Asianet Suvarna News

ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಂ ಕಡ್ಡಾಯ..?

ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರ ಐಟಿ ಹಾಗೂ ಇತರ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡಿವೆ. ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಷಕ್ಕೆ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

Central government to provide work from home facility to employees
Author
Bangalore, First Published May 15, 2020, 7:21 AM IST
  • Facebook
  • Twitter
  • Whatsapp

ನವದೆಹಲಿ(ಮೇ 15): ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರ ಐಟಿ ಹಾಗೂ ಇತರ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡಿವೆ. ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಷಕ್ಕೆ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

ಈಗಾಗಲೇ ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳ ನೌಕರರಲ್ಲಿ ಅನೇಕರು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ಎಲ್ಲಾ 75 ಸಚಿವಾಲಯಗಳು ಮುಂದಿನ ದಿನಗಳಲ್ಲಿ ಸರ್ಕಾರದ ಹೊಸ ನೀತಿಯಂತೆ ಅಳವಡಿಸಿಕೊಳ್ಳುವ ಬಗ್ಗೆ ಸಿಬ್ಬಂದಿ ಸಚಿವಾಲಯ ಚಿಂತನೆ ನಡೆಸಿದೆ. ಈ ಕುರಿತು ಮೇ 21ರೊಳಗೆ ಅಭಿಪ್ರಾಯ ಸಲ್ಲಿಸುವಂತೆ ಎಲ್ಲ ಸಚಿವಾಲಯಗಳಿಗೆ ಸಿಬ್ಬಂದಿ ಸಚಿವಾಲಯ ಸುತ್ತೋಲೆ ಕಳುಹಿಸಿದೆ.

ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮುತ್ತಪ್ಪ ರೈ ನಿಧನ

ಈ ಸುತ್ತೋಲೆಯಲ್ಲಿರುವ ಪ್ರಸ್ತಾವನೆಗಳ ಪೈಕಿ, ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ವರ್ಷದಲ್ಲಿ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡುವುದು ಕಡ್ಡಾಯ ಎಂಬುದೂ ಸೇರಿದೆ. ಆದರೆ, ಸರ್ಕಾರದ ರಹಸ್ಯ ಕಡತಗಳನ್ನು ಮಾತ್ರ ಕಚೇರಿಯ ಕಂಪ್ಯೂಟರ್‌ಗಳಲ್ಲೇ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿದೆ.

Follow Us:
Download App:
  • android
  • ios