- Home
- News
- India News
- India News Live Today; ಜಿರಳೆ ಹೋರಾಟದಲ್ಲಿ ಭಾಗಿ ಆಗಿದ್ದ ನಟ ಅಮೀರ್ ಖಾನ್ ಅಳಿಯನಿಗೆ ದೇಶ ತೊರೆಯಲು ಸೂಚನೆ
India News Live Today; ಜಿರಳೆ ಹೋರಾಟದಲ್ಲಿ ಭಾಗಿ ಆಗಿದ್ದ ನಟ ಅಮೀರ್ ಖಾನ್ ಅಳಿಯನಿಗೆ ದೇಶ ತೊರೆಯಲು ಸೂಚನೆ

ಮುಂಬೈ: ‘ಬಾಲಿವುಡ್ ನಟ ಇಮ್ರಾನ್ ಖಾನ್ ಅವರು ಅಮೆರಿಕದ ಪ್ರಜೆ. ಅವರು ಮುಂಬೈನಲ್ಲಿ ನಡೆದ ಜಿರಳೆ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ವಲಸೆ ನಿಯಮಗಳ ಉಲ್ಲಂಘನೆ. ಹೀಗಾಗಿ ಅ.28ರೊಳಗೆ ಭಾರತವನ್ನು ತೊರೆಯಬೇಕು’ ಎಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.ಇದರ ಬೆನ್ನಲ್ಲೇ ಈ ಸೂಚನೆ ಪ್ರಶ್ನಿಸಿ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ನಡುವೆ, ನೋಟಿಸ್ಗೆ ಮಹಾರಾಷ್ಟ್ರ ಪ್ರತಿಪಕ್ಷಗಳು ಕಿಡಿಕಾರಿವೆ.
ನೋಟಿಸ್ ಏಕೆ?:
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಅ.10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಭಾಗವಹಿಸಿದ್ದರು. ಇಮ್ರಾನ್ ಖಾನ್ ಅವರು ಅಮೆರಿಕದ ನಾಗರಿಕರಾಗಿದ್ದು, ಭಾರತದಲ್ಲಿರಲು ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (ಒಸಿಐ) ಕಾರ್ಡ್ ಹೊಂದಿದ್ದಾರೆ.ವಿದೇಶಿ ಪ್ರಜೆಗಳು ಭಾರತದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ. ಇದು ವಲಸೆ ಮತ್ತು ವಿದೇಶಿಯರ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.