ಜುಲೈ 1 ರ ವೇಳೆಗೆ ದೇಶದ ಜನಸಂಖ್ಯೆ 139 ಕೋಟಿ, ಲೋಕಸಭೆಗೆ ಕೇಂದ್ರದ ಮಾಹಿತಿ!
ಜುಲೈ 1ರ ವೇಳೆಗೆ ಭಾರತದಲ್ಲಿ ಜನಸಂಖ್ಯೆ 139 ಕೋಟಿಗೆ ಏರಿದೆ ಎಂದು ಕೇಂದ್ರ ಸಚಿವ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 142 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಈಗಲೂ ಅಗ್ರಸ್ಥಾನದಲ್ಲಿದೆ.
ನವದೆಹಲಿ (ಜು.25): ದೇಶದ ಜನಸಂಖ್ಯೆ ಪ್ರಸ್ತುತ 139 ಕೋಟಿಗೆ ಏರಿದೆ. ಜುಲೈ 1 ರಂದು ದೇಶದ ಜನಸಂಖ್ಯೆ 139 ಕೋಟಿ ಆಗಿದೆ ಎಂದು ಜುಲೈ 25 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು ಈ ಮಾಹಿತಿ ನೀಡಿದ್ದಾರೆ. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವರು ಈ ಮಾಹಿತಿ ನೀಡಿದ್ದಾರೆ. ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಇದರ ಮಾಹಿತಿ ನೀಡಿದ್ದು, ವಿಶ್ವಸಂಸ್ಥೆ (ಯುಎನ್), ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ, ಜನಸಂಖ್ಯಾ ವಿಭಾಗ ಮತ್ತು ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟಸ್ 2022 ರ ಆನ್‌ಲೈನ್ ಪ್ರಕಟಣೆಯ ಪ್ರಕಾರ, 2023ರ ಜುಲೈ 1 ರಂದು ಚೀನಾದ ಜನಸಂಖ್ಯೆಯು 1,425,671 ಸಾವಿರ ಎಂದು ಅಂದಾಜು ಮಾಡಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ಆಯೋಗವು ತನ್ನ ವರದಿಯಲ್ಲಿ 2023ರ ಜುಲೈ 1 ರಂದು ಭಾರತದ ಜನಸಂಖ್ಯೆ 1,392,329 ಸಾವಿರ ಎಂದು ಅಂದಾಜಿಸಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದರು. 2021 ರಲ್ಲಿ ಜನಗಣತಿ ನಡೆಸಲು ಕೇಂದ್ರ ಸರ್ಕಾರವು 2019ರ ಮಾರ್ಚ್ 28 ರಂದು ಗೆಜೆಟ್‌ನಲ್ಲಿ ಅಧಿಸೂಚನೆಯನ್ನು ನೀಡಿದೆ ಎಂದು ರೈ ಹೇಳಿದರು. ಆದರೆ ಈ ವರ್ಷ (2019) ಕೋವಿಡ್ ಆಗಮನದ ಕಾರಣ, ಜನಗಣತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
ದೇಶದಲ್ಲಿ ಅತೀಹೆಚ್ಚು ಹಿಂದು ಜನಸಂಖ್ಯೆ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
India Population Surpasses China: ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಭಾರತ!