Asianet Suvarna News Asianet Suvarna News

UP Election Opinion Poll ಮೋದಿ ಯೋಜನೆ, ಯೋಗಿ ಆಡಳಿತ, ಪೂರ್ಣ ಬಹುಮತದೊಂದಿಗೆ ಮತ್ತೆ ಬಿಜೆಪಿ ಸರ್ಕಾರ ಖಚಿತ!

  • 2022ರ ಉತ್ತರ ಪ್ರದೇಶ ಚುನಾವಣೆಗೆ ಎಲ್ಲಾ ಪಕ್ಷಗಳ ಭರ್ಜರಿ ತಯಾರಿ
  • ಜನ್‌ಕಿ ಬಾತ್- ಇಂಡಿಯಾ ನ್ಯೂಸ್ ಚುನವಣಾ ಸಮೀಕ್ಷೆ ಬಹಿರಂಗ
  • ಸಮೀಕ್ಷೆಯಲ್ಲಿ ಯೋಗಿ ಸರ್ಕಾರಕ್ಕೆ ಮತ್ತೆ ಪೂರ್ಣ ಬಹುಮತ
India News Jan ki Baat Opion Poll predicts victory and clear majority for BJP in Uttar Pradesh election 2022 ckm
Author
Bengaluru, First Published Dec 24, 2021, 5:13 PM IST | Last Updated Dec 24, 2021, 6:17 PM IST

ಉತ್ತರ ಪ್ರದೇಶ(ಡಿ.24);  ದೇಶದ ಇತರ ರಾಜ್ಯಗಳ ವಿಧಾನಸಭಾ(Assemblye Election) ಚುನಾವಣೆಗಿಂತ ಉತ್ತರ ಪ್ರದೇಶ ಚುನಾವಣೆ(Uttar pradesh Election 2022) ಎಲ್ಲಾ ಪಕ್ಷಗಳಿಗೆ ಅತೀ ಮುಖ್ಯ. ಇದೇ ಕಾರಣ ಯುಪಿ ಗೆದ್ದರೆ ದಿಲ್ಲಿಯಲ್ಲಿ ಅಧಿಕಾರದ ಚುಕ್ಕಾಣಿ ಖಚಿತ ಅನ್ನೋ ಮಾತಿದೆ. ಅತೀ ಹೆಚ್ಚು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಎಲ್ಲಾ ಪಕ್ಷಗಳು ಈಗಾಗಲೇ ಭರ್ಜರಿ ತಯಾರಿ ಆರಂಭಿಸಿದೆ. ಇದರ ನಡುವೆ ಜನ್‌ಕಿ ಬಾತ್ ಹಾಗೂ ಇಂಡಿಯಾ ನ್ಯೂಸ್(Jan ki Baat India News Opion Poll) ನಡೆಸಿದ ಜನಾಭಿಪ್ರಾಯದ ವರದಿ ಬಹಿರಂಗಗೊಂಡಿದೆ. ಈ ಸಮೀಕ್ಷೆ ಪ್ರಕಾರ 2022ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ(Yogi Adityanath) ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ.

ಜನ್‌ಕಿ ಬಾತ್ ಹಾಗೂ ಇಂಡಿಯ ನ್ಯೂಸ್ ನಡೆಸಿದ ಯುಪಿ ಚುನಾವಣೆ ಸಮೀಕ್ಷೆ ಕೆಲ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗ ಪಡಸಿದೆ. ನವೆಂಬರ್ 22ರಿಂದ ಡಿಸೆಂಬರ್ 20ರವರೆಗೆ ಸಮೀಕ್ಷೆ ನಡೆಸಲಾಗಿದೆ. ಸುಮಾರು 20,000ಕ್ಕೂ ಅಧಿಕ ಮಂದಿಯ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ. ಈ ವರದಿ ಪ್ರಕಾರ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರ  233 ರಿಂದ 252 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಈ ಮೂಲಕ ಯೋಗಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

UP ಚುನಾವಣೆ; ಜಾತಿ ಲೆಕ್ಕದ ನಡುವೆ ಜನ ಬಯಸುತ್ತಿರುವುದೇನು?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷಾ ವರದಿ!

UP ಚುನಾವಣೆಯಲ್ಲಿ ಪಕ್ಷಗಳ ಗೆಲುವಿನ ಅಂತರ

India News Jan ki Baat Opion Poll predicts victory and clear majority for BJP in Uttar Pradesh election 2022 ckm

ತೀವ್ರ ಪೈಪೋಟಿ ನೀಡಬಲ್ಲ ಸಮಾಜವಾದಿ ಪಕ್ಷ(Samajwadi Party) ಹಾಗೂ ಮೈತ್ರಿ ಪಕ್ಷ 135 ರಿಂದ 149 ಸ್ಥಾನಗಳನ್ನು ಗೆಲ್ಲಲಿದೆ. ಇತ್ತ ಕಾಂಗ್ರೆಸ್(Congress) ಸಿಂಗಲ್ ಡಿಜಿಟ್‌ನಲ್ಲೇ ಉಳಿಯಲಿದೆ. ಜನಮತ ವರದಿ ಪ್ರಕಾರ ಕಾಂಗ್ರೆಸ್ 3 ರಿಂದ 6 ಸ್ಥಾನಗಳನ್ನು ಗೆಲ್ಲಲಿದೆ ಎಂದಿದದೆ. ಇನ್ನು ಮಯಾವತಿ(Mayawati) ನೇತೃತ್ವದ ಬಹುಜನ್ ಸಮಾಜ್ ಪಾರ್ಟಿ(Bahujan Samaj Party) 11 ರಿಂದ 12 ಸ್ಥಾನ ಗೆಲ್ಲಲಿದೆ ಎಂದಿದೆ. ಪಕ್ಷೇತರರು ಸೇರಿದಂತೆ ಇತರರು 1 ರಿಂದ 4 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ.

ಯೋಗಿ, ಅಖಿಲೇಶ್, ಮಾಯಾ: ಉ. ಪ್ರದೇಶದಲ್ಲಿ ಯಾರು ಬೆಸ್ಟ್‌? ಸಮೀಕ್ಷೆಯಲ್ಲಿ ಸಿಕ್ತು ಉತ್ತರ!

ಯುಪಿ ಚುನಾವಣೆಯಲ್ಲಿ ಪಕ್ಷಗಳ ವೋಟ್ ಶೇರಿಂಗ್:

India News Jan ki Baat Opion Poll predicts victory and clear majority for BJP in Uttar Pradesh election 2022 ckm

2022ರ ಯುಪಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ವರದಿ ಹೇಳಿದರೆ, ವೋಟ್‌ ಶೇರಿಂಗ್‌ನಲ್ಲಿ ಸಮಾಜವಾದಿ ಪಾರ್ಟಿ ತೀವ್ರ ಪೈಪೋಟಿ ನೀಡಿದೆ. ಬಿಜೆಪಿ ವೋಟ್ ಶೇರ್ ಶೇಕಡಾ 39. ಇತ್ತ ಸಮಾಜವಾದಿ ಪಾರ್ಟಿ ವೋಟ್ ಶೇರ್ ಶೇಕಡಾ 35. ಇನ್ನು ಕಾಂಗ್ರೆಸ್ ಶೇಕಡಾ 5, ಬಹುಜನ ಸಮಾಜ್ ಪಾರ್ಟಿ ಶೇಕಡಾ 14 ಹಾಗೂ ಇತರರು ಶೇಕಡಾ 7 ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ ಎಂದು ಸಮೀಕ್ಷಾ ವರದಿ ಬಹಿರಂಗ ಪಡಿಸಿದೆ.

ಯಾರಾಗಬೇಕು ಯುಪಿ ಮುಂದಿನ ಮುಖ್ಯಮಂತ್ರಿ?
India News Jan ki Baat Opion Poll predicts victory and clear majority for BJP in Uttar Pradesh election 2022 ckm

ಶೇ.55 ರಷ್ಟು ಮಂದಿಗೆ ಯೋಗಿ ಮತ್ತೆ ಸಿಎಂ
ಜನ್‌ ಕಿ ಬಾತ್ -ಇಂಡಿಯಾ ನ್ಯೂಸ್ ಸಮೀಕ್ಷೆಯಲ್ಲಿ ಶೇಕಡಾ 55 ರಷ್ಟು ಮತ್ತೆ ಯೋಗಿ ಆದಿತ್ಯನಾಥ್ ಸಿಎಂ ಆಗಿ ಆಡಳಿತ ನಡೆಸಬೇಕು ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆಡಳಿತದಲ್ಲಿ ಅಭಿವೃದ್ಧಿ ಕಂಡಿದೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದಾರೆ. ಹೀಗಾಗಿ ಯೋಗಿಯೇ ಸಿಎಂ ಆಗಿ ಮುಂದುವರಿಯಬೇಕು ಶೇಕಡಾ 55 ರಷ್ಟು ಮಂದಿ ಯೋಗಿಗೆ ಮಣೆ ಹಾಕಿದ್ದಾರೆ. ಇನ್ನು ಮಾಜಿ ಸಿಎಂ ಅಖಿಲೇಶ್ ಯಾದವ್ ಸಿಎಂ ಆಗಬೇಕು ಎಂದು ಶೇಕಡಾ 31 ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 10 ರಷ್ಟು ಮಯಾವತಿ ಸಿಎಂ ಆಗಲಿ ಎಂದಿದ್ದರೆ, ಶೇಕಡಾ 2 ರಷ್ಟು ಮಂದಿ ಪ್ರಿಯಾಂಕಾ ಗಾಂಧಿ ಸಿಎಂ ಆಗಬೇಕು ಎಂದಿದ್ದಾರೆ

ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಎಷ್ಟಿದೆ?
ಉತ್ತರ ಪ್ರದೇಶ ಚುನಾವಣೆ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇತ್ತೀಚೆಗಿನ ಕಾಶಿ ವಿಶ್ವನಾಥ ಮಂದಿ ಕಾರಿಡಾರ್ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನೆರವಿನಿಂದ ಆಗಿದೆ. ಹೀಗಾಗಿ ಮೋದಿ ಅಲೆ ಹೆಚ್ಚಾಗಿಯೇ ಇದೆ. ಯೋಗಿ ಆಡಳಿತಕ್ಕಿಂತ ಮೋದಿ ಯೋಜನೆ ಹಾಗೂ ಅಲೆ ಹೆಚ್ಚಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಶೇಕಡಾ 75ರಷ್ಟು ಮಂದಿ ಮೋದಿ ಯೋಜನೆ ಹಾಗೂ ವರ್ಚಸ್ಸು ಯುಪಿ ಚುನಾವಣೆಯಲ್ಲಿ ವರ್ಕೌಟ್ ಆಗಲಿದೆ ಎಂದಿದ್ದಾರೆ.

ಆಡಳಿತ ವಿರೋಧಿ ಅಲೆ ಎಷ್ಟಿದೆ?
ಉತ್ತರ ಪ್ರದೇಶದಲ್ಲಿ ನಡೆದ ಕೆಲ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಕರಣಗಳು ಯೋಗಿ ಸರ್ಕಾರಕ್ಕೆ ಕೊಂಚ ಹಿನ್ನಡೆ ತಂದಿದೆ. ಶೇಕಡಾ 33 ರಷ್ಟು ಮಂದಿ ಯೋಗಿ ಆದಿತ್ಯನಾಥ್ ವಿರುದ್ದವಿದ್ದಾರೆ. ಇನ್ನು ಯೋಗಿ ಸರ್ಕಾರದ ಸಚಿವರ ವಿರುದ್ದ ನಿಂತವರ ಸಂಖ್ಯೆ ಶೇಕಡಾ 42. ಇನ್ನು ಶೇಕಡಾ 27 ರಷ್ಟು ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ ಎಂದಿದ್ದಾರೆ. ಶೇಕಡಾ 52 ರಷ್ಟು ಮಂದಿ ಯೋಗಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಸಂತೋಷರಾಗಿದ್ದಾರೆ. ಇನ್ನು ಶೇಕಡಾ 48 ರಷ್ಟು ಮಂದಿ ಅಸಂತುಷ್ಟರಾಗಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios