81000 ಸೋಂಕಿತರು: ಚೀನಾ ಹಿಂದಿಕ್ಕುವತ್ತ ಭಾರತ! ಒಂದೇ ದಿನ 99 ಸಾವು
ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರಿದಿದ್ದು, ಗುರುವಾರ ಹೊಸದಾಗಿ 3731 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರೊಂದಿಗೆ ವೈರಸ್‌ಪೀಡಿತರ ಸಂಖ್ಯೆ 80 ಸಾವಿರದ ಗಡಿ ದಾಟಿ 81634ಕ್ಕೇರಿಕೆಯಾಗಿದೆ.
ನವದೆಹಲಿ(ಮೇ 15): ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರಿದಿದ್ದು, ಗುರುವಾರ ಹೊಸದಾಗಿ 3731 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇದರೊಂದಿಗೆ ವೈರಸ್‌ಪೀಡಿತರ ಸಂಖ್ಯೆ 80 ಸಾವಿರದ ಗಡಿ ದಾಟಿ 81634ಕ್ಕೇರಿಕೆಯಾಗಿದೆ.
"
ವಿಶ್ವದಲ್ಲೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡ ಚೀನಾವನ್ನು ಸೋಂಕಿತರ ಸಂಖ್ಯೆಯಲ್ಲಿ ಹಿಂದಿಕ್ಕುವತ್ತ ಭಾರತ ದಾಪುಗಾಲು ಇಟ್ಟಿದೆ. ಚೀನಾದಲ್ಲಿ ಒಟ್ಟು 82929 ಸೋಂಕಿತರು ಇದ್ದು, ಕೇವಲ 1295 ಪ್ರಕರಣಗಳಷ್ಟುಹಿಂದೆ ಭಾರತ ಇದೆ. ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ವೇಗ ನೋಡಿದರೆ ಶುಕ್ರವಾರವೇ ಚೀನಾವನ್ನು ಭಾರತ ಹಿಂದಿಕ್ಕುವ ಎಲ್ಲ ಸಾಧ್ಯತೆಗಳೂ ಇವೆ.
ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಂ ಕಡ್ಡಾಯ..?
ಈ ನಡುವೆ, ದೇಶದಲ್ಲಿ ಸಾವಿನ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಗುರುವಾರ 99 ಮಂದಿ ಮರಣ ಹೊಂದಿದ್ದಾರೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಸೋಂಕಿನಿಂದ ಮೃತರಾದವರ ಸಂಖ್ಯೆ 2500 ಗಡಿ ದಾಟಿ 2572ಕ್ಕೇರಿಕೆಯಾಗಿದೆ.
ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮುತ್ತಪ್ಪ ರೈ ನಿಧನ
ದೇಶದಲ್ಲಿ ಕೊರೋನಾ ವೈರಸ್ ಅಬ್ಬರಕ್ಕೆ ಅತಿ ಹೆಚ್ಚು ನಲುಗಿರುವ ರಾಜ್ಯ ಮಹಾರಾಷ್ಟ್ರ. ಅಲ್ಲಿ ಗುರುವಾರ ದಾಖಲೆಯ 1602 ಪ್ರಕರಣಗಳು ಹೊಸದಾಗಿ ಕಂಡುಬಂದಿದ್ದು, 44 ಸಾವುಗಳು ಸಂಭವಿಸಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 27524ಕ್ಕೇರಿದ್ದರೆ, ಮೃತರ ಸಂಖ್ಯೆ 1000ದ ಗಡಿ ದಾಟಿ 1019ಕ್ಕೆ ಹೆಚ್ಚಳವಾಗಿದೆ.
ದೇವಸ್ಥಾನದ ಚಿನ್ನದ ಬದಲು ಕಾಂಗ್ರೆಸ್ ನಾಯಕರ ಖಾತೆಯಿಂದ ತೆಗೆಯಿರಿ; ಚೌವ್ಹಾಣ್ ಐಡಿಯಾಗೆ ಸ್ವಾಮಿಜಿ ತಿರುಗೇಟು!
ಮುಂಬೈವೊಂದರಲ್ಲೇ ದಾಖಲೆಯ 998 ಸೋಂಕು, 25 ಸಾವುಗಳು ಸಂಭವಿಸಿವೆ. ಮುಂಬೈನಲ್ಲಿ ವೈರಸ್‌ಪೀಡಿತರ ಸಂಖ್ಯೆ 16579ಕ್ಕೇರಿದ್ದರೆ, ಮೃತರ ಸಂಖ್ಯೆ 621ಕ್ಕೆ ಹೆಚ್ಚಳವಾಗಿದೆ. ಬುಧವಾರ ಮಹಾರಾಷ್ಟ್ರದಲ್ಲಿ 1495 ಪ್ರಕರಣಗಳು ವರದಿಯಾಗಿದ್ದೇ ಈವರೆಗಿನ ದಾಖಲೆಯಾಗಿತ್ತು.