ಭಾರತದಲ್ಲಿ ಹೆಚ್ಚು ಶ್ರಮಜೀವಿ ನಗರದ ಪೈಕಿ ದೆಹಲಿಗೆ ಮೊದಲ ಸ್ಥಾನ. ದೆಹಲಿ ದೇಶದ ಸರಾಸರಿ ಸಮಯಕ್ಕಿಂತ 2 ಗಂಟೆ ಹೆಚ್ಚು ಕೆಲಸ ಮಾಡುತ್ತೆ. ಇನ್ನು ಅರಾಮವಾಗಿರುವ ನಗರದ ಯಾವುದು?
ನವದೆಹಲಿ(ಏ.04) ಭಾರತದಲ್ಲಿ ಇತ್ತೀಚೆಗೆ ವಾರದಲ್ಲಿ 70 ಗಂಟೆ ಕೆಲಸ, 90 ಗಂಟೆ ಕೆಲಸ ಮಾಡಬೇಕು ಅನ್ನೋ ಮಾತುಗಳು ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ನಡುವೆ ಇದೀಗ ಮಹತ್ವದ ಅಧ್ಯಯನ ವರದಿ ಮಾಹಿತಿ ಬಹಿರಂಗವಾಗಿದೆ. ಭಾರತದಲ್ಲಿ ಅತೀ ಹೆಚ್ಚು ಗಂಟೆ ಕೆಲಸ ಮಾಡುವ ನಗರ ಹಾಗೂ ಅತೀ ಕಡಿಮೆ ಕೆಲಸ ಮಾಡುವ ನಗರ ಯಾವುದು ಅನ್ನೋ ಅಧ್ಯಯನ ವರದಿ ಬಹಿರಂಗವಾಗಿದೆ. ವಿಶೇಷ ಅಂದರೆ ದೆಹಲಿ ಭಾರತದಲ್ಲಿ ಅತೀ ಹೆಚ್ಚು ಗಂಟೆ ಕೆಲಸ ಮಾಡುವ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಸರಾಸರಿ ಕೆಲಸದ ಗಂಟೆಗೆ ಹೋಲಿಸಿದರೆ ದೆಹಲಿ ಮತ್ತೆ ಎರಡು ಗಂಟೆ ಹೆಚ್ಚು ಕೆಲಸ ಮಾಡುತ್ತೆ ಎಂದು ಅಧ್ಯಯನ ವರದಿ ಹೇಳುತ್ತಿದೆ.
ಮಿನಿಸ್ಟ್ರಿ ಆಫ್ ಸ್ಟಾಟಿಸ್ಟಿಕ್ ಆ್ಯಂಡ್ ಪ್ರಾಗ್ರಾಮ್ ಇಂಪ್ಲಿಮೆಂಟೇಶನ್ ಇತ್ತೀಚಿನ ವರದಿಯಲ್ಲಿ ಈ ಮಹತ್ವದ ಅಂಶ ಬಯಲಾಗಿದೆ. ರಾಷ್ಟ್ರ ರಾಜಧಾನಿ ಜನರು ಹೆಚ್ಚು ಶ್ರಮಜೀವಿಗಳು ಎಂದಿದೆ. ದೆಹಲಿ ಜನರು ಕೆಲಸ, ಕೆಲಸದ ಚಟುವಟಿಕೆ, ಪ್ರಯಾಣ ಸೇರಿದಂತೆ ಎಲ್ಲಾ ಕಾರಣಗಳಿಂದ ಹೆಚ್ಚು ಸಮಯ ಕಳೆಯುತ್ತಾರೆ ಎಂದು ವರದಿ ಹೇಳುತ್ತಿದೆ.
ಈ ಕಂಪನಿಯಲ್ಲಿ ಹಾರ್ಡ್‌ವರ್ಕ್ ಮಾಡಿದವರಿಗೆ ಟಾಟಾ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್ ಗಿಫ್ಟ್!
ದೆಹಲಿ ಜನ ಪ್ರತಿ ದಿನ 9.5 ಗಂಟೆ ಕೆಲಸ
ದೆಹಲಿ ಜನರ ಸರಾಸರಿ ಕೆಲಸದ ಸಮಯ ಪ್ರತಿ ದಿನ 571 ನಿಮಿಷ. ಅಂದರೆ ಪ್ರತಿ ದಿನ 9.5 ಗಂಟೆ ದೆಹಲಿ ಜನರು ಕೆಲಸ ಮಾಡುತ್ತಾರೆ. ಇದು ದೇಶದ ಜನರ ಸರಾಸರಿ ಕೆಲಸದ ಸಮಯಕ್ಕಿಂತ 2 ತಾಸು ಹೆಚ್ಚು. ಭಾರತದ ಒಟ್ಟು ಜನರ ಸರಾಸರಿ ಕೆಲಸದ ಸಮಯ ಪ್ರತಿ ದಿನ 455 ನಿಮಿಷ ಅಂದರೆ ಸರಿಸುಮಾರು 7.5 ಗಂಟೆ. ಇದಕ್ಕೆ ಹೋಲಿಸಿದರೆ ದೆಹಲಿ ಜನರು ಎರಡು ಗಂಟೆ ಹೆಚ್ಚು ಶ್ರಮವಹಿಸುತ್ತಾರೆ ಎಂದು ವರದಿ ಹೇಳುತ್ತಿದೆ.
ತಮಿಳುನಾಡು ಜನರು ಕಡಿಮೆ ಕೆಲಸ?
ದೆಹಲಿ ಹೆಚ್ಚು ಶ್ರಮಜೀವಿ ನಗರ ಎಂದು ಖ್ಯಾತಿಗೊಂಡಿದ್ದರೆ, ತಮಿಳುನಾಡು ಜನರ ಒಟ್ಟು ಸರಾಸರಿ ಪ್ರತಿ ದಿನ 484 ನಿಮಿಷ. ಇದು ಒಡಿಶಾ, ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಕ್ಕಿಂತ ಕಡಿಮೆಯಾಗಿದೆ. ತಮಿಳುನಾಡು ಕಡಿಮೆ ಕೆಲಸ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಹರ್ಯಾಣ ಎರಡನೇ ಸ್ಥಾನದಲ್ಲಿದೆ. ಹರ್ಯಾಣ ಜನರು ಪ್ರತಿ ದಿನ ಸರಸಾರಿ 493 ನಿಮಿಷ ಕೆಲಸ ಮಾಡುತ್ತಾರೆ ಎಂದು ವರದಿ ಹೇಳುತ್ತಿದೆ.
ರಾಜಸ್ಥಾನ ಜನರ ವಿಶೇಷತೆ
ಕೆಲಸದ ವಿಚಾರದಲ್ಲಿ ರಾಜಸ್ಥಾನ ಜನತೆಯಲ್ಲಿ ವಿಶೇಷತೆ ಇದೆ. ಕಾರಣ ರಾಜಸ್ಥಾನ ಜನ ಪ್ರತಿ ದಿನ ಕಲೆಸದ ನಡುವೆ ಸಾಮಾಜಿಕ ಕಾರ್ಯ, ಸಮುದಾಯದ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಾರೆ. ಇದಕ್ಕಾಗಿ ಸರಾಸರಿ ಪ್ರತಿ ದಿನ 148 ನಿಮಿಷ ಸಮಯ ಕಳೆಯುತ್ತಾರೆ. ಕೆಲಸದ ನಡುವೆ ಹೀಗೆ ಬ್ರೇಕ್ ತೆಗೆದುಕೊಳ್ಳು ಭಾರತದ ಸರಾಸರಿ ಸಮಯ 129 ನಿಮಿಷ. ತಮಿಳು ಸೋಶಿಯಲ್ ವಿಚಾರಕ್ಕಾಗಿ ಕೆಲಸದ ನಡುವೆ ಬ್ರೇಕ್ ತೆಗೆದುಕೊಳ್ಳುವುದಿಲ್ಲ. ಕಾರಣ ತಮಿಳುನಾಡು ಜನರ ಈ ರೀತಿಯ ಬ್ರೇಕ್ ಸಮಯ 106 ನಿಮಿಷ ಮಾತ್ರ.
ಹೆಚ್ಚು ಆರಾಮವಾಗಿರುವ ಜನ
ಹರ್ಯಾಣ ಜನ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಕೆಲಸದ ನಡುವೆ ವಿಶ್ರಾಂತಿಗಾಗಿ ಹರ್ಯಾಣ ಜನ ಪ್ರತಿ ದಿನ 199 ನಿಮಿಷ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ಸರಾಸರಿ ವಿಶ್ರಾಂತಿ ಸಮಯ 176 ನಿಮಿಷ. ಅಂಕಿ ಅಂಶ ಪ್ರಕಾರ ಹರ್ಯಾಣ ಜನರು ವಿಶ್ರಾಂತಿ ಪಡೆಯುತ್ತಾ ಕೆಲಸ ಮಾಡುತ್ತಾರೆ ಎನ್ನುತ್ತಿದೆ.
