Asianet Suvarna News Asianet Suvarna News

ರಷ್ಯಾದಿಂದ ತೈಲ ಖರೀದಿ ಮೂಲಕ ಭಾರತ ಉಕ್ರೇನ್‌ ರಕ್ತವನ್ನೇ ಕೊಳ್ಳುತ್ತಿದೆ: ಉಕ್ರೇನ್‌ ವಿದೇಶಾಂಗ ಸಚಿವ

ರಷ್ಯಾದಿಂದ ಭಾರತ ರಿಯಾಯಿತಿ ದರದಲ್ಲಿ ಇಂಧನವನ್ನು ಖರೀದಿಸುತ್ತಿರುವುದಕ್ಕೆ ಉಕ್ರೇನ್‌ ಟೀಕೆ ಮಾಡಿದೆ. ಅಲ್ಲದೆ, ಇದು ಉಕ್ರೇನಿಯರ ರಕ್ತವನ್ನೇ ಕೊಂಡುಕೊಂದಂತೆ ಎಂದೂ ಅವರು ಹೇಳಿದ್ದಾರೆ. 

india is buying ukranian blood by purchasing russian crude oil foreign minister ash
Author
Bangalore, First Published Aug 17, 2022, 7:56 PM IST

ಭಾರತದ ವಿರುದ್ಧ ಉಕ್ರೇನ್‌ ಸರ್ಕಾರ ಕಿಡಿ ಕಾರಿದೆ. ನಾವು ರಷ್ಯಾ ಸೇನೆ ವಿರುದ್ಧ ಹೋರಾಡುತ್ತಿರುವಾಗ ಭಾರತ ದೇಶದಿಂದ ಹೆಚ್ಚು ಪ್ರಾಯೋಗಿಕ ನೆರವನ್ನು ನಿರೀಕ್ಷಿಸಿದ್ದೆವು ಎಂದೂ ಉಕ್ರೇನ್‌ ವಿದೇಶಾಂಗ ಸಚಿವ  ಡಿಮಿಟ್ರೋ ಕುಲೇಬಾ ಬುಧವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್‌ ಸಚಿವರು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಉಕ್ರೇನ್ ಭಾರತದ ವಿಶ್ವಾಸಾರ್ಹ ಪಾಲುದಾರರಾಗಿದೆ. ಆದರೆ, ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ಭಾರತವು ಉಕ್ರೇನಿಯರ ರಕ್ತವನ್ನು ಖರೀದಿಸುತ್ತಿದೆ ಎಂದು ವರ್ಚುಯಲ್‌ ಆಗಿ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ. ಭಾರತವು ತನ್ನ ಆರ್ಥಿಕತೆಗೆ ಇಂಧನ ಪೂರೈಕೆಯನ್ನು ಸ್ಥಿರಗೊಳಿಸಲು ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದನ್ನು ಮುಂದುವರೆಸುತ್ತಿರುವುದರಿಂದ ಉಕ್ರೇನ್‌ ಈ ಆರೋಪ ಮಾಡಿದೆ.

ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌
 
“ಭಾರತವು ರಷ್ಯಾದ ಕಚ್ಚಾ ತೈಲವನ್ನು [ರಿಯಾಯಿತಿಯಲ್ಲಿ] ಖರೀದಿಸಿದಾಗ, ಈ ರಿಯಾಯಿತಿಯನ್ನು ಉಕ್ರೇನ್‌ ಜನರ ರಕ್ತದಿಂದ ಪಾವತಿಸಬೇಕು ಎಂದು ಅವರು ಅರ್ಥಮಾಡಿಕೊಳ್ಳಬೇಕು. ಭಾರತಕ್ಕೆ ಸಿಗುವ ರಷ್ಯಾದ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ನಲ್ಲಿ ಉಕ್ರೇನಿಯರ ರಕ್ತದ ಭಾಗವಿದೆ. ನಾವು ಸ್ನೇಹಪರರು ಮತ್ತು ಭಾರತಕ್ಕೆ ಮುಕ್ತರಾಗಿದ್ದೇವೆ. ನಾನು ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆಯನ್ನು ಬೆಂಬಲಿಸಿದೆ. ಭಾರತದಿಂದ ಉಕ್ರೇನ್‌ಗೆ ಹೆಚ್ಚಿನ ಪ್ರಾಯೋಗಿಕ ಬೆಂಬಲವನ್ನು ನಾವು ನಿರೀಕ್ಷಿಸಿದ್ದೇವೆ,” ಎಂದು ಉಕ್ರೇನ್‌ ವಿದೇಶಾಂಗ ಸಚಿವ ಕುಲೇಬಾ ಹೇಳಿದರು. 
 
ಅವರು ಭಾರತ ಮತ್ತು ಉಕ್ರೇನ್ ಅನ್ನು  ಹೋಲಿಕೆಗಳನ್ನು ಹೊಂದಿರುವ 2 ಪ್ರಜಾಪ್ರಭುತ್ವಗಳು ಎಂದು ಉಲ್ಲೇಖಿಸಿದ್ದು, ಈ ಹಿನ್ನೆಲೆ ಈ ಎರಡು ಪ್ರಜಾಪ್ರಭುತ್ವಗಳು ಪರಸ್ಪರ ಬೆಂಬಲಕ್ಕೆ ನಿಲ್ಲಬೇಕು ಎಂದೂ ಹೇಳಿದ್ದಾರೆ. ಈ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ತೈಲ ಮತ್ತು ಅನಿಲ ಬೆಲೆಗಳು "ಅಸಮಂಜಸವಾಗಿ ಹೆಚ್ಚು" ಎಂದು ಹೇಳಿದ್ದರು ಮತ್ತು ಉಕ್ರೇನ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಸವಾಲಾಗಿ ಮಾರ್ಪಟ್ಟಿರುವ ಹೆಚ್ಚಿನ ಇಂಧನ ಬೆಲೆಗಳನ್ನು ಪರಿಹರಿಸಲು ಪ್ರತಿ ದೇಶವು ಪ್ರಯತ್ನಿಸುವ ಪರಿಸ್ಥಿತಿಯನ್ನು ಎದುರಿಸಲು ಏಷ್ಯಾದ ಸಾಂಪ್ರದಾಯಿಕ ಇಂಧನ ಪೂರೈಕೆದಾರರು ಯುರೋಪ್‌ಗೆ "ಮಾರ್ಗಾಂತರ" ಮಾಡುತ್ತಿದ್ದಾರೆ ಎಂದಿದ್ದರು.
 
ನಾವು ಅದನ್ನು ರಕ್ಷಣಾತ್ಮಕ ರೀತಿಯಲ್ಲಿ ಮಾಡುತ್ತಿಲ್ಲ. ನಮ್ಮ ಆಸಕ್ತಿಯ ಬಗ್ಗೆ ನಾವು ತುಂಬಾ ಮುಕ್ತ ಮತ್ತು ಪ್ರಾಮಾಣಿಕರಾಗಿದ್ದೇವೆ. ನಾನು 2,000 ಡಾಲರ್‌ ತಲಾ ಆದಾಯ ಹೊಂದಿರುವ ದೇಶವನ್ನು ಹೊಂದಿದ್ದೇನೆ. ಇವರು ಹೆಚ್ಚಿನ ಇಂಧನ ಬೆಲೆಗಳನ್ನು ನಿಭಾಯಿಸುವ ಜನರಲ್ಲ. ಪ್ರಪಂಚದಿಂದ ನಾನು ಪಡೆಯುವ ಅತ್ಯುತ್ತಮ ವ್ಯವಹಾರವನ್ನು ಅವರಿಗೆ ನೀಡುವುದು ನನ್ನ ಬಾಧ್ಯತೆಯಾಗಿದೆ, ನೈತಿಕ ಕರ್ತವ್ಯವಾಗಿದೆ. ಅಲ್ಲದೆ, ರಷ್ಯಾ ಸೇರಿದಂತೆ ಅನೇಕ ದೇಶಗಳಿಂದ ಇಂಧನವನ್ನು ಪಡೆಯುವಲ್ಲಿ ಭಾರತವು "ಬುದ್ಧಿವಂತ" ವಾಗಿರಲು ಪ್ರಯತ್ನಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ವಿವರಿಸಿದ್ದರು ಮತ್ತು ಭಾರತದ ಸ್ಥಾನವನ್ನು "ನೇರ" ಎಂದು ಪ್ರಸ್ತುತಪಡಿಸಿದ್ದಾರೆ. ಜಗತ್ತು ಅದನ್ನು ವಾಸ್ತವವೆಂದು ಒಪ್ಪಿಕೊಳ್ಳುತ್ತದೆ ಎಂಬುದು ನನ್ನ ಭಾವನೆಯಾಗಿದೆ ಎಂದೂ ಜೈಶಂಕರ್‌ ಹೇಳಿದ್ದರು. 

Russia-Ukraine War: ಅತಂತ್ರರಾದ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಮಠ
 
ರಷ್ಯಾದಿಂದ ಇಂಧನ ಖರೀದಿ ಮುಂದುವರಿಕೆ ಆಶ್ಚರ್ಯ ತಂದಿಲ್ಲ
ಇನ್ನೊಂದೆಡೆ, ರಷ್ಯಾದಿಂದ ಇಂಧನ ಖರೀದಿಯನ್ನು ಮುಂದುವರಿಸುವ ಭಾರತದ ನಿರ್ಧಾರವು ಉಕ್ರೇನ್‌ ಸರ್ಕಾರಕ್ಕೆ "ಆಶ್ಚರ್ಯ" ತಂದಿಲ್ಲ ಎಂದು ಉಕ್ರೇನ್‌ ವಿದೇಶಾಂಗ ಸಚಿವರು ಒಪ್ಪಿಕೊಂಡರು. ಆದರೆ ಉಕ್ರೇನ್‌ನಲ್ಲಿನ ಯುದ್ಧವು ಇಂಧನ ವ್ಯಾಪಾರದಿಂದ ಹಣವನ್ನು ಗಳಿಸುವ ಅವಕಾಶವನ್ನು ರಷ್ಯಾಕ್ಕೆ ಒದಗಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ. 
ಅಲ್ಲದೆ, "ಮಾನವ ಇತಿಹಾಸದುದ್ದಕ್ಕೂ, ಪ್ರತಿ ಸಂಘರ್ಷದಲ್ಲಿ, ಪ್ರತಿ ಯುದ್ಧದಲ್ಲಿ, ಯುದ್ಧದಿಂದ ಬಳಲುತ್ತಿರುವವರು ಇದ್ದಾರೆ ಮತ್ತು ಹಣ ಮಾಡುವವರು ಇದ್ದಾರೆ" ಎಂದು ರಷ್ಯಾದಿಂದ ಭಾರತಕ್ಕೆ ನಿರಂತರ ಇಂಧನ ಮಾರಾಟವನ್ನು ಉಲ್ಲೇಖಿಸಿ ಉಕ್ರೇನ್‌ ವಿದೇಶಾಂಗ ಸಚಿವರು ಹೇಳಿದ್ದಾರೆ.

Follow Us:
Download App:
  • android
  • ios