Asianet Suvarna News Asianet Suvarna News

ಕೊರೋನಾ ಬಂತೆಂದು ಭಾರತ ಅಳುತ್ತಾ ಕೂರಲ್ಲ: ಪ್ರಧಾನಿ ಮೋದಿ

ಸ್ವಾವಲಂಬಿಯಾಗಲು ಕೊರೋನಾ ಮಹಾಮಾರಿ ಭಾರತಕ್ಕೆ ಅವಕಾಶ ಒದಗಿಸಿದೆ. ನಮಗೆ ಎದುರಾಗುವ ಎಂತಹದ್ದೇ ದೊಡ್ಡ ವಿಪತ್ತು ಆಗಿರಲಿ. ಅದನ್ನು ಭಾರತ ಒಂದು ಅವಕಾಶವಾಗಿ ಪರಿವರ್ತಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India Not In Favour Of Sitting And Crying Over Corona Crisis Says PM Modi
Author
New Delhi, First Published Jun 19, 2020, 7:08 AM IST

ನವದೆಹಲಿ(ಜೂ.19): ಕೊರೋನಾ ಎಂಬುದು ಮಹಾ ವಿಪತ್ತು ಎಂದು ಪರಿಗಣಿಸಿ ಭಾರತ ಅಳುತ್ತಾ ಕೂರುವುದಿಲ್ಲ. ಅದು ಎಷ್ಟೇ ದೊಡ್ಡ ವಿಪತ್ತು ಆಗಿರಲಿ. ಅದನ್ನು ಭಾರತ ಒಂದು ಅವಕಾಶವಾಗಿ ಪರಿವರ್ತಿಸಲಿದೆ. ಕೊರೋನಾ ವೈರಸ್‌ ವಿರುದ್ಧ ಭಾರತ ಹೋರಾಡುವುದಷ್ಟೇ ಅಲ್ಲ, ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. 

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ಕಂಪನಿಗಳಿಗೂ ಅವಕಾಶ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾವಲಂಬಿಯಾಗಲು ಕೊರೋನಾ ಮಹಾಮಾರಿ ಭಾರತಕ್ಕೆ ಅವಕಾಶ ಒದಗಿಸಿದೆ. ಸ್ವಾವಲಂಬಿ ಎಂದರೆ ಆಮದು ಕಡಿತಗೊಳಿಸಿ, ವಿದೇಶಿ ವಿನಿಮಯವನ್ನು ಬಡವರ ಕಲ್ಯಾಣಕ್ಕೆ ಬಳಸುವುದಾಗಿದೆ. ಜತೆಗೆ ದೇಶೀಯ ಸಂಪನ್ಮೂಲವನ್ನು ಬಳಸಿ, ಆಮದನ್ನು ಮೇಕ್‌ ಇನ್‌ ಇಂಡಿಯಾ ಮೂಲಕ ಬದಲಿಸುವುದಾಗಿದೆ ಎಂದು ತಿಳಿಸಿದರು.

ಚೀನಾ ಸಂಘರ್ಷದಲ್ಲಿ ಕಳಚಿ ಬೀಳುತ್ತಿರುವ ಭಾರತದ ಮುಖವಾಡಗಳು

ವಲಸಿಗರ ಉದ್ಯೋಗ ನೀಡಲು 50 ಸಾವಿರ ಕೋಟಿ ರು. ಯೋಜನೆ

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ತವರು ರಾಜ್ಯಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಶನಿವಾರ 50 ಸಾವಿರ ಕೋಟಿ ರುಪಾಯಿ ಮೊತ್ತದ ಉದ್ಯೋಗ ಯೋಜನೆಯೊಂದಕ್ಕೆ ಚಾಲನೆ ನೀಡಲಿದ್ದಾರೆ.

ಗರೀಬ್‌ ಕಲ್ಯಾಣ ರೋಜಗಾರ್‌ ಅಭಿಯಾನ ಇದಾಗಿದ್ದು, ಹೆಚ್ಚಿನ ವಲಸೆ ಕಾರ್ಮಿಕರು ಇರುವ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್‌ ಮತ್ತು ಒಡಿಶಾ- ಈ 6 ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಈ ಯೋಜನೆಯಡಿ ತವರಿಗೆ ಮರಳಿದ ವಲಸೆ ಕಾರ್ಮಿಕರ ಜೀವನಾಧಾರಕ್ಕಾಗಿ 125 ದಿನಗಳ ಉದ್ಯೋಗವನ್ನು ಒದಗಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಶನಿವಾರ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
 

Follow Us:
Download App:
  • android
  • ios