30 ಸೆಕೆಂಡ್‌ನಲ್ಲಿ ಕೊರೋನಾ ಪರೀಕ್ಷೆ; ಭಾರತ-ಇಸ್ರೇಲ್ ಜಂಟಿಯಾಗಿ ಕಿಟ್ ಅಭಿವೃದ್ದಿ!
ಕೊರೋನಾ ಟೆಸ್ಟ್ ವರದಿ ಬರಲು ಒಂದು ವಾರ ಕಾಯಬೇಕು. ಈ ವೇಳೆ ಸೋಂಕಿತನಿಂದ ವೈರಸ್ ಮತ್ತಷ್ಟು ಜನರಿಗೆ ಹರಡುತ್ತದೆ ಅನ್ನೋ ಆರೋಪ ಕೇಳುತ್ತಲೇ ಇದೆ. ಇದೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಕೇವಲ 30 ಸೆಕೆಂಡ್‌ಗಳಲ್ಲಿ ಕೊರೋನಾ ವರದಿ ಬರುವ ನೂತನ ಕಿಟ್ ಬರುತ್ತಿದೆ. ಇಸ್ರೇಲ್ ಹಾಗೂ ಭಾರತ ಜಂಟಿಯಾಗಿ ಈ ಟೆಸ್ಟ್ ಕಿಟ್ ಅಭಿವೃದ್ಧಿ ಪಡಿಸುತ್ತಿದೆ.
ನವದೆಹಲಿ(ಜು.24): ಕೊರೋನಾ ವೈರಸ್ ವ್ಯಾಪಕವಾಗಿ ಹರಡು ಪರೀಕ್ಷೆ ಹಾಗೂ ರಿಸಲ್ಟ್ ವಿಳಂಬವಾಗುತ್ತಿರುವುದು ಒಂದು ಕಾರಣವಾಗಿದೆ. ಕೊರೋನಾ ವರದಿ ಬರುವ ವೇಳೆ ಸೋಂಕಿತ ಎಲ್ಲಾ ಕಡೆ ಓಡಾಡಿರುತ್ತಾನೆ. ಈ ಸಮಸ್ಯೆಗೆ ಮುಕ್ತಿ ನೀಡಲು ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಹೊಸ ರ್ಯಾಪಿಡ್ ಕೊರೋನಾ ಟೆಸ್ಟ್ ಕಿಟ್ ಅಭಿವೃದ್ಧಿ ಪಡಿಸುತ್ತಿದೆ.
ಕೊರೋನಾ ಪರೀಕ್ಷೆ ವೇಳೆ ಐಡಿ, ಆಧಾರ್ ಕಡ್ಡಾಯ: ಬಿಎಸ್‌ವೈ
ನೂತನ ಕಿಟ್ ಮೂಲಕ ಕೇವಲ 30 ಸೆಕೆಂಡ್‌ಗಳಲ್ಲಿ ಕೊರೋನಾ ಪರೀಕ್ಷೆ ವರದಿ ಬರಲಿದೆ. ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಈ ಕಿಟ್ ಭಾರತದಲ್ಲಿ ಮೊದಲು ಪ್ರಯೋಗ ನಡೆಯಲಿದೆ. ಪ್ರಯೋಗ ಯಶಸ್ವಿಯಾದ ಬಳಿಕ ಭಾರತದಲ್ಲಿ ಇದರ ಉತ್ಪಾದನೆ ಕಾರ್ಯ ಆರಂಭಗೊಳ್ಳಲಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೆ ಭಾರತದಿಂದ ನೂತನ ಕಿಟ್ ರಫ್ತಾಗಲಿದೆ.
ಕೊರೋನಾ ಟೆಸ್ಟ್‌ಗೆ ನಿಂತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು
ಕೊರೋನಾ ಸೋಂಕು ಪತ್ತೆ ಹಚ್ಚುವ ಕಾರ್ಯ ವಿಳಂಬವಾಗುತ್ತಿರುವುದ ಸೋಂಕು ಮತ್ತಷ್ಟು ಹರಡಲು ಕಾರಣವಾಗುತ್ತಿದೆ. ಹೀಗಾಗಿ ತ್ವರಿತಗತಿಯ ಟೆಸ್ಟಿಂಗ್ ಅವಶ್ಯಕತೆ ಇದೆ. ಇದಕ್ಕಾಗಿ ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಪರೀಕ್ಷಾ ಸಲಕರಣೆ ಅಭಿವೃದ್ಧಿ ಪಡಿಸುತ್ತಿದೆ. ಈ ಪರೀಕ್ಷಾ ಸಲಕಣೆ ಮೂಲಕ ಕೇವಲ 30 ಸೆಕೆಂಡ್‌ಗಳಲ್ಲಿ ವರದಿ ಬರಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಸಂಶೋಧನಾ ವಿಭಾಗ ಹೇಳಿದೆ.
ಭಾರತದ ಸಂಶೋಧಕರು, ಇಸ್ರೇಲ್ ವಿಜ್ಞಾನಿಗಳು ಹಾಗೂ ಇಸ್ರೇಲ್ ತಂತ್ರಜ್ಞಾನ ಬಳಸಿಕೊಂಡು ಈ ರ್ಯಾಪಿಡ್ ಟೆಸ್ಟ್ ಕಿಟ್ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೊರೋನಾ ವೈರಸ್ ಎಲ್ಲಾ ದೇಶಗಳಲ್ಲಿ ಮರಣ ಮೃದಂಗ ಭಾರಿಸಲು ಆರಂಭಿಸಿದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಈ ಕುರಿತು ಚರ್ಚಿಸಿದ್ದರು. ಇಷ್ಟೇ ಜಂಟಿಯಾಗಿ ಟೆಸ್ಟ್ ಕಿಟ್ ಅಭಿವೃದ್ಧಿ ಪಡಿಸಲು ಒಪ್ಪಿದ್ದರು.