- Home
- News
- India News
- India Latest News Live: ಫ್ರಾನ್ಸ್ನಲ್ಲಿ ಆಹಾರ ಭಯೋತ್ಪಾದನೆ! ರೆಫ್ರಿಜರೇಷನ್ ವ್ಯವಸ್ಥೆ ಮೇಲೆ ಸೈಬರ್ ದಾಳಿ
India Latest News Live: ಫ್ರಾನ್ಸ್ನಲ್ಲಿ ಆಹಾರ ಭಯೋತ್ಪಾದನೆ! ರೆಫ್ರಿಜರೇಷನ್ ವ್ಯವಸ್ಥೆ ಮೇಲೆ ಸೈಬರ್ ದಾಳಿ

ಬೀಜಿಂಗ್: ಲಡಾಖ್ನಲ್ಲಿರುವ 28 ಆಯಕಟ್ಟಿನ ಸ್ಥಳಗಳಿಗೆ ಹೆಸರಿಡಲು ಹೊರಟಿರುವ ಭಾರತದ ನಿರ್ಧಾರವನ್ನು ಚೀನಾ ತೀವ್ರವಾಗಿ ವಿರೋಧಿಸಿದ್ದು, ‘ಈ ಪ್ರದೇಶಗಳು ತಮಗೆ ಸೇರಿವೆ’ ಎಂದು ಮೊಂಡಾಟ ಮೆರೆದಿದೆ. ಭಾರತವು ಅಧಿಕೃತ ಮ್ಯಾಪಿಂಗ್ನ ಭಾಗವಾಗಿ ಹೆಸರುಗಳನ್ನು ಇಡಲು ನಿರ್ಧರಿಸಿದ ಬೆನ್ನಲ್ಲೇ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಮಾವೋ ನಿಂಗ್, ‘ಭಾರತವು ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಸ್ಥಾಪಿಸಿದ ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಡುವ ಪ್ರದೇಶವನ್ನು ಚೀನಾ ಎಂದಿಗೂ ಗುರುತಿಸಿಲ್ಲ. ಭಾರತ ಪ್ರಮಾಣಿತ ಹೆಸರುಗಳ ಘೋಷಣೆಯನ್ನು ದೃಢವಾಗಿ ವಿರೋಧಿಸುತ್ತದೆ. ಈ ಕ್ರಮ ಕಾನೂನುಬಾಹಿರ ಮತ್ತು ಅಮಾನ್ಯ. ಚೀನಾ-ಭಾರತ ಗಡಿಯ ಪಶ್ಚಿಮ ವಲಯದಲ್ಲಿನ ಸಂಬಂಧಿತ ಪ್ರದೇಶಗಳು ಯಾವಾಗಲೂ ಚೀನಾಕ್ಕೆ ಸೇರಿವೆ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಸತ್ಯ ಬದಲಾಗಲ್ಲ: ಲಡಾಖ್ ನಮ್ಮ ಭಾಗ ಎಂದ ಚೀನಾಗೆ ಭಾರತ ಖಾರವಾಗಿಯೇ ಪ್ರತಿಕ್ರಿಯಿಸಿದೆ. ‘ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಅಂಗ, ಚೀನಾ ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.