09:26 PM (IST) Jun 02

India Latest News Live 2 June 2026 Viral Video - ಐಫೆಲ್ ಟವರ್ ಮುಂದೆ ಭಾರತೀಯ ಮಹಿಳೆಯರ ಸೀರೆ ಕ್ಯಾಟ್‌ವಾಕ್ - ಡ್ಯಾನ್ಸ್‌ಗಿಂತ ಇದೇ ಚೆಂದ ಅನ್ನೋದಾ!

ಈಗಿನ ಕಾಲದಲ್ಲಿ ಟೂರಿಗೆ ಹೋದರೆ ಅಲ್ಲಿ ಒಂದು ರೀಲ್ಸ್ ಮಾಡೋದು ಕಾಮನ್ ಆಗಿದೆ. ಅದರಲ್ಲೂ ಡ್ಯಾನ್ಸ್ ರೀಲ್ಸ್ ಮಾಡೋದು ಈಗಿನ ಟ್ರೆಂಡ್. ಆದರೆ, ಇಂಥಾ ರೀಲ್ಸ್‌ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋದೇ ಹೆಚ್ಚು.

Read Full Story
08:43 PM (IST) Jun 02

India Latest News Live 2 June 2026 ಕಾಂಗ್ರೆಸ್​ನ​ 72 ವರ್ಷಗಳ ದಾಖಲೆ ಮುರಿದು ಬೀಗಿದ ಪ್ರಧಾನಿ ನರೇಂದ್ರ ಮೋದಿ - ಏನಿದು ರೆಕಾರ್ಡ್​

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10 ರಂದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ದಾಖಲೆಯನ್ನು ಮುರಿಯಲಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ, 4,397 ದಿನಗಳ ನೆಹರೂ ಅವರ ನಿರಂತರ ಅಧಿಕಾರಾವಧಿಯನ್ನು ಮೀರಿಸಲಿದ್ದು, ಈ ಮೂಲಕ ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
Read Full Story
08:36 PM (IST) Jun 02

India Latest News Live 2 June 2026 ತಮಿಳುನಾಡಿನಲ್ಲಿ ಮತ್ತೆ ಬಿರುಗಾಳಿ? ವಿಜಯ್ ಸಿಎಂ ಆಗಿರೋ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ರೆಡಿ, ಅಜಿತ್ ಅಲ್ಲ!

ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾ ರಾಜಕೀಯದ ಹೆಬ್ಬಾಗಿಲು ಎನ್ನಬಹುದು. ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ದಳಪತಿ ವಿಜಯ್ ಸಿಎಂ ಆಗಿ ದೊಡ್ಡ ಸಂಚಲನ ಮೂಡಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿಬರುತ್ತಿದೆ.

Read Full Story
08:30 PM (IST) Jun 02

India Latest News Live 2 June 2026 ನಟ ಮಾತ್ರವಲ್ಲ, ಸಂಸ್ಕೃತ ಪಂಡಿತನಂತೆ ಮಾತನಾಡಿದ ಫಿಟ್ನೆಸ್ ಹೀರೋ ವಿದ್ಯುತ್ - ಯೋಗಾತ್ಸವದಲ್ಲಿ ಆಗಿದ್ದೇನು?

ಯೋಗಾತ್ಸವ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್ ಸಂಸ್ಕೃತದಲ್ಲಿ ಮಾತನಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಯೋಗದ ಮಹತ್ವದ ಬಗ್ಗೆ ಮಾತನಾಡುತ್ತಾ, ನಿರರ್ಗಳವಾಗಿ ಸಂಸ್ಕೃತದಲ್ಲಿ ಭಾಷಣ ಮಾಡಿದ್ದು, ಸಭಿಕರಿಂದ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ.

Read Full Story
08:11 PM (IST) Jun 02

India Latest News Live 2 June 2026 ಅಮೆರಿಕದ ಕಠಿಣ ನಿಯಮಗಳಿಂದ ಬೇಸತ್ತು 12 ವರ್ಷಗಳ ಜೀವನ ತೊರೆದು - ಭಾರತಕ್ಕೆ ಮರಳಿದ ಸ್ಟಾರ್ಟ್ಅಪ್ ಸಹ-ಸಂಸ್ಥಾಪಕ!

ಅಮೆರಿಕದ ಸ್ಟಾರ್ಟ್‌ಅಪ್ ಸಹ-ಸಂಸ್ಥಾಪಕ ಕರಣ್ ಪಾಟೀಲ್, 12 ವರ್ಷಗಳ ನಂತರ ವೀಸಾ ನಿಯಮಗಳ ಸಂಕಷ್ಟ ಮತ್ತು ಸ್ವಾತಂತ್ರ್ಯದ ಕೊರತೆಯಿಂದಾಗಿ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರವು 'ರಿವರ್ಸ್ ಬ್ರೈನ್ ಡ್ರೈನ್' ಮತ್ತು ವಲಸಿಗರ ಸವಾಲುಗಳ ಕುರಿತು ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
07:58 PM (IST) Jun 02

India Latest News Live 2 June 2026 Swiggy - ಐಪಿಎಲ್‌ ಸೀಸನ್‌ನಲ್ಲಿ ಕೋಟ್ಯಂತರ ಮೊತ್ತದ ಫುಡ್‌ ತಿಂದು ತೇಗಿದ ಕ್ರಿಕೆಟ್‌ ಫ್ಯಾನ್ಸ್‌!

ಐಪಿಎಲ್ 2026ರ ಅವಧಿಯಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಮತ್ತು ರೆಸ್ಟೋರೆಂಟ್ ಬುಕಿಂಗ್‌ಗಳು ಸಾರ್ವಕಾಲಿಕ ದಾಖಲೆ ಬರೆದಿವೆ. ಸ್ವಿಗ್ಗಿ ವರದಿ ಪ್ರಕಾರ, ಫುಡ್ ಆರ್ಡರ್‌ಗಳು ಶೇ. 32.31ರಷ್ಟು ಮತ್ತು ಡೈನ್‌ಔಟ್ ಬುಕಿಂಗ್‌ಗಳು ಶೇ. 41ರಷ್ಟು ಹೆಚ್ಚಾಗಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳು ಮುಂಚೂಣಿಯಲ್ಲಿದ್ದವು. 

Read Full Story
07:51 PM (IST) Jun 02

India Latest News Live 2 June 2026 ಮಳೆಗಾಲ ಆರಂಭಕ್ಕೂ ಮೊದಲೇ ರೈತರ 2 ಲಕ್ಷ ರೂ ಸಾಲ ಮನ್ನ, ಮಹಾ ಸರ್ಕಾರದಿಂದ ಮಹತ್ವದ ಆದೇಶ

ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೈತರಿಗೆ ನೀಡಿದ್ದ ಸಾಲದಲ್ಲಿ 2 ಲಕ್ಷ ರೂಪಾಯಿ ಮನ್ನಾ ಮಾಡಲು ಮಹಾ ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಬೀಳುತ್ತಿದ್ದಂತೆ ರೈತರ ನಿಟ್ಟುಸಿರು ಬಿಟ್ಟಿದ್ದಾರೆ. ಪರಿಣಾಮ 56 ಲಕ್ಷ ರೈತರಿಗೆ ಅನುಕೂಲವಾಗಲಿದೆ.

Read Full Story
07:13 PM (IST) Jun 02

India Latest News Live 2 June 2026 ಬ್ಯಾಂಕ್‌ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಹಣ ಪಾವತಿಸಿ! ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ

ಭಾರತ್‌ಪೇ ಮತ್ತು ಯೆಸ್ ಬ್ಯಾಂಕ್ ಸಹಯೋಗದಲ್ಲಿ 'ಭಾರತ್‌ಪೇ ಫ್ಲೆಕ್ಸ್' ಎಂಬ ಯುಪಿಐ ಕ್ರೆಡಿಟ್ ಲೈನ್ ಸೌಲಭ್ಯವನ್ನು ಪರಿಚಯಿಸಲಾಗಿದೆ. ಈ ಸೇವೆಯಡಿ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ, ಮಂಜೂರಾದ ಸಾಲದ ಮಿತಿಯನ್ನು ಬಳಸಿ ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡಬಹುದು. ಇದು 45 ದಿನಗಳ ಬಡ್ಡಿ ರಹಿತ ಅವಧಿ ಮತ್ತು ಸುಲಭ ಇಎಂಐ ಆಯ್ಕೆಗಳನ್ನು ನೀಡುತ್ತದೆ.
Read Full Story
07:04 PM (IST) Jun 02

India Latest News Live 2 June 2026 EPFO - ಎರಡು ತಿಂಗಳಾದ್ರೂ ಬರದ ಹಣ, ನಿಮ್ಮ ಖಾತೆಗೆ EPF ಬಡ್ಡಿ ಜಮೆ ಆಗುವುದು ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

2025-26ನೇ ಸಾಲಿನ ಇಪಿಎಫ್ ಬಡ್ಡಿ ದರವನ್ನು ಶೇ. 8.25ಕ್ಕೆ ನಿಗದಿಪಡಿಸಲಾಗಿದ್ದರೂ, ಹಣ ಇನ್ನೂ ಚಂದಾದಾರರ ಖಾತೆಗೆ ಜಮೆಯಾಗಿಲ್ಲ. ಈ ವಿಳಂಬಕ್ಕೆ ಕಾರಣವೇನು, ಇದರಿಂದ ನೌಕರರಿಗೆ ಆರ್ಥಿಕ ನಷ್ಟವಾಗುವುದೇ ಮತ್ತು ಬಡ್ಡಿ ಹಣ ಯಾವಾಗ ಜಮೆಯಾಗಬಹುದು ಎನ್ನುವ ವಿವರ ಇಲ್ಲಿದೆ.

Read Full Story
07:01 PM (IST) Jun 02

India Latest News Live 2 June 2026 ಹಾಲು ಕುಡಿಸಿ ಮಹಿಳೆಯರ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ 29ರ ಧಾರ್ಮಿಕ ಗುರು,12 ವಿಡಿಯೋ ಪತ್ತೆ

ನಾಸಿಕ್ ಗುರು ಅರೆಸ್ಟ್ ಬಳಿಕ ನೂರಾರು ವಿಡಿಯೋ ಪತ್ತೆಯಾಗಿತ್ತು. ಇದೀಗ 29ರ ಹರೆಯದ ಐಟಿಟಿ ಪದವೀಧರ ಧಾರ್ಮಿಕ ಗುರು ಅನ್ನೋ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪತ್ತೆಯಾಗಿದೆ. ಗುರು ಅರೆಸ್ಟ್ ಆಗಿದ್ದು, 12 ವಿಡಿಯೋಗಳು ಪತ್ತೆಯಾಗಿದೆ.

Read Full Story
06:57 PM (IST) Jun 02

India Latest News Live 2 June 2026 'ಪೆದ್ದಿ' ಮೊದ್ಲೇ ಬಂದಿದ್ರೆ ಒಳ್ಳೆ ಸಂಬಂಧ ಬರ್ತಿತ್ತು - ಉಪಾಸನಾ ಜೊತೆ ಮದುವೆ ಬಗ್ಗೆ ರಾಮ್ ಚರಣ್ ಹೀಗಾ ಹೇಳೋದು?

ನಟ ರಾಮ್ ಚರಣ್ ತಮ್ಮ ಮುಂಬರುವ 'ಪೆದ್ದಿ' ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೇಳೆ ಪತ್ನಿ ಉಪಾಸನಾ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು, ಈ ಸಿನಿಮಾ ಮದುವೆಗೂ ಮುನ್ನ ಬಂದಿದ್ದರೆ, ಇನ್ನಷ್ಟು ಒಳ್ಳೆ ಸಂಬಂಧ ಬರುತ್ತಿತ್ತು ಎಂದಿದ್ದಾರೆ.

Read Full Story
06:34 PM (IST) Jun 02

India Latest News Live 2 June 2026 TV Actresses - ಸೀರಿಯಲ್ ಲೋಕದ ಟಾಪ್ 10 ಗ್ಲಾಮರಸ್ ನಟಿಯರು - ಇವರ ಮುಂದೆ ಹೀರೋಯಿನ್‌ಗಳೂ ಫೇಲ್!

ಕಿರುತೆರೆ ನಟಿಯರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ತೆಲುಗು ಪ್ರೇಕ್ಷಕರು ಟಿವಿ ಸೀರಿಯಲ್‌ಗಳನ್ನು ಬಹಳ ಇಷ್ಟಪಡುತ್ತಾರೆ. ಧಾರಾವಾಹಿಗಳಲ್ಲಿ ನಟಿಸುವ ಸುಂದರ ಮತ್ತು ಆಕರ್ಷಕ ನಟಿಯರ ಪಟ್ಟಿ ಇಲ್ಲಿದೆ.

Read Full Story
06:24 PM (IST) Jun 02

India Latest News Live 2 June 2026 ಬರೋಬ್ಬರಿ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಅಣ್ಣಾಮಲೈ!

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಮೂಲಕ 'ದ್ರಾವಿಡ ಮಾದರಿ'ಗೆ ಪರ್ಯಾಯವನ್ನು ಒದಗಿಸಲು ಸಜ್ಜಾಗಿದ್ದಾರೆ.

Read Full Story
06:21 PM (IST) Jun 02

India Latest News Live 2 June 2026 OSM ಪೋರ್ಟಲ್ ಹಗರಣದ ಬೆನ್ನಲ್ಲೇ ಕೇಂದ್ರ ಆಪರೇಷನ್‌ - CBSE ಅಧ್ಯಕ್ಷ, ಕಾರ್ಯದರ್ಶಿ ವರ್ಗಾವಣೆ; ಭ್ರಷ್ಟಾಚಾರದ ಕುರಿತು ತನಿಖೆ

ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

Read Full Story
06:02 PM (IST) Jun 02

India Latest News Live 2 June 2026 ₹35 ಕೇಕ್‌ಗೆ ₹50 ಯಾಕೆ? ವ್ಯಾಪಾರಿ ಕೊಟ್ಟ ಉತ್ತರ ಕೇಳಿ ದಂಗಾದ ಪ್ರಯಾಣಿಕ!

ಟ್ರೈನ್ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಖರೀದಿಸಿದ ಒಂದು ಕೇಕ್ ಪ್ಯಾಕೆಟ್ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 35 ರೂಪಾಯಿ MRP ಇದ್ದ ಕೇಕ್‌ಗೆ ವ್ಯಾಪಾರಿಯೊಬ್ಬ..

Read Full Story
05:48 PM (IST) Jun 02

India Latest News Live 2 June 2026 1.14 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮಾರಾಟ ಮಾಡಿದ್ದೇಕೆ RBI

ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಆರ್ಥಿಕ ಒತ್ತಡವನ್ನು ಎದುರಿಸಲು ಆರ್‌ಬಿಐ ತನ್ನ ಚಿನ್ನದ ನಿಧಿಯ ಒಂದು ಭಾಗವನ್ನು ಮಾರಾಟ ಮಾಡಿದೆ. ಇಂಧನ ವೆಚ್ಚ ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ಮೌಲ್ಯದಂತಹ ಬಾಹ್ಯ ಆಘಾತಗಳಿಂದ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

Read Full Story
05:26 PM (IST) Jun 02

India Latest News Live 2 June 2026 ಸ್ಕಾರ್ಪಿಯೋ, ಥಾರ್ ಅಬ್ಬರಕ್ಕೆ ನಡುಗಿದ ಆಟೋ ಮಾರುಕಟ್ಟೆ - ಖುಷಿಯಿಂದ ಹಿಗ್ಗಿದ ಆನಂದ್‌ ಮಹೀಂದ್ರಾ

ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಯು ಮೇ ತಿಂಗಳಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಶೇಕಡಾ 20 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಎಸ್‌ಯುವಿ ವಿಭಾಗದಲ್ಲಿ 58 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡಿದ್ದು, ವಾಣಿಜ್ಯ ಮತ್ತು ತ್ರಿಚಕ್ರ ವಾಹನಗಳ ವಿಭಾಗದಲ್ಲೂ ಗಣನೀಯ ಪ್ರಗತಿ ಸಾಧಿಸಿದೆ.

Read Full Story
04:53 PM (IST) Jun 02

India Latest News Live 2 June 2026 Snake Droppings - ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌

Snake Droppings: ಹಾವಿನ ಬಗ್ಗೆ ಮಾತನಾಡುತ್ತೇವೆ, ಆದರೆ ಹಾವಿನ ಮಲದ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ನೀವೂ ಊಹಿಸೋಕೂ ಆಗದ ಜಾಗದಲ್ಲಿ ಮಲ ಇರುತ್ತದೆ. ಆ ಮಲ ಸಿಕ್ಕಾಪಟ್ಟೆ ಡೇಂಜರ್. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
04:35 PM (IST) Jun 02

India Latest News Live 2 June 2026 Kissing Scene - ಶಾಹಿದ್-ಟಾಕ್ಸಿಕ್ ಬ್ಯೂಟಿಯ ಬೈಕ್ ಕಿಸ್ ಹಿಂದಿನ ಅಸಲಿ ಕಥೆ - ವೈರಲ್ ವಿಡಿಯೋದಿಂದ ಗುಟ್ಟು ರಟ್ಟು!

ಶಾಹಿದ್ ಕಪೂರ್-ಕಿಯಾರಾ ಅಡ್ವಾಣಿ ನಟನೆಯ 'ಕಬೀರ್ ಸಿಂಗ್' ಸಿನಿಮಾದ ಬೈಕ್ ಕಿಸ್ಸಿಂಗ್ ಸೀನ್ ನೆನಪಿದೆಯಾ? ಆ ಸೀನ್ ಶೂಟ್ ಮಾಡಿದ್ದು ಹೇಗೆ ಅಂತ ಒಂದು ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಅಸಲಿಗೆ ಆ ಕಿಸ್ ನಿಜವಾಗಿತ್ತಾ? ನಕಲಿಯಾ? ಇಲ್ಲಿದೆ ನೋಡಿ ಅಸಲಿ ಕಥೆ.

Read Full Story
04:16 PM (IST) Jun 02

India Latest News Live 2 June 2026 ಟಿ20ಯಲ್ಲಿ ಡಬಲ್ ಸೆಂಚುರಿ ಬಾರಿಸೋ ಮೊದಲ ಆಟಗಾರ ಇವನೇ ನೋಡಿ! ಲಲಿತ್ ಮೋದಿ ಅಚ್ಚರಿ ಭವಿಷ್ಯ

ಲಂಡನ್: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಹೆಚ್ಚು ಗಮನ ಸೆಳೆದಿದ್ದು, ಬಿಹಾರ ಮೂಲದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ. ಈ ಆಟಗಾರನ ಬಗ್ಗೆ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

Read Full Story