ಮೋದಿ ಮತ್ತೆ ಗೆದ್ದರೆ ಇನ್ಮುಂದೆ ದೇಶದಲ್ಲಿ ಎಲೆಕ್ಷನ್ ಇರಲ್ಲ; ಮೋದಿ ಜಯಿಸಿದರೆ ಸರ್ವಾಧಿಕಾರ ಶುರು: ಖರ್ಗೆ
ಬಿಜೆಪಿ ಮತ್ತು ಅವರ ಸಿದ್ದಾಂತವಾದಿಗಳಾದ ಆರ್‌ಎಸ್‌ಎಸ್‌ನವರು ಒಂದು ರೀತಿ ವಿಷವಿದ್ದಂತೆ ಹಾಗಾಗಿ ಜನ ಅವರಿಂದ ದೂರವಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಇದು ಜನರಿಗಿರುವ ಕೊನೆ ಆಯ್ಕೆಯಾಗಿದೆ ಎಂದು ಖರ್ಗೆ ಹೇಳಿದರು.
ಭುವನೇಶ್ವರ (ಜನವರಿ 30, 2024): ಪ್ರಜಾಪ್ರಭುತ್ವವನ್ನ ಉಳಿಸಿಕೊಳ್ಳಲು 2024ರಲ್ಲಿ ನಡೆಯುವ ಚುನಾವಣೆಯೇ ದೇಶದ ಜನರಿಗಿರುವ ಕೊನೆಯ ಅವಕಾಶ. ಒಂದು ವೇಳೆ ಈ ಚುನಾವಣೆಯಲ್ಲೂ ಮೋದಿ ಜಯಗಳಿಸಿದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ, ಸರ್ವಾಧಿಕಾರ ಆರಂಭವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸೋಮವಾರ ಇಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಮತ್ತು ಅವರ ಸಿದ್ದಾಂತವಾದಿಗಳಾದ ಆರ್‌ಎಸ್‌ಎಸ್‌ನವರು ಒಂದು ರೀತಿ ವಿಷವಿದ್ದಂತೆ ಹಾಗಾಗಿ ಜನ ಅವರಿಂದ ದೂರವಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಇದು ಜನರಿಗಿರುವ ಕೊನೆ ಆಯ್ಕೆಯಾಗಿದೆ ಎಂದು ಹೇಳಿದರು.
ಇದನ್ನು ಓದಿ: ವಿದ್ಯಾರ್ಥಿ, ಯುವಜನರಲ್ಲಿ ಕೌಶಲ್ಯ ವೃದ್ಧಿಸಿ: ಮಲ್ಲಿಕಾರ್ಜುನ ಖರ್ಗೆ ಕಿವಿಮಾತು!
ಇದೇ ವೇಳೆ ಇಂಡಿಯಾ ಮೈತ್ರಿಕೂಟವನ್ನು ತೊರೆದ ಜೆಡಿಯು ನಾಯಕ ನಿತೀಶ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ವ್ಯಕ್ತಿ ಪಕ್ಷ ತೊರೆಯುವುದರಿಂದ ನಾವು ದುರ್ಬಲಗೊಳ್ಳುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ನಿತೀಶ್ ನಿರ್ಗಮನ: ಇಂಡಿಯಾ ಕೂಟಕ್ಕೆ ಆಘಾತ; ಸೀಟು ಹಂಚಿಕೆಗೆ ಕಾಂಗ್ರೆಸ್‌ಗೆ ತಲೆನೋವು!