Asianet Suvarna News Asianet Suvarna News

ಭಾರತ- ಪಾಕ್‌ ಅಣು ಯುದ್ಧ ನಡೆದರೆ ವಿಶ್ವಕ್ಕೆ ಆಹಾರ ಸಿಗಲ್ಲ!

ಭಾರತ- ಪಾಕ್‌ ಅಣು ಯುದ್ಧ ನಡೆದರೆ 5 ವರ್ಷ ಸೂರ್ಯನೇ ಮಂಕಾಗಿಬಿಡ್ತಾನೆ: ಅಧ್ಯಯನ ವರದಿ| ತಾಪಮಾನ 1.8 ಡಿಗ್ರಿ ಕುಸಿತ, ಶೇ.8 ಮಳೆ ಖೋತಾ ಸಂಭವ| ಅತ್ಯಂತ ಘನಘೋರ ಜಾಗತಿಕ ಆಹಾರ ಬಿಕ್ಕಟ್ಟು ಸಾಧ್ಯತೆ

India Pakistan nuclear war has potential to cause global food crisis
Author
Bangalore, First Published Mar 18, 2020, 8:49 AM IST

ವಾಷಿಂಗ್ಟನ್‌[ಮಾ.18]: ಸಾಂಪ್ರದಾಯಿಕ ವೈರಿ ದೇಶಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಒಂದು ವೇಳೆ ಏನಾದರೂ ಸೀಮಿತ ಅಣು ಯುದ್ಧ ನಡೆದರೆ ಇಡೀ ವಿಶ್ವವೇ ಹಸಿವಿನಿಂದ ನರಳಬೇಕಾಗುತ್ತದೆ. ಆಧುನಿಕ ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಆಹಾರ ನಷ್ಟಉಂಟಾಗಲಿದೆ ಎಂಬ ಎಚ್ಚರಿಕೆ ಗಂಟೆ ಮೊಳಗಿಸುವ ವರದಿಯೊಂದು ಬಿಡುಗಡೆಯಾಗಿದೆ.

ಈ ಎರಡೂ ದೇಶಗಳ ಅಣು ಯುದ್ಧದಿಂದ ತಕ್ಷಣಕ್ಕೆ 10 ಕೋಟಿ ಜನರು ಸಾಯುತ್ತಾರೆ ಎಂದು ಜರ್ನಲ್‌ ಸೈನ್ಸ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ವರದಿಯೊಂದು ಪ್ರಕಟವಾಗಿತ್ತು. ಅದರ ಸಹ ಲೇಖಕರಾಗಿದ್ದ ರುಟ್ಗೇ​ರ್‍ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲನ್‌ ರೊಬೊಕ್‌ ಅವರು ಮತ್ತೊಂದು ವರದಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ಭಾರತ- ಪಾಕ್‌ ಅಣು ಸಮರದಿಂದ ಜಗತ್ತಿನ ಆಹಾರ ವ್ಯವಸ್ಥೆ ಮೇಲೆ ಯಾವೆಲ್ಲಾ ರೀತಿಯ ಪರಿಣಾಮವಾಗಲಿದೆ ಎಂದು ವಿವರಿಸಲಾಗಿದೆ.

ಪಿಎನ್‌ಎಸ್‌ ಎಂಬ ಜರ್ನಲ್‌ನಲ್ಲಿ ಈ ವರದಿ ಪ್ರಕಟವಾಗಿದೆ. ಅದರ ಪ್ರಕಾರ, ಎರಡೂ ದೇಶಗಳು 100 ಅಣ್ವಸ್ತ್ರಗಳನ್ನು ಬಳಸಿದರೂ ಭೀಕರ ಬೆಂಕಿಯುಂಡೆಗಳು ಸೃಷ್ಟಿಯಾಗಿ ಭೂ ಮೇಲಿನ ವಾತಾವರಣದಲ್ಲಿ 50 ಲಕ್ಷ ಟನ್‌ನಷ್ಟುಕಪ್ಪು ಹೊಗೆ ಸೃಷ್ಟಿಯಾಗಲಿದೆ. ಇದರಿಂದ ಭೂಮಿಯ ತಾಪಮಾನ 1.8 ಡಿಗ್ರಿ ಸೆಲ್ಸಿಯಸ್‌ನಷ್ಟುಕುಸಿಯಲಿದೆ. ಮಳೆ ಶೇ.8ರಷ್ಟುಕಡಿಮೆಯಾಗಲಿದೆ. ಕನಿಷ್ಠ 5 ವರ್ಷಗಳ ಕಾಲ ಸೂರ್ಯನ ಬೆಳಕೂ ತಗ್ಗಲಿದೆ ಎಂದು ಹೇಳಲಾಗಿದೆ.

ಅಣು ಯುದ್ಧದಿಂದ ನೇರ ಪರಿಣಾಮಗಳು ಎಷ್ಟುಘೋರವಾಗಿರುತ್ತವೋ, ಅಷ್ಟೇ ಪರಿಣಾಮಗಳು ಯುದ್ಧ ನಡೆದ ದೇಶಗಳಿಗೆ ಸಂಬಂಧವಿಲ್ಲದ ರಾಷ್ಟ್ರಗಳಲ್ಲಿ ಹಸಿವಿನಿಂದ ಉಂಟಾಗಲಿವೆ. ಯುದ್ಧ ನಡೆದ ಮೊದಲ ವರ್ಷವೇ ಶೇ.12ರಷ್ಟುಆಹಾರ ಕೊರತೆ ಕಂಡುಬರಲಿದೆ. ಐತಿಹಾಸಿಕವಾಗಿ ಬರ ಹಾಗೂ ಜ್ವಾಲಾಮುಖಿ ಉಂಟಾದ ಸಂದರ್ಭದಲ್ಲಿ ಎದುರಾಗುವ ಆಹಾರ ಕೊರತೆಗಿಂತ ಇದು ನಾಲ್ಕುಪಟ್ಟು ಅಧಿಕವಾಗಿರುತ್ತದೆ. ದೇಶೀಯವಾಗಿರುವ ಆಹಾರ ಸಂಗ್ರಹ ಹಾಗೂ ಜಾಗತಿಕ ವ್ಯಾಪಾರದ ಮೂಲಕ ಮೊದಲ ವರ್ಷದ ನಷ್ಟವನ್ನು ಭರಿಸಿಕೊಳ್ಳಬಹುದು. ಆದರೆ ಬಹುವರ್ಷಗಳ ನಷ್ಟದಿಂದ ದೇಶೀಯ ಆಹಾರ ಲಭ್ಯತೆ ಕುಸಿಯಲಿದೆ. ಅದರಲ್ಲೂ ವಿಶೇಷವಾಗಿ ಆಹಾರ ಅಭದ್ರತೆ ಇರುವ ದೇಶಗಳಲ್ಲಿ ಸಮಸ್ಯೆಯಾಗಲಿದೆ ಎಂದು ವಿವರಿಸಿದೆ.

ಐದು ವರ್ಷಗಳ ಕಾಲ ಜೋಳ ಹಾಗೂ ಗೋಧಿ ಲಭ್ಯತೆ ಜಾಗತಿಕವಾಗಿ ಶೇ.13ರಷ್ಟುಕುಸಿಯಲಿದೆ. 130 ಕೋಟಿ ಜನರು ವಾಸಿಸುತ್ತಿರುವ 71 ದೇಶಗಳಲ್ಲಿ ಈ ಕೊರತೆ ಶೇ.20ರಷ್ಟಿರಲಿದೆ. ಅಮೆರಿಕ ಹಾಗೂ ಕೆನಡಾ ವಿಶ್ವದಲ್ಲೇ ಶೇ.40ರಷ್ಟುಜೋಳ ಉತ್ಪಾದಿಸುತ್ತಿವೆ. ಅವುಗಳ ಉತ್ಪಾದನೆ ಶೇ.17.5ರಷ್ಟುಕುಸಿಯಲಿದೆ ಎಂದು ತಿಳಿಸಿದೆ.

Follow Us:
Download App:
  • android
  • ios