Health
ಕೊವಿಡ್ ಬಳಿಕ ಇದೀಗ ಚೀನಾದಲ್ಲಿ ಪತ್ತೆಯಾದ ವೈರಸ್ ಜಗತ್ತನ್ನ ಮತ್ತೊಮ್ಮೆ ಆತಂಕಕ್ಕೆ ತಳ್ಳಿದೆ. ಈ ಬಗ್ಗೆ ಹಲವು ದೇಶಗಳು ಈಗಾಗಲೇ ಪ್ರತಿಕ್ರಿಯಿಸಿವೆ. ವೈರಸ್ಸಿನಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುದು ತಿಳಿಯೋಣ.
ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋವೈರಸ್ (ಎಚ್‌ಎಂಪಿವಿ) ವೇಗವಾಗಿ ಹರಡುತ್ತಿದೆ ಎಂದು ವರದಿಗಳು ಬಂದಿವೆ. ಅಲ್ಲದೇ ಕೊವಿಡ್‌ಗಿಂತ ವೇಗವಾಗಿ ಹರಡುವುದು ಆತಂಕ ಮೂಡಿಸಿದೆ.
ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸೋಂಕು ಎಚ್‌ಎಂಪಿವಿ. ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಈ ವೈರಸ್ ಹೆಚ್ಚಾಗಿ ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
2001 ರಲ್ಲಿ ಎಚ್‌ಎಂಪಿವಿ ವೈರಸ್ ಮೊದಲ ಬಾರಿಗೆ ಪತ್ತೆಯಾಯಿತು. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇವುಗಳ ಪ್ರಮುಖ ಲಕ್ಷಣಗಳು. ಎಚ್‌ಎಂಪಿವಿ ತಡೆಗಟ್ಟಲು ಏನು ಮಾಡಬೇಕು?
ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆಯಿರಿ. ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
ಸೀನುವಾಗ ಮತ್ತು ಕೆಮ್ಮುವಾಗ ಟವಲ್ ಬಳಸಿ.
ಜ್ವರ, ಶೀತ, ಸೀನುವುದು ಇತ್ಯಾದಿ ಇರುವವರಿಂದ ದೂರವಿರಿ.
ಹೊರಗೆ ಹೋಗುವಾಗ ಮಾಸ್ಕ್ ಧರಿಸಿ. ಮಾಸ್ಕ್ ಧರಿಸಿದ ನಂತರ ಮಾತ್ರ ಮಾತನಾಡಿ.
ಕಣ್ಣು, ಮೂಗು ಅಥವಾ ಬಾಯಿ ಮುಟ್ಟುವುದನ್ನು ತಪ್ಪಿಸಿ.
ಜ್ವರ, ನಿರಂತರ ಕೆಮ್ಮು, ಸೀನುವುದು, ಶೀತ ಇತ್ಯಾದಿ ಇರುವವರು ಆಹಾರವನ್ನು ಇತರರೊಂದಿಗೆ ಹಂಚಿಕೊಳ್ಳಬಾರದು.