿ RBP ಎಂದು ಕರೆಯಲಾಗುತ್ತದೆ. ಅಂಚೆ ಇಲಾಖೆ ಯಾವುದೇ ಮಾಹಿತಿಯನ್ನು ನೀಡದೇ RBP ಸೇವೆಯನ್ನು ಸಾಫ್ಟ್‌ವೇರ್‌ನಿಂದ ತೆಗೆದು ಹಾಕಿದೆ. ಈ ಸೇವೆ ಬಂದ್ ಆಗಿರೋದರಿಂದ ಪುಸ್ತಗಳನ್ನು ಆರ್ಡರ್ ಮಾಡೋದು ದುಬಾರಿಯಾಗಲಿದೆ. ಇನ್ಮುಂದೆ ಪುಸ್ತಕ ಪ್ರಿಯರು ತಮ್ಮ ನೆಚ್ಚಿನ ಪುಸ್ತಕವನ್ನು ಆರ್ಡರ್ ಮಾಡಲು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ನೋಂದಾಯಿತ ಬುಕ್ ಪೋಸ್ಟ್ ಸೇವೆ ಶುಲ್ಕ ಎಷ್ಟಿತ್ತು?
ಭಾರತೀಯ ಅಂಚೆ ಇಲಾಖೆಯ ನೋಂದಾಯಿತ ಬುಕ್ ಪೋಸ್ಟ್ (RBP) ಸೇವೆ ಸಾಮಾನ್ಯ ಜನರ ಜೇಬಿಗೆ ಹಿತಕರವಾಗಿತ್ತು. 1 ಕೆಜಿ ಆರ್‌ಬಿಪಿ ಬೆಲೆ 32 ರೂ. ಆದರೆ ರಿಜಿಸ್ಟರ್ ಪಾರ್ಸೆಲ್ ಶುಲ್ಕ 78 ರೂಪಾಯಿ ಇದೆ. 2 ಕೆಜಿ ಆರ್‌ಬಿಪಿಗೆ 45 ರೂ, ಪಾರ್ಸೆಲ್ 116 ರೂಪಾಯಿ, . 5 ಕೆಜಿ ಆರ್‌ಬಿಪಿಗೆ 80 ರೂ. ಆದ್ರೆ ಅದೇ ರಿಜಿಸ್ಟರ್ ಪೋಸ್ಟ್‌ಗೆ 229 ರೂಪಾಯಿ ಪಾವತಿಸಬೇಕು.
ಇದನ್ನೂ ಓದಿ: ಜನವರಿ 2025ರಲ್ಲಿ 15 ದಿನ ಬ್ಯಾಂಕ್ ಬಂದ್; ಯಾವ ದಿನ ರಜೆ ಗೊತ್ತಾ?
