08:01 AM (IST) May 03

India News Live 3rd May: TMC - ಪಶ್ಚಿಮ ಬಂಗಾಳ ಮತಎಣಿಕೆಗೆ ಕೇಂದ್ರ ನೌಕರರ ನೇಮಕ ಪ್ರಶ್ನಿಸಿದ್ದ ಮಮತಾ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ, ಕೋರ್ಟ್ ಹೇಳಿದ್ದೇನು?

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಮತಎಣಿಕೆಗೆ ಕೇಂದ್ರ ಸರ್ಕಾರಿ ನೌಕರರನ್ನು ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಈ ಕುರಿತು ಟಿಎಂಸಿ ಸರ್ಕಾರದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಸಿಬ್ಬಂದಿ ನಿಯೋಜನೆ ಆಯೋಗದ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ.

Read Full Story
07:53 AM (IST) May 03

India News Live 3rd May: ಮನೆಯ ಬಾತ್‌ರೂಂನಲ್ಲಿ ಯುವ ಜಡ್ಜ್ ಶವ ಪತ್ತೆ, ಅನುಮಾನ ಮೂಡಿಸಿದ ಪ್ರಕರಣ

ಮನೆಯ ಬಾತ್‌ರೂಂನಲ್ಲಿ ಯುವ ಜಡ್ಜ್ ಶವ ಪತ್ತೆ, ಅನುಮಾನ ಮೂಡಿಸಿದ ಪ್ರಕರಣ, ದೆಹಲಿಯ ಮನೆಯಲ್ಲೇ ಘಟನೆ ನಡೆದಿದೆ. ಪೊಲೀಸರು ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

Read Full Story
07:30 AM (IST) May 03

India News Live 3rd May: ಸಿಸಿಟಿವಿಯಲ್ಲಿ ವೃದ್ಧನ ಕೃತ್ಯ ಸೆರೆ

ನಾಲ್ಕು ವರ್ಷದ ಬಾಲಕಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಸ್ಥಾನದ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿ ಕೃತ್ಯ ಎಸಗಲಾಗಿದೆ. ಬಾಲಕಿ ಕಾಣೆಯಾಗಿದ್ದ ಕಾರಣ ತೀವ್ರ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.