Asianet Suvarna News Asianet Suvarna News

ಮಲಿನ ಗಾಳಿಗೆ ದೇಶದಲ್ಲಿ ವರ್ಷಕ್ಕೆ 21 ಲಕ್ಷ ಜನ ಬಲಿ: ಹೊರಾಂಗಣ ಮಾಲಿನ್ಯದಲ್ಲಿ ಭಾರತ ನಂ.2

ವಿಶ್ವದಲ್ಲೇ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಕುಖ್ಯಾತಿಗೆ ರಾಷ್ಟ್ರರಾಜಧಾನಿ ದೆಹಲಿ ಪಾತ್ರವಾದ ಬೆನ್ನಲ್ಲೇ, ಎಲ್ಲ ಬಗೆಯ ಹೊರಾಂಗಣ ವಾಯುಮಾಲಿನ್ಯವು ಭಾರತದಲ್ಲಿ ಪ್ರತಿವರ್ಷ 21.8 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

India is No. 2 in outdoor pollution Dirty air kills 21 lakh people every year in India akb
Author
First Published Dec 1, 2023, 9:52 AM IST

ನವದೆಹಲಿ: ವಿಶ್ವದಲ್ಲೇ ಅತ್ಯಂತ ಕಳಪೆ ವಾಯುಗುಣಮಟ್ಟ ಹೊಂದಿರುವ ನಗರ ಎಂಬ ಕುಖ್ಯಾತಿಗೆ ರಾಷ್ಟ್ರರಾಜಧಾನಿ ದೆಹಲಿ ಪಾತ್ರವಾದ ಬೆನ್ನಲ್ಲೇ, ಎಲ್ಲ ಬಗೆಯ ಹೊರಾಂಗಣ ವಾಯುಮಾಲಿನ್ಯವು ಭಾರತದಲ್ಲಿ ಪ್ರತಿವರ್ಷ 21.8 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಜೊತೆಗೆ ವಾಯುಮಾಲಿನ್ಯದಿಂದ ಹೆಚ್ಚು ಸಾವು ಸಂಭವಿಸುವ ರಾಷ್ಟ್ರಗಳ ಪೈಕಿ ಚೀನಾದ (24.4 ಲಕ್ಷ) ಬಳಿಕ ಭಾರತ 2ನೇ ಸ್ಥಾನದಲ್ಲಿದೆ ಎಂದು ವಿಶ್ವದ ಪುರಾತನ ವೈದ್ಯ ಜರ್ನಲ್‌ಗಳಲ್ಲಿ ಒಂದಾಗಿರುವ ಬ್ರಿಟನ್‌ ಮೂಲದ ಬಿಎಂಜೆ ಪ್ರಕಟಿಸಿರುವ ಅಧ್ಯಯನ ವರದಿ ಹೇಳಿದೆ.

ಜೊತೆಗೆ ಕೈಗಾರಿಕೆ, ವಿದ್ಯುತ್ ಉತ್ಪಾದನೆ ಮತ್ತು ಸಾರಿಗೆಯಲ್ಲಿ ಪಳೆಯುಳಿಕೆ (ಫಾಸಿಲ್‌) ಇಂಧನಗಳನ್ನು ಬಳಸುವುದರಿಂದ ಉಂಟಾಗುವ ವಾಯು ಮಾಲಿನ್ಯವು ವಿಶ್ವಾದ್ಯಂತ ವಾರ್ಷಿಕ 51 ಲಕ್ಷ ಹೆಚ್ಚುವರಿ ಸಾವುಗಳಿಗೆ ಕಾರಣವಾಗುತ್ತಿದೆ. ಇದು 2019ರಲ್ಲಿ ಪ್ರಪಂಚಾದ್ಯಂತ ಎಲ್ಲ ಮೂಲದ ಹೊರಾಂಗಣ ವಾಯುಮಾಲಿನ್ಯದಿಂದ ಸಂಭವಿಸಿದ 83 ಲಕ್ಷ ಸಾವುಗಳ ಪ್ರಮಾಣದ ಶೇ.61ರಷ್ಟಕ್ಕೆ ಸಮನಾಗಿದೆ ಎಂದು ವರದಿ ಹೇಳಿದೆ.

ತ್ಯಾಜ್ಯ ಸುಡುವ ರೈತರಿಗೆ ಬಿತ್ತನೆ ಬೀಜ ಕೊಡಬೇಡಿ, ಎಂಎಸ್‌ಪಿ ಸ್ಥಗಿತ ಮಾಡಿ: ಕೋರ್ಟ್

ಅಂದರೆ ಜಗತ್ತಿನಲ್ಲಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳ ಬಳಕೆಯಿಂದ ವಾಯುಮಾಲಿನ್ಯದ ಪ್ರಮಾಣದ ಹೆಚ್ಚಾಗುತ್ತಿದೆ ಹಾಗೂ ಇದು ದಿನೇ ದಿನೇ ಹೆಚ್ಚಿನ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ. ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನಕ್ಕೆ ಸಂಬಂಧಿಸಿದ ಸಾವು ಸಂಭವಿಸುತ್ತಿವೆ. ಹೀಗಾಗಿ, ಪಳೆಉಳಿಕೆ ಇಂಧನವನ್ನು ತೊಡೆದು ಹಾಕಬೇಕಾಗಿದೆ ಎಂದು ಹೇಳಿದೆ.

ದಿಲ್ಲಿ ಭೀಕರ ವಾಯುಮಾಲಿನ್ಯಕ್ಕೆ ಕೊಡಗಿನ ಕಾಫಿ ಉದ್ಯಮಿ ಬಲಿ

Follow Us:
Download App:
  • android
  • ios