ಚೀನಾದಲ್ಲಿ ಎಚ್‌ಎಂಪಿವಿ ಹೆಚ್ಚಳ: ಆತಂಕ ಬೇಡ, ಸೋಂಕು ಎದುರಿಸಲು ಸಜ್ಜು, ಭಾರತ

ಎಚ್‌ಎಂಪಿವಿ ವೈರಸ್‌ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿಜ್ವರ ಉಂಟುಮಾಡಬಹುದು. ದೇಶದಲ್ಲಿ 2024ರ ಡಿಸೆಂಬರ್‌ನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿಲ್ಲ. 

India is ready to Face with HMPV Virus grg

ನವದೆಹಲಿ(ಜ.04): ಚೀನಾದಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾದ ಬೆನ್ನಲ್ಲೇ ಭಾರತದಲ್ಲೂ ಉಸಿರಾಟ ಸಂಬಂಧಿ (ಇನ್ ಪ್ಲಾಯೆನಾ) ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಸದ್ಯಕ್ಕೆ ದೇಶದಲ್ಲಿ ಆತಂಕಪಡಬೇಕಾದ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಅಭಯ ನೀಡಿದೆ. ಈ ಕುರಿತು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್‌ ಗೋಯಲ್‌ ಪ್ರತಿಕ್ರಿಯೆ ನೀಡಿದ್ದಾರೆ.

'ಎಚ್‌ಎಂಪಿವಿ ವೈರಸ್‌ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿಜ್ವರ ಉಂಟುಮಾಡಬಹುದು. ದೇಶದಲ್ಲಿ 2024ರ ಡಿಸೆಂಬರ್‌ನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಅಪಾಯ ಕಾರಿ ಯಾಗಿಲ್ಲ. ಒಂದೊಮ್ಮೆ ಸಮಸ್ಯೆ ಸಮಸ್ಯೆ ಉಲ್ಬಣಿಸಿದರೂ ನಮ್ಮ ಆಸ್ಪತ್ರೆ ಗಳಲ್ಲಿ ಅದಕ್ಕೆ ಬೇಕಾದಷ್ಟು ವ್ಯವಸ್ಥೆಗಳು ಲಭ್ಯವಿದೆ' ಎಂಬ ಮಾಹಿತಿ ನೀಡಿದ್ದಾರೆ. ಜತೆಗೆ, ಸೋಂಕು ತಗುಲದಂತೆ ಮುನ್ನಚ್ಚರಿಕೆ ವಹಿ ಸಲು ಸಲಹೆ ನೀಡಿದ್ದಾರೆ. 

ಚೀನಾ ಬಳಿಕ ಹಾಂಕಾಂಗ್‌, ಜಪಾನ್‌ಗೂ ವೈರಸ್‌ ಲಗ್ಗೆ: ಹೆಚ್ಚಾದ ಆತಂಕ

ಇದೇ ವೇಳೆ, ಚೀನಾದಲ್ಲಿ ಇನ್‌ಫ್ಲುಯೆ ನ್ಹಾ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂಥ ಶೀತಜ್ವರ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನಿಗಾ ವಹಿಸಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ದಲ್ಲಿದೆ. ಜತೆಗೆ, ಈ ಕುರಿತ ಮಾಹಿತಿ ನಿಯಮಿತವಾಗಿ ಪರಿಶೀಲಿಸಿ ನವೀಕರಿಸುತ್ತಿದೆ ಎಂದಿದ್ದಾರೆ. 

ವಿಶ್ವದಾದ್ಯಂತ ಮತ್ತೊಂದು ಎಚ್‌ಎಂಪಿವಿ ವೈರಸ್ ಆತಂಕ: 

ಇಡೀ ವಿಶ್ವವನ್ನೇ ಸ್ತಬ್ಧಬಾಗಿಸಿದ್ದ ಕೊರೋನಾ ಸೋಂಕಿನ ಕರಾಳ ಪರಿಣಾಮಗಳು ಇನ್ನೂ ಮಾಸದೇ ಇರುವಾಗಲೇ, ಚೀನಾದಲ್ಲಿ ಎಚ್‌ಎಂಪಿವಿ (ಹ್ಯೂಮನ್‌ ಮೆಟಾನ್ಯೂಮೋವೈರಸ್‌) ವೈರಸ್ ವ್ಯಾಪಕವಾಗಿ ಹಬ್ಬಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕೋವಿಡ್‌ ವಿಷಯದಲ್ಲಿ ರಹಸ್ಯವಾಗಿ ನಡೆದುಕೊಂಡಂತೆ ಈಗಲೂ ಚೀನಾ ಮುಗುಮ್ಮಾಗಿರುವುದು ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಚೀನಾದಲ್ಲಿ ಇದೀಗ ಏನಾಗ್ತಿದೆ?: 
ಚೀನಾದ ಹಲವು ಭಾಗಗಳಲ್ಲಿ ಎಚ್‌ಎಂಪಿವಿ ಸೋಂಕು ವ್ಯಾಪಕವಾಗಿ ಹಬ್ಬಿದೆ. ಈ ಉಸಿರಾಟ ಸಂಬಂಧಿ ಸಮಸ್ಯೆಯಿಂದಾಗಿ ಸಾವಿರಾರು ಪ್ರಮಾಣದಲ್ಲಿ ಜನರು ಆಸ್ಪತ್ರೆಗೆ ದಾಂಗುಡಿ ಇಡುತ್ತಿದ್ದಾರೆ. ಪರಿಣಾಮ ಆಸ್ಪತ್ರೆಗಳೆಲ್ಲಾ ತುಂಬಿ ತುಳಕುತ್ತಿವೆ. ಭಾರೀ ಪ್ರಮಾಣದಲ್ಲಿ ಸಾವು ಕೂಡಾ ಸಂಭವಿಸಿದೆ. ಹೀಗಾಗಿ ಶವಾಗಾರ ಮತ್ತು ಸ್ಮಶಾನಗಳು ಕೂಡಾ ತುಂಬಿ ತುಳುಕುತ್ತಿವೆ ಸೋಂಕು ನಿಗ್ರಹದ ನಿಟ್ಟಿನಲ್ಲಿ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ. ಕೊರೋನಾ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆ ಮತ್ತೆ ನಿರ್ಮಾಣವಾಗುವುದನ್ನು ತಡೆಯಲು ಸೂಕ್ತ ಮಾರ್ಗಸೂಚಿ ರಚಿಸಲು ಸಿದ್ಧತೆ ನಡೆಯುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಯೋಗಯು ಎಚ್‌ಎಂಪಿವಿ ಸೋಂಕಿನ ವರದಿ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಏಜೆನ್ಸಿ ಸ್ಥಾಪಿಸಲು ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಸೋಂಕು ಹರಡುವಿಕೆ, ಲಕ್ಷಣ, ಚಿಕಿತ್ಸೆ: ಎಚ್‌ಎಂಪಿವಿ ಸೋಂಕು ಅತಿ ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರು ಹಾಗೂ ರೋಗನಿರೋಧಕ ಶಕ್ತಿಯ ಕೊರತೆ ಇರುವವರನ್ನು ಬಾಧಿಸುವಂತಹದ್ದಾಗಿದೆ. ಕೆಮ್ಮುವಾಗ ಅಥವಾ ಸೀನುವಾಗ ಹೊರಬರುವ ಕಣಗಳಿಂದ ಈ ಸೊಂಕು ಹರಡುತ್ತದೆ. ಸೋಂಕಿತರ ಸಂಪರ್ಕಕ್ಕೆ ಬರುವುದರಿಂದ ಹಾಗೂ ಕಲುಷಿತ ವಾತಾವರಣಕ್ಕೆ ತೆರೆದುಕೊಳ್ಳುವುದರಿಂದಲೂ ಎಚ್‌ಎಂಪಿವಿ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. ಕೆಮ್ಮು, ಶೀತ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟದಲ್ಲಿ ತೊಂದರೆ ಸೇರಿದಂತೆ ಕೊರೋನಾದ ಸೌಮ್ಯ ಲಕ್ಷಣಗಳು ಲಕ್ಷಣಗಳು ಎಚ್‌ಎಂಪಿವಿ ಸೋಂಕಿತರಲ್ಲಿ ಕಂಡುಬರುತ್ತವೆ. ಎಚ್‌ಎಂಪಿವಿ ಸೋಂಕಿಗೆ ಸದ್ಯ ಯಾವುದೇ ಲಸಿಕೆ ಇಲ್ಲ.

ಕೊವಿಡ್‌ಗಿಂತ ಅಪಾಯಕಾರಿನಾ ಚೀನಾದ ಹೊಸ ವೈರಸ್? ತಡೆಗಟ್ಟೋದು ಹೇಗೆ?

ಮೊದಲು ಕಾಣಿಸಿಕೊಂಡಿದ್ದು ಎಲ್ಲಿ?:

2001ರಲ್ಲಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಮೊದಲ ಬಾರಿಗೆ ಡಚ್‌ ಸಂಶೋಧಕರು ಎಚ್‌ಎಂಪಿವಿ ಸೋಂಕನ್ನು ಪತ್ತೆ ಮಾಡಿದ್ದರು. ಅಧ್ಯಯನಗಳ ಪ್ರಕಾರ ಈ ಸೋಂಕು ಕಳೆದ 60 ವರ್ಷಗಳಿಂದ ಅಸ್ತಿತ್ವದಲ್ಲಿದೆ. 2023ರಲ್ಲಿ ಇದು ನೆದರ್ಲೆಂಡ್‌, ಬ್ರಿಟನ್‌, ಫಿನ್ಲೆಂಡ್‌, ಆಸ್ಟ್ರೇಲಿಯಾ, ಕೆನಡಾ, ಅಮೆರಿಕದಲ್ಲಿ ಕಾಣಿಸಿಕೊಂಡಿತ್ತು.

ಕೋವಿಡ್‌ ಬಂದಾಗ ಏನಾಗಿತ್ತು: 2019ರಲ್ಲಿ ಚೀನಾದ ಲ್ಯಾಬ್‌ ಒಂದರಿಂದ ಸೋರಿಕೆಯಾದ ಕೊರೋನಾ ಸೋಂಕು ನೋಡನೋಡುತ್ತಿದ್ದಂತೆ ವಿಶ್ವಾದ್ಯಂತ ವ್ಯಾಪಿಸಿತ್ತು. ಅಷ್ಟಾಗಿಯೂ ಚೀನಾ ಸರ್ಕಾರ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದ್ದು, ಜನಜೀವನ ಸ್ತಬ್ಧವಾಗಿತ್ತು, ಇದರಿಂದ ಆರ್ಥಿಕತೆಗೂ ಬಲವಾದ ಪೆಟ್ಟು ಬಿದ್ದಿತ್ತು. ವಿಶ್ವದ ಬಹುತೇಕ ದೇಶಗಳ 70 ಕೋಟಿಗೂ ಹೆಚ್ಚು ಜನರಿಗೆ ಸೋಂಕು ಹಬ್ಬಿ, 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 3 ವರ್ಷಗಳ ಕಾಲ ಸೋಂಕು ಇಡೀ ಜಗತ್ತನ್ನು ಕಾಡಿತ್ತು.

Latest Videos
Follow Us:
Download App:
  • android
  • ios