ರಸ್ತೆ ಸಂಪರ್ಕ, ಆರೋಗ್ಯ ಸೌಕರ್ಯಗಳು ಇಲ್ಲದ ದುರ್ಗಮ ಸ್ಥಳಕ್ಕೆ ‘ಮಿನಿ ಆಸ್ಪತ್ರೆ’ ಏರ್‌ಡ್ರಾಪ್‌ ಮಾಡಿದ ಸೇನಾಪಡೆ!

ರಸ್ತೆ ಸಂಪರ್ಕ ಹಾಗೂ ಆರೋಗ್ಯ ಸೌಕರ್ಯಗಳು ಇಲ್ಲದ ದುರ್ಗಮ ಸ್ಥಳಗಳಿಗೆ ಮಿನಿ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ವಿಮಾನದಲ್ಲಿ ಕೊಂಡೊಯ್ದು ಇಳಿಸುವ ವಿಶಿಷ್ಟ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ. 

The army has airdropped a mini hospital to an inaccessible place with no road connection and health facilities gvd

ನವದೆಹಲಿ (ಆ.18): ರಸ್ತೆ ಸಂಪರ್ಕ ಹಾಗೂ ಆರೋಗ್ಯ ಸೌಕರ್ಯಗಳು ಇಲ್ಲದ ದುರ್ಗಮ ಸ್ಥಳಗಳಿಗೆ ಮಿನಿ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ವಿಮಾನದಲ್ಲಿ ಕೊಂಡೊಯ್ದು ಇಳಿಸುವ ವಿಶಿಷ್ಟ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ‘ಆರೋಗ್ಯ ಮೈತ್ರಿ ಹೆಲ್ತ್‌ ಕ್ಯೂಬ್‌’ ಹೆಸರಿನ ಮಿನಿ ಆಸ್ಪತ್ರೆಯನ್ನು ಯುದ್ಧ ವಿಮಾನದಲ್ಲಿ ಒಯ್ದು ದುರ್ಗಮ ಸ್ಥಳದಲ್ಲಿ ಇಳಿಸುವ ಪ್ರಯೋಗ ಯಶಸ್ವಿಯಾಗಿದೆ.

ರಕ್ಷಣಾ ಸಚಿವಾಲಯದ ಸಹಯೋಗದಲ್ಲಿ ವಾಯುಪಡೆ ಮತ್ತು ಸೇನಾಪಡೆಗಳು ಜಂಟಿಯಾಗಿ ಸಮುದ್ರ ಮಟ್ಟದಿಂದ 15000 ಅಡಿ ಎತ್ತರದಲ್ಲಿರುವ ಪರ್ವತ ಪ್ರದೇಶದಲ್ಲಿ ಈ ಪ್ರಯೋಗ ನಡೆಸಿವೆ. ವಾಯುಪಡೆಯ ಸಿ-130ಜೆ ಸೂಪರ್‌ ಹರ್ಕ್ಯುಲಸ್‌ ವಿಮಾನದಲ್ಲಿ ಹೆಲ್ತ್‌ ಕ್ಯೂಬ್‌ ಕೊಂಡೊಯ್ದು ಸ್ಥಳದಲ್ಲಿ ಇಳಿಸಲಾಗಿದೆ.

‘ದುರ್ಗಮ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ತಕ್ಷಣ ಆರೋಗ್ಯ ಸೇವೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಈ ಕ್ಯೂಬ್‌ಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ‘ಭಾರತ್‌ ಹೆಲ್ತ್‌ ಇನಿಶಿಯೇಟಿವ್‌ ಫಾರ್ ಸಹಯೋಗ್‌ ಹಿತಾ ಅಂಡ್‌ ಮೈತ್ರಿ’ ಯೋಜನೆಯ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರಿ ಹುದ್ದೆಗಳಿಗೆ ತಜ್ಞರ ನೇಮಕಾತಿ, ಎಸ್ಟಿ, ಎಸ್ಟಿ ಮೀಸಲು ತಡೆವ ಯತ್ನ: ಮಲ್ಲಿಕಾರ್ಜುನ ಖರ್ಗೆ

ಏನಿದು ಮೈತ್ರಿ ಹೆಲ್ತ್‌ ಕ್ಯೂಬ್‌?: ಆರೋಗ್ಯ ಮೈತ್ರಿ ಹೆಲ್ತ್‌ ಕ್ಯೂಬ್‌ ಎಂಬುದು ದೊಡ್ಡ ಬಾಕ್ಸ್‌ ರೀತಿಯ ಒಂದು ರಚನೆ. ತುರ್ತು ಚಿಕಿತ್ಸೆ ನೀಡಲು ಬೇಕಾದ ವೈದ್ಯಕೀಯ ವ್ಯವಸ್ಥೆ, ಔಷಧಗಳು, ಟೆಂಟ್‌ ಇತ್ಯಾದಿ ಸಕಲ ವ್ಯವಸ್ಥೆಗಳು ಇದರಲ್ಲಿರುತ್ತವೆ. ದುರ್ಗಮ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿ ಎದುರಾದರೆ ವಿಮಾನದಲ್ಲಿ ಈ ಕ್ಯೂಬ್‌ಗಳನ್ನು ಕೊಂಡೊಯ್ದು ಕೆಳಕ್ಕೆ ಇಳಿಸಲಾಗುತ್ತದೆ. ಕ್ಯೂಬ್‌ನಲ್ಲಿ ರೋಗಿ ಅಥವಾ ಸಂತ್ರಸ್ತರನ್ನು ಇರಿಸಿ ಚಿಕಿತ್ಸೆ ನೀಡಬಹುದಾಗಿದೆ.

Latest Videos
Follow Us:
Download App:
  • android
  • ios