ಜನವರಿಯಿಂದ ಸರ್ಕಾರಿ ನೌಕರರಿಗೆ 10,080 ರೂಪಾಯಿ ಡಿಎ ಹೆಚ್ಚಳ?
ಜನವರಿಯಿಂದ ಡಿಎ ಹೆಚ್ಚಳ ಆಗುತ್ತಾ? ಈ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಇದೆ. 2024ರಲ್ಲಿ ತುಟ್ಟಿಭತ್ಯೆ ಹಲವು ಬಾರಿ ಏರಿಕೆಯಾಗಿದೆ. ಎಲ್ಲರೂ ಹೊಸ ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ, ಕೇಂದ್ರ ಸರ್ಕಾರಿ ನೌಕರರಿಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ.
2025 ಇನ್ನೂ ಬಂದಿಲ್ಲ, ಆದರೆ ಕೇಂದ್ರ ಸರ್ಕಾರಿ ನೌಕರರಿಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ. ಹೊಸ ವರ್ಷದ ಆರಂಭದಲ್ಲಿ, ಅಂದರೆ ಜನವರಿಯಲ್ಲಿ, ಕೇಂದ್ರ ಸರ್ಕಾರ ಭತ್ಯೆಯನ್ನು ಹೆಚ್ಚಿಸಲಿದೆಯೇ ಅನ್ನೋ ಪ್ರಶ್ನೆ ಎದ್ದಿದೆ.
ಇದರ ಬಗ್ಗೆ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. AICPI ಸೂಚ್ಯಂಕದ ಪ್ರಕಾರ, ಜನವರಿಯಲ್ಲಿ ತುಟ್ಟಿಭತ್ಯೆ 56% ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ.
ಅದು ಹೇಗೆ ಅನ್ನೋದನ್ನ ಈ ಲೆಕ್ಕಾಚಾರದ ಮೂಲಕ ಅರ್ಥಮಾಡಿಕೊಳ್ಳಿ. ಏಳನೇ ವೇತನ ಆಯೋಗದ ವೇತನ ಶ್ರೇಣಿಯ ಪ್ರಕಾರ, ಕನಿಷ್ಠ ಮೂಲ ವೇತನ ಹೊಂದಿರುವವರು ವರ್ಷಕ್ಕೆ ₹6480 ಹೆಚ್ಚುವರಿಯಾಗಿ ಪಡೆಯುತ್ತಾರೆ.
ಉದಾಹರಣೆಗೆ, ಮೂಲ ವೇತನ ₹18,000 ಮತ್ತು ತುಟ್ಟಿಭತ್ಯೆ 56% ಆಗಿದ್ದರೆ, ಲೆಕ್ಕಾಚಾರ ಹೀಗಿರುತ್ತದೆ… ಜನವರಿ 2025 ರಿಂದ ಡಿಎ: 18,000 x 56% = 10,080/ತಿಂಗಳು ಜುಲೈ 2024 ರಿಂದ ಡಿಎ: 18,000 x 53% = 9540/ತಿಂಗಳು.
ವಾರದ ಹಿಂದೆ ಖುಷ್ ಖುಷಿಯಾಗಿ ರೀಲ್ಸ್ ಪೋಸ್ಟ್ ಮಾಡಿದ್ದ ಪ್ರಖ್ಯಾತ ಆರ್‌ಜೆ ಶವವಾಗಿ ಪತ್ತೆ!