- Home
- News
- India News
- India Latest News Live: ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ
LIVE NOW
India Latest News Live: ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ

ಸಾರಾಂಶ
ಹೈದರಾಬಾದ್: ತೆಲಂಗಾಣ ಹಾಕಿ ಅಸೋಸಿಯೇಷನ್ ಅಧ್ಯಕ್ಷ, ಬಂಗಾರು ಬಾಬು ಅಂತಲೇ ಖ್ಯಾತಿ ಪಡೆದಿರುವ ಕೊಂಡ ವಿಜಯ್ ಕುಮಾರ್ ಸುಮಾರು 2 ಕೇಜಿ ಮೌಲ್ಯದ ಚಿನ್ನಾಭರಣ ಧರಿಸಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಬೆನ್ನಲ್ಲೇ ದಿಲ್ಲಿ ಏರ್ಪೋರ್ಟ್ನಲ್ಲಿ ಅಧಿಕಾರಿಗಳು ಅವರನ್ನು ತಡೆದು ಚಿನ್ನ ಜಪ್ತಿ ಮಾಡಿದ್ದಾರೆ,
ವಿಜಯ್ ಕುಮಾರ್ ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೈದರಾಬಾದ್ನಿಂದ ದೆಹಲಿಗೆ 2.3 ಕೋಟಿ ರು. ಮೌಲ್ಯದ ಚಿನ್ನ ಧರಿಸಿ ಬಂದಿದ್ದರು. ದಿಲ್ಲಿ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಸಿಐಎಸ್ಎಫ್ ಸಿಬ್ಬಂದಿ ಅವರನ್ನು ತಡೆದು ಚಿನ್ನಾಭರಣದ ಆದಾಯದ ಮೂಲ ಕೇಳಿದ್ದಾರೆ. ಆದರೆ ಈ ವೇಳೆ ಅವರು ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದಾರೆ. ಹೀಗಾಗಿ 1.4 ಕೋಟಿ ಚಿನ್ನವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆದರೆ ಅವರು ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡಿದ್ದಾರೆ
08:32 AM (IST) Mar 29
India Latest News Live 29 March 2026ಕಾಲ್ತುಳಿತದ ಬಳಿಕ ಮೊದಲ ಅಗ್ನಿಪರೀಕ್ಷೆ ಗೆದ್ದ ಕೆಎಸ್‌ಸಿಎ! ಮೊದಲ ಪಂದ್ಯ ಯಶಸ್ವಿ ಆಯೋಜನೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಳೆದ ವರ್ಷದ ಕಾಲ್ತುಳಿತದ ಘಟನೆಯಿಂದ ಪಾಠ ಕಲಿತ ಕೆಎಸ್‌ಸಿಎ, ಬೆಂಗಳೂರು ಪೊಲೀಸರು ಮತ್ತು ಇತರ ಇಲಾಖೆಗಳು ಕೈಗೊಂಡ ಕಠಿಣ ಭದ್ರತಾ ಕ್ರಮಗಳು, ಸುಗಮ ಪ್ರವೇಶ ವ್ಯವಸ್ಥೆ ಮತ್ತು ವೈದ್ಯಕೀಯ ಸಿದ್ಧತೆಗಳಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
Read Full Story 08:32 AM (IST) Mar 29
India Latest News Live 29 March 2026ಯುದ್ಧದ ಬಿಸಿ ಈಗ ಬೆಡ್‌ರೂಮ್‌ಗೆ! ನಿಮ್ಮಿಷ್ಟದ ಕಾಂಡೋಮ್ ಬ್ರ್ಯಾಂಡ್ ಸಿಗೋದು ಇನ್ಮುಂದೆ ಕಷ್ಟ
ಇರಾನ್ ಯುದ್ಧದಿಂದಾಗಿ ಕಾಂಡೋಮ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಭಾರತದಲ್ಲಿ ಕಾಂಡೋಮ್ ಬೆಲೆ ಶೇ. 50ರಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಬಹುದು.
Read Full Story 08:20 AM (IST) Mar 29
India Latest News Live 29 March 2026ಐಪಿಎಲ್ 2026 - ನಿನ್ನೆ ನಡೆದ ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ, ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್‌ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ, 202 ರನ್‌ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು.
Read Full Story