ಅರುಣಾಚಾಲ ಪ್ರದೇಶದ ಕೆಲವು ಕ್ರೀಡಾಪಟುಗಳಿಗೆ ಚೀನಾ ಸ್ಟ್ಯಾಪಲ್ಡ್‌ ವೀಸಾ ನೀಡುತ್ತಿರುವ ಕ್ರಮಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದ್ದು, ಇಂತಹವುಗಳನ್ನು ಸ್ವೀಕರಿಸಲಾಗದು ಎಂದು ಹೇಳಿದೆ.

ನವದೆಹಲಿ: ಅರುಣಾಚಾಲ ಪ್ರದೇಶದ ಕೆಲವು ಕ್ರೀಡಾಪಟುಗಳಿಗೆ ಚೀನಾ ಸ್ಟ್ಯಾಪಲ್ಡ್‌ ವೀಸಾ ನೀಡುತ್ತಿರುವ ಕ್ರಮಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದ್ದು, ಇಂತಹವುಗಳನ್ನು ಸ್ವೀಕರಿಸಲಾಗದು ಎಂದು ಹೇಳಿದೆ. ಅಲ್ಲದೇ ಇಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಸೂಕ್ತವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಭಾರತ ಹೊಂದಿದೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಗ್ಚಿ, ಚೀನಾದ ಈ ಕ್ರಮವನ್ನು ವಿರೋಧಿಸಿ ಭಾರತ ಈಗಾಗಲೇ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಅರುಣಾಚಲ ಕ್ರೀಡಾಪಟುಗಳಿಗೆ ಚೀನಾ ಸ್ಟ್ಯಾಪಲ್ಡ್‌ ವೀಸಾ ನೀಡುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಭಾರತ ಸೂಕ್ತವಾಗಿ ಪ್ರತಿಕ್ರಿಯಿಸಲಿದೆ ಎಂದು ಹೇಳಿದ್ದಾರೆ.

ಇನ್ಮುಂದೆ ಕೈಲಾಸ ಯಾತ್ರೆ ಬಹಳ ಸುಲಭ: ಚೀನಾ, ನೇಪಾಳಕ್ಕೆ ಹೋಗ್ದೆ ಉತ್ತರಾಖಂಡದಿಂದ್ಲೇ ಪ್ರಯಾಣಿಸಿ!

ಏನಿದು ಸ್ಟೈಪಲ್ಡ್‌ ವೀಸಾ?:

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋದಾಗ ಪ್ರಯಾಣಿಕರು ಹೊಂದಿರುವ ವೀಸಾದ ಮೇಲೆ ಸ್ಟಾಂಪ್‌ ಹಾಕಲಾಗುತ್ತದೆ. ಇದರಿಂದ ಅವರು ವಿದೇಶದಿಂದ ಬಂದವರು ಎಂದು ಗುರುತಿಸಿದಂತಾಗುತ್ತದೆ. ಆದರೆ ಅರುಣಾಚಲಪ್ರದೇಶವನ್ನು ತನ್ನದೇ ಭಾಗ ಎಂದು ವಾದಿಸುತ್ತಿರುವ ಚೀನಾ ಇಲ್ಲಿಂದ ಹೋಗುವ ಪ್ರಯಾಣಿಕರ ವೀಸಾದ ಮೇಲೆ ಸ್ಟಾಂಪ್‌ ಒತ್ತದೇ, ಇವರು ತನ್ನ ದೇಶದ ಪ್ರಜೆಗಳು ಎಂಬಂತೆ ಬಿಂಬಿಸುತ್ತಿದೆ. ಈ ಥರದ ವೀಸಾಗೆ ಸ್ಟ್ಯಾಪಲ್ಡ್‌ ವೀಸಾ ಎನ್ನುತ್ತಾರೆ.

ಬ್ರೂಸ್ಲಿ ಅಭಿಮಾನಿಯ ಅದ್ಬುತ ಕಥನ: ಚೀನಾ ಪಠ್ಯಪುಸ್ತಕದಲ್ಲಿ ಪಾಠವಾದ ಭಾರತೀಯ